ಪಂಜೆ ಮಂಗೇಶರಾಯರ ಅಪ್ರಕಟಿತ ಬರಹಗಳು

Author : ವರದಾ ಶ್ರೀನಿವಾಸ

Pages 304

₹ 295.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004 0
Phone: 080 - 2661 7100 / 2661 7755

Synopsys

‘ಪಂಜೆ ಮಂಗೇಶರಾಯರ ಅಪ್ರಕಟಿತ ಬರಹಗಳು’ ಕೃತಿಯನ್ನು ಲೇಖಕಿ ವರದಾ ಶ್ರೀನಿವಾಸ ಅವರು ಸಂಪಾದಿಸಿದ್ದಾರೆ. ಪಂಜೆ ಮಂಗೇಶರಾಯರು ಕನ್ನಡಕ್ಕೆ ಅನೇಕ ಹೊಸದುಗಳನ್ನು ಕಾಣಿಕೆಯಾಗಿ ಕೊಟ್ಟವರು. ಸುತ್ತಿನ ತುಳು, ಕೊಂಕಣಿ, ಕೊಡವ ಭಾಷಿಕ ಸಂಸ್ಕೃತಿಯನ್ನು ಕನ್ನಡದೊಂದಿಗೆ ಒಂದಾಗಿಸಿದವರು. ಶಾಲೆಗಳಲ್ಲಿ ಬಾಲಕರನ್ನು ಕುಣಿಸಿ, ತಾವೂ ಕುಣಿದು ಅವರ ಮನಸ್ಸನ್ನು ಅರಳಿಸಿದವರು. ಅವರಿಗಾಗಿ ಹಾಡು, ಕತೆ ಬರೆದವರು. ಸೃಜನಶೀಲತೆಯ ಜೊತೆಗೆ ಶಾಸ್ತ್ರ ಪಾಂಡಿತ್ಯವನ್ನು ಮೈಗೂಡಿಸಿಕೊಂಡವರು. ಆಧುನಿಕ ಶಿಕ್ಷಣಕ್ಕೆ ಪ್ರವೇಶವಾಗಿ ಇಂಗ್ಲಿಷ್ - ಕನ್ನಡ ನಿಘಂಟು, ಕನ್ನಡ ಮೂಲ ವ್ಯಾಕರಣ, ಶಬ್ದಮಣಿ ದರ್ಪಣ - ಕೇಶಿರಾಜಕೃತ ವ್ಯಾಕರಣದ ಪರಿಷ್ಕತ ಸಂಪಾದನೆಯನ್ನು ರೂಪಿಸಿದರು.

ತಮ್ಮ ಕಾಲದ ಆಯ್ದ ಕವನಗಳ ಸಂಕಲನಗಳನ್ನು - “ಕನ್ನಡ ಮೊದಲನೆಯ ಪದ್ಯಪುಸ್ತಕ (1912), 'ಕನ್ನಡ ಎರಡನೆಯ ಪದ್ಯ ಪುಸ್ತಕ' (1919) ಹಾಗೂ ಕನ್ನಡ ಮೂರನೆಯ ಪದ್ಯ ಪುಸ್ತಕ' (1920) ಗಳನ್ನು - ಪಠ್ಯ ಪುಸ್ತಕಗಳ ರೂಪದಲ್ಲಿ ಹೆಣೆದುಕೊಟ್ಟವರು. ಪಂಜೆ ಮಂಗೇಶರಾಯರು ಕನ್ನಡ ನವೋದಯದ ಮಹಾಬೆಳಗು ಎನ್ನುವುದು ಒಂದು ರೂಪಕ. ಹತ್ತೊಂಬತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಅರ್ಧದ ಕಾಲಾವಧಿಯಲ್ಲಿ ಈ ಮಹಾಬೆಳಗು ಕನ್ನಡ ಸಾಹಿತ್ಯ ರಂಗವನ್ನು ಬೆಳಗಿಸಿತು. ಈ ಮಹಾಪರ್ವದ ಮೊದಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು. ಅವರ ಹಲವು ಅಪ್ರಕಟಿತ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿರುವ ಮಹತ್ವದ ಕೃತಿ ಇದು.

About the Author

ವರದಾ ಶ್ರೀನಿವಾಸ

ವರದಾ ಶ್ರೀನಿವಾಸ್, ಎಂ.ಎ., ಪಿಎಚ್.ಡಿ., ಹಿಂದಿ(ಪ್ರವೀಣ) ಸಂಸ್ಕೃತ ವಿಶಾರದ ಭಾಷಾಂತರಕಾರರು. ಕರ್ನಾಟಕ ಕಾನೂನು ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನಿಸಿದ್ದು 28-07-1950, ಕಾಸರಗೋಡಿನಲ್ಲಿ.  ತಂದೆ  ವಿ.ಕೆ. ನಾರಾಯಣ, ತಾಯಿ -ಕೆ. ಸುಂದರಿ. ಕೃತಿಗಳು : ಸಮ್ಮೇಲ (ವಿಮರ್ಶೆ) 1982, ಸಂಕಿರಣ (ಲೇಖನಗಳು) 1990, ಮಹಿಳೆ - ವೈಚಾರಿಕತೆ ಮತ್ತು ವಿಮರ್ಶೆ 1991, ಮಕ್ಕಳ ಸಾಹಿತ್ಯಕ್ಕೆ ಡಾ ಶಿವರಾಮ ಕಾರಂತರ ಕೊಡುಗೆ - 1994, ಸ್ಮರಣೆ ಸೊಗಸು - 2000. ಕವನ ಸಂಕಲನ : ಮುಂಜಾವದ ಕನಸುಗಳು 1993, ಕನಸು ಮತ್ತು ವಾಸ್ತವಗಳ ನಡುವೆ 1998 ಮಕ್ಕಳ ಸಾಹಿತ್ಯ ...

READ MORE

Related Books