ಲೇಖಕ ಎಸ್ಕೆ.ಕೊನೆಸಾಗರ ಅವರ ಕಾದಂಬರಿ ನುಡಿಬಿಂಬ. ಈ ಕೃತಿಗೆ ಜಗದೀಶ ಕೆಂಗನಾಳ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ನುಡಿಬಿಂಬದಲ್ಲಿ ತನ್ನ ಸುತ್ತಲಿನ ಸಾಧಕರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಗೆಳೆಯ ಕೊನೆಸಾಗರ ಶ್ರಮ ಸಾರ್ಥಕವಾಗಿದೆ. ಏನಾದರೊಂದು ಹೊಸ ಹೊಳಹುಗಳಲ್ಲಿ ಅವರು ಸದಾ ಧ್ಯಾನಿಸುತ್ತಿರುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಈ ವರೆಗಿನ ಬರವಣಿಗೆಯನ್ನು ಗಮನಿಸಬಹುದು. ತಾವಲ್ಲದೇ ತಮ್ಮೊಂದಿಗೆ ಅನೇಕರು ಬರವಣಿಗೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ. ಅದು ಅವರ ಸ್ನೇಹಗುಣಕ್ಕೆ ಉದಾಹರಣೆ ಎನ್ನಬಹುದು. ಮನಗುಂದದಂತಹ ಅಪ್ಪಟ ದೇಶೀ ನೆಲದಲ್ಲಿ ಬೆಳೆದು ಬೆಳಕಾದ ಅನೇಕ ಸಾಧಕರ ಚಿತ್ರವನ್ನು ತುಂಬಾ ಸೋದಾರಣವಾಗಿ ಬರೆದಿದ್ದಾರೆ. ಅಧ್ಯಯನಶೀಲರಿಗೆ ಈ ಕೃತಿ ಒಂದು ಆಕರವೂ ಆಗಬಲ್ಲದು. ವ್ಯಕ್ತಿ ಚಿತ್ರಗಳೊಂದಿಗೆ ಒಂದಿಷ್ಟು ವೈಚಾರಿಕ ಲೇಖನಗಳು ಮತ್ತು ಒಂದು ಕೃತಿ ವಿಮರ್ಶೆ ಇಲ್ಲಿವೆ. ತುಂಬಾ ಸರಳವಾದ ನಿರೂಪಣೆ ಧಾಟೆಯಲ್ಲಿ ಲೇಖನಗಳು ಮೂಡಿಬಂದಿವೆ. ಇವು ಆಯಾ ಸಂದರ್ಭಕ್ಕೆ ಬರೆದಿದ್ದರಿಂದ ಕಾಲದ ಅಗತ್ಯವನ್ನು ಬಯಸುತ್ತವೆ; ಅದು ಅನಿವಾರ್ಯವೂ ಕೂಡ, ಇವರ ಈ ನುಡಿಬಂಬ ಸಮಕಾಲೀನ ಕನ್ನಡಕ್ಕೆ ಈ ನೆಲದ ಇತಿಹಾಸದ ಪ್ರತಿಬಿಂಬವೂ ಆಗಬಹುದು ಎಂಬುದಾಗಿ ಹೇಳಿದ್ದಾರೆ.
ಸಂಗಪ್ಪ ಕಲ್ಲಪ್ಪ ಕೊನೆಸಾಗರ 01-08-1964 ರಂದು ಕಲ್ಲಪ್ಪ ಹಾಗೂ ಪರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಹುನಗುಂದ ಮತ್ತು ಬನ್ನಿಹಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪ್ರೌಢ, ಪಿಯುಸಿ ಮತ್ತು ಬಿ.ಎ ಶಿಕ್ಷಣವನ್ನು ಹುನಗುಂದ ವಿ.ಎಂ ಹೈಸ್ಕೂಲ್ ಹಾಗೂ ವಿ.ಎಂ ಕಾಲೇಜಿನಲ್ಲಿ ನಡೆಸಿದರು. ಬಿಇಡಿ ಎಸ್.ಆರ್.ಕಂಠಿ ಬಿಇಡಿ ಕಾಲೇಜು ಇಳಕಲ್ಲ, ಸ್ನಾತಕೋತ್ತರ ಪದವಿಯನ್ನು(ಬಾಹ್ಯವಾಗಿ) ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧನಶಾಸ್ತ್ರ ಕವಿವಿ ಧಾರವಾಡದಲ್ಲಿ ಮಾಡಿದರು. 1996ರಿಂದ ಪ್ರಾಥಮಿಕ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ ಅವರು ಮುಖ್ಯೋಪಾಧ್ಯಾಯನಾಗಿಯೂ ಸೇವೆ ಸಲ್ಲಿಸಿ, ಸದ್ಯ ಹುನಗುಂದ ವಿದ್ಯಾನಗರ ಶಾಲೆಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಲ್ಲಿ ...
READ MORE