ಲೋಕವೇ ತಾನಾದ ಬಳಿಕ

Author : ಮುಮ್ತಾಜ್ ಬೇಗಂ, ಗಂಗಾವತಿ

Pages 128

₹ 130.00
Year of Publication: 2022
Published by: ಜೀವನ ಪಬ್ಲಿಕೇಷನ್
Address: ಜೀವನ ನಿಲಯ, ಶ್ರೀಸಾಯಿಬಾಬ ನಗರ, ಉಳಿದಗ್ಗಿ,ಎಚ್.ನಂ.45, ಮೊದಲನೇ ಮುಖ್ಯರಸ್ತೆ, ವಡ್ಡರಹಟ್ಟಿ- 583235 ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ
Phone: 9986666075

Synopsys

ಮುಮ್ತಾಜ್ ಬೇಗಂ, ಗಂಗಾವತಿ ಅವರ ಲೇಖನ ಸಂಕಲನ ಲೋಕವೇ ತಾನಾದ ಬಳಿಕ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸುವುದಿದೆಯಲ್ಲ ಅದುವೇ ನಿಜವಾದ ಅರ್ಥದಲ್ಲಿ ಲೋಕವಾಗುವುದು. ಹೆಣ್ಣಿನ ನಿರ್ವಚನ ದೇಹ ಭಾಷೆಯಲ್ಲಿ ಮುಂದುವರೆದಿರುವ ಕಾಲ ಸಂದರ್ಭದಲ್ಲಿ, ಹೆಣ್ಣನ್ನು ಜೈವಿಕ ಘಟಕವಾಗಿ ಪರಿಭಾವಿಸುವ ಕ್ರಮ ಇನ್ನೂ ಸಾಮಾಜಿಕ ಘಟಕವಾಗಿ ಬದಲಾಗಬೇಕಾದ ಅಗತ್ಯದ ಬಗೆಗೆ ಲೇಖನಗಳು ಧ್ವನಿಯನ್ನು ಎತ್ತುತ್ತವೆ. ವರ್ತಮಾನದ ಸಂಘರ್ಷದಲ್ಲಿ ಮಹಿಳೆಗೆ ಇರಬಹುದಾದ ವ್ಯಾಪ್ತಿ ಮತ್ತು ಮಿತಿಗಳ ನೆಲೆಯಲ್ಲಿ ಹೆಣ್ಣಿನ ಬಹುಮುಖಿ ಅಸ್ತಿತ್ವದ, ಅಸ್ಮಿತೆಯ ಹುಡುಕಾಟದ ನಿರಂತರತೆಯನ್ನು ಅಭಿವ್ಯಕ್ತಿಸುತ್ತವೆ.

About the Author

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.  ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...

READ MORE

Related Books