ಉದಾರಚರಿತರು ಉದಾತ್ತಪ್ರಸಂಗಗಳು

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 224

₹ 200.00




Year of Publication: 2020
Published by: ಕಾಮಧೇನು ಪ್ರಕಾಶನ
Address: ಪುಸ್ತಕ ಭವನ ನಂ. 5, ನಾಗಪ್ಪ ಸ್ಪೀಟ್, ಶೇಷಾದ್ರಿಪುರ, ಬೆಂಗಳೂರು-560 020

Synopsys

“ಉದಾರಚರಿತರು ಉದಾತ್ತಪ್ರಸಂಗಗಳು' ಕೃತಿ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ರಚಿಸಿದ್ದಾರೆ. “ಈ ಸಂಕಲನದಲ್ಲಿಯ ಪ್ರಸಂಗಗಳಿಗೆ ಕಾರಣರಾದ ವ್ಯಕ್ತಿಗಳೆಲ್ಲ ಮಹನೀಯರು; ಇವರಲ್ಲಿ ಹಲವರು ಪರಿಚಿತರು, ಪ್ರಸಿದ್ದರು; ಕೆಲವರು ಅಪರಿಚಿತರು, ಅಪ್ರಸಿದ್ದರು, ಇಲ್ಲಿ ವ್ಯಕ್ತಿಗಳ ವಯಸ್ಸು ವಿದ್ಯೆ ಸ್ಥಾನ ಸಾಧನೆ ಖ್ಯಾತಿ ಇಂತಹವುಗಳಿಗಿಂತ ಉದಾತ್ತ ಮಾನವೀಯ ಮೌಲ್ಯಗಳಿಗೆ ಪ್ರಾಶಸ್ತ್ಯ ದೊರೆತಿರುವ ಪ್ರಸಂಗಗಳೇ ಮುಖ್ಯವಾದವು. ಈ ಮೌಲ್ಯಗಳು ಪ್ರೀತಿ ವಿಶ್ವಾಸಗಳು, ಭಕ್ತಿ ವಾತ್ಸಲ್ಯಗಳು, ಶೀಲ ಶಿಸ್ತುಗಳು, ಪರಾನುಕಂಪ, ಕಷ್ಟಸಹಿಷ್ಣುತೆ, ಧರ್ಮಸಾಮರಸ್ಯ, ಸಹಾಯಬುದ್ದಿ, ಸಭ್ಯತೆ, ಸಾತ್ವಿಕತೆ, ಸ್ನೇಹಪರತೆ, ಪ್ರಸನ್ನತೆ, ಸಂಯಮ, ಗುರು ಹಿರಿಯರಲ್ಲಿ ವಿನಯ ವಿಧೇಯತೆಗಳು, ಕಾಲನಿಷ್ಠೆ, ಸಾಮಾಜಿಕ ತತ್ವಬದ್ದತೆ, ನಿರ್ಮೋಹಿತ್ವ, ಇಚ್ಛಾನುಸಂಧಾನ, ಐಹಿಕ ಸುಖಲಾಲಸೆಗಳ ಜಿಜ್ಞಾಸೆ, ವಿರಕ್ತಿ, ಆತ್ಮನಿಗ್ರಹ, ಪರೋಪಕಾರ ಹೀಗೆ ಹಲವು ಮುಖಗಳಲ್ಲಿ ಪ್ರಕಟವಾಗಿವೆ.

ಈ ಮುಖಗಳಲ್ಲಿ ಯಾವುದೊಂದನ್ನಾಗಲಿ ಹಲವನ್ನಾಗಲಿ, ಏಕಕಾಲದಲ್ಲಿ ಆಗಲಿ ಬೇರೆಬೇರೆ ಸಂದರ್ಭಗಳಲ್ಲಿ ಆಗಲಿ ಬೆಳಗಿದ್ದಾರೆ-ಗುಣಸಂಪನ್ನರಾದ ಮಹನೀಯರು ಅವರ ನಡೆ ನುಡಿಗಳನ್ನು ಪರಿಚಯ ಮಾಡಿಕೊಡುವುದೇ ಈ ಪುಸ್ತಕದ ಆಶಯ .

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books