ಹೊನ್ನ ದೀಪ

Author : ಅರುಣಕುಮಾರ್ ಎಸ್. ಆರ್.

Pages 454

₹ 400.00




Year of Publication: 2010
Published by: ಭುವನೇಂದ್ರ ಕಾಲೇಜು
Address: ಕಾರ್ಕಳ, ಉಡುಪಿ ಜಿಲ್ಲೆ.

Synopsys

ಕಾರ್ಕಳದ ಭುವನೇಂದ್ರ ಕಾಲೇಜು ಸುವರ್ಣ ಮಹೋತ್ಸವ ಅಂಗವಾಗಿ ರಚಿತವಾದ ಕೃತಿ 'ಹೊನ್ನದೀಪ'. ಕಾರ್ಕಳದ ಇತಿಹಾಸ, ಯುವಜನರಲ್ಲಿ ಅಧ್ಯಾತ್ಮಿಕ ಅರಿವು, ಉನ್ನತ ಶಿಕ್ಷಣದ ಸವಾಲುಗಳು, ಸಾಹಿತ್ಯ : ಪ್ರಸ್ತುತತೆ ಮತ್ತು ಅವೈಯಕ್ತಿಕತೆ, ಸಾಹಿತ್ಯದ ಅಭಿರುಚಿ ಮತ್ತು ವಿದ್ಯಾರ್ಥಿಗಳು, ಮಹಿಳೆ ಮತ್ತು ಸಮಕಾಲೀನ ಸಮಾಜ, ಯಕ್ಷಗಾನದಲ್ಲಿ ಬದಲಾವಣೆ, ಕಿಸೆಯಲ್ಲಿ ಸಿನಿಮಾ ತಟ್ಟೆ, ಸಂಸ್ಕೃತಃ ನಿನ್ನೆ - ಇಂದು - ನಾಳೆ, ತುಳು ಲಿಪಿ, ತುಳುಭಾಷೆ - ಒಂದು ವಿವೇಚನೆ, ತುಟಿಲ್, ತುಡು, ತುಳು - ಒಂದು ಜಿಜ್ಞಾಸೆ, ತುಳು ಭಾಷೆ ಮತ್ತು ಪರಿಸರ, ಯುವಜನತೆ ಮತ್ತು ಜಾನಪದ ಜಗತ್ತು, ಕಾರ್ಕಳದ ಮಂಗಳಪಾದೆಯಿಂದ ಧರ್ಮಸ್ಥಳದ ರತ್ನಗಿರಿಯವರೆಗೆ, ಚೆನ್ನಾಗಿ ಬದುಕಿ, ದೇಶವನ್ನು ಬೆಳೆಸಿ, ವಿದ್ಯಾದೇಗುಲಕ್ಕೆ ನುಡಿನಮನ, ಪರಮ ಶ್ರೇಷ್ಠ ಪ್ರಾಚಾರ, ಮಾತೆಯ ಮಡಿಲಲ್ಲಿ, ಸಾವಿರದ ನೆನಪು, ನೆನಪಿನಚ್ಚುಗಳು, ನೆವುದೆನ್ನ ಮನಂ, ನೆನಪಿನ ಬುತ್ತಿ, ನೆನಪಿನ ದೋಣಿಯಲ್ಲಿ ಪಯಣ, ಮುಂತಾದ ವಿಷಯಗಳ ಬಗ್ಗೆ ವಿವಿಧ ಲೇಖಕರು ಬರೆದ ಲೇಖನಗಳ ಸಂಗ್ರಹವಾಗಿದೆ. ಅರುಣ್‌ ಕುಮಾರ್‌ ಎಸ್.ಆರ್‌. ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books