ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು

Author : ನಾಗತಿಹಳ್ಳಿ ಚಂದ್ರಶೇಖರ್‌

Pages 228

₹ 230.00




Year of Publication: 2021
Published by: ಅಭಿವ್ಯಕ್ತಿ ಸಂಸ್ಕೃತಿಕ ವೇದಿಕೆ

Synopsys

ಚಿತ್ರನಿರ್ದೇಶಕ, ಕಥಗಾರ, ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರ  ‘ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು’  ಕೃತಿಯು ತಮ್ಮ ಸಿನಿಮಾಗಳಿಗೆ ಹಾಗೂ ಬೇರೆಯವರ ಸಿನಿಮಾಗಳಿಗೆ ಬರೆದ ಗೀತೆಗಳ ಸಂಕಲನ. ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಕಾರಣಗಳಿಂದ ಬರೆದ ಕೆಲವು ಗೀತೆಗಳೂ ಇಲ್ಲಿವೆ. ಬರೀ ಗೀತೆಗಳ ಸಂಕಲನವಾಗಿದ್ದರೆ, ಇದು ಸಿನಿಮಾ ಹಾಡಿನ ಪುಸ್ತಕಗಳ ಸಾಲಿಗೆ ಸೇರಿರುತ್ತಿತ್ತು. ಆದರೆ ಹಾಡಿಗೆ ಸಂಬಮಧಿಸಿದ ವಿವರ-ವಿಶೇಷಗಳ ಟಿಪ್ಪಣಿಯೂ ಇರುವುದು ಈ ಕೃತಿಗೆ ವಿಭಿನ್ನ ಮೆರೆಗು ತಂದಿದೆ. ಕವಿತೆ ಬರೆಯುವುದು ಹೇಗೆ ಎಂದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಕಮ್ಮಟ ಮಾಡಿದಂತೆ, ಸಿನಿಮಾ ಸಾಹಿತಿಗಳಿಗೆ ಚಿತ್ರಗೀತೆಗಳನ್ನು ಬರೆಯುವುದು ಹೇಗೆ ಎಂಬುದರ ಬಗ್ಗೆ ಸುಲಭ ಹಾಗೂ ಸರಳ ಮಾಹಿತಿ ಈ ಕೃತಿಯಿಂದ ಲಭ್ಯವಿದೆ. 

About the Author

ನಾಗತಿಹಳ್ಳಿ ಚಂದ್ರಶೇಖರ್‌
(15 August 1958)

ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...

READ MORE

Related Books