ಬಸವ ಚಳುವಳಿಯ ಫಲಿತಗಳು

Author : ಗಿರೀಶ್ ಮೂಗ್ತಿಹಳ್ಳಿ

Pages 80

₹ 56.00




Year of Publication: 2014
Published by: ಮನಿ ಪ್ರಕಾಶನ
Address: #2, 2ನೇ ಕ್ರಾಸ್, 3ನೇ ಪ್ಲೋರ್, ರೂಮ್ ನಂ. 1, ನಾಗಪ್ಪ ಸ್ಟ್ರೀಟ್, ಪ್ಯಾಲೇಸ್ ಗುಟ್ಟನಹಳ್ಳಿ ಬೆಂಗಳೂರು-03
Phone: 9686535465

Synopsys

‘ಬಸವ ಚಳುವಳಿಯ ಫಲಿತಗಳು’ ಕೃತಿಯು ಗಿರೀಶ್ ಎಂ. ವಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೃತಿಯ ಕೆಲವೊಂದು ವಿಚಾರಗಳು ಹೀಗೆ ಬಿತ್ತರಿಸಿಕೊಂಡಿವೆ; ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯ ವಚನ ಸಾಹಿತ್ಯದ ಕಾಲಘಟ್ಟ ಮಹತ್ವದ್ದು. ಸಮಾಜವನ್ನು ಶ್ರೇಣೀಕೃತ ವ್ಯವಸ್ಥೆಯೊಳಗಡೆ ಮುಳುಗಿಸಿಟ್ಟಂತಹ ಕಾಲದಲ್ಲಿ ಬಂದ ವಚನ ಸಾಹಿತ್ಯ ಸನಾತನ ಸಂಪ್ರದಾಯಗಳನ್ನು ಮುರಿದು ಹೊಸ ಚಿಂತನೆಯೊಂದಿಗೆ ಹೊಸ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿತು. ವಚನಕಾರರು ತಮ್ಮದೇ ಆದ ವ್ಯಕ್ತಿನಿಷ್ಠ ನೆಲೆಯೊಳಗಡೆ ನಿಂತುಕೊಂಡು ಸಮಷ್ಟಿಯ ಕಡೆಗೆ ತಮ್ಮ ಆಲೋಚನೆಯನ್ನು ವಿಸ್ತರಿಸಿಕೊಂಡರು. ಈ ಮುಖೇನ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದರು. ಸಾಮಾನ್ಯವಾಗಿ ವಚನ ಸಾಹಿತ್ಯ ಎಂದಾಗ ಥಟ್ಟನೆ ನೆನಪಾಗುವುದು ಬಸವಣ್ಣ. ಇವರು ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಸಂಕೀರ್ಣತೆಯೊಳಗಡೆ ಸಮಷ್ಟಿಪ್ರಜ್ಞೆಯಲ್ಲಿ ಒಂದಷ್ಟು ಸಾಮಾಜಿಕ ಪಲ್ಲಟವನ್ನುಂಟು ಮಾಡಿದರು. ಸನಾತನ ಹೆಸರಿನಲ್ಲಿಯೆ ಸಮಾಜ ಮುಂದುವರಿಯುವಾಗ ಅಲ್ಲಿಯ ವ್ಯವಸ್ಥೆಯನ್ನು, ಶೋಷಣೆಯುಕ್ತ ಬದುಕನ್ನು ಪ್ರಶ್ನಿಸುತ್ತಲೇ ಹೊಸ ಸಮಾಜದ ಸೃಷ್ಟಿಗೆ ಶ್ರಮಿಸಿದ ಬಸವಣ್ಣನು ನಮಗೆ ಅಘೋಷಿತ ನಾಯಕನಾಗಿ ಕಂಡುಬರುತ್ತಾನೆ’ ಎಂದಿದೆ.

ಈ ಕೃತಿಯ ಪ್ರವೇಶಿಕೆಗಳು : ಬಸವಣ್ಣನ ಕುರಿತ ನಾಟಕಗಳ ಪರಿಚಯ; ಸಂಕ್ರಾಂತಿ, ಮಹಾಚೈತ್ರ, ತಲೆದಂಡ. ಇತರರೊಂದಿಗೆ ಬಸವಣ್ಣ; ಬಸವಣ್ಣ ಮತ್ತು ದಲಿತರು, ಬಸವಣ್ಣ ಮತ್ತು ಬಿಜ್ಜಳ, ಬಸವಣ್ಣ ಮತ್ತು ಬ್ರಾಹ್ಮಣರು. ಬಸವಣ್ಣ ಮತ್ತು ಸಾಮಾಜಿಕ ಸುಧಾರಣೆಗಳು; ಮಹಾ ಮನೆ ಮತ್ತು ಅದರ ಸ್ಥಿತಿಗತಿ, ಅಂತರ್ಜಾತಿ ವಿವಾಹ, ಶೂದ್ರತ್ವದಿಂದ ಶರಣತ್ವದೆಡೆಗೆ. ಬಸವ ಚಳುವಳಿಯ ಫಲಿತಕ್ಕೆ ಮತ್ತೊಂದು ಸಾಕ್ಷಿಯಾಗಿ ‘ಕರಾಳ ರಾತ್ರಿ’. ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ. ಉಪಸಂಹಾರ, ಒಳಗೊಂಡಿವೆ.

About the Author

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ. ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ) ...

READ MORE

Related Books