ಅಭಿವೃದ್ದಿಯ ಅನೇಕಾಂತವಾದ

Author : ಉದಯ ಕುಮಾರ ಇರ್ವತ್ತೂರು

Pages 50




Year of Publication: 2012
Published by: ಪ್ರಸರಾಂಗ, ತುಮಕೂರು ವಿಶ್ವವಿದ್ಯಾನಿಲಯ
Address: ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು- 572101

Synopsys

ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ಕೃತಿ ʻಅಭಿವೃದ್ದಿಯ ಅನೇಕಾಂತವಾದʼʼ. ಅಭಿವೃದ್ಧಿಯನ್ನು ಏಕ ಶಿಲಾ ರೂಪವಾಗಿ ನೋಡುವ ಬದಲಿಗೆ, ಸಾಮಾಜಿಕ, ರಾಜಕೀಯ, ಐತಿಹಾಸಿಕ, ಸಾಂಸ್ಕೃತಿಕ, ಹೀಗೆ ವಿಭಿನ್ನ ನೆಲೆಗಳಿಂದ ಅರ್ಥೈಸಲು ಪ್ರಯತ್ನಿಸಿದಾಗ ಅಭಿವೃದ್ಧಿಯು ವಿವಿಧರೂಪಗಳಲ್ಲಿ ಮತ್ತು ಹಲವು ಬಗೆಯಲ್ಲಿ ನಮ್ಮ ತಿಳಿವಿಗೆ ದಕ್ಕಲು ಸಾಧ್ಯವಿದೆ ಎನ್ನುವುದನ್ನು ಈ ಕೃತಿ ಹೇಳಲು ಪ್ರಯತ್ನಿಸಿದೆ. ಜೈನ ಧರ್ಮದ ಅನೇಕಾಂತ ತತ್ವದ ಆಧಾರದ ಮೇಲೆ ಅಭಿವೃದ್ಧಿಯ ಹೊಸ ನುಡಿಗಟ್ಟನ್ನು ಕಟ್ಟುವ ಪ್ರಯತ್ನವೂ ಇಲ್ಲಿ ನಡೆದಿದೆ.  

About the Author

ಉದಯ ಕುಮಾರ ಇರ್ವತ್ತೂರು
(01 June 1960)

ಡಾ. ಉದಯ ಕುಮಾರ್‌ ಇರ್ವತ್ತೂರು ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ತಂದೆ ನೇಮಿರಾಜ್‌ ಹಾಗೂ ತಾಯಿ ಮಾಲತಿ. ಮಂಗಳೂರಿನ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ಈವರೆಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು; ವಾಣಿಜ್ಯ ಶಾಸ್ತ್ರ,- ಕನ್ನಡ ವಿಶ್ವವಿದ್ಯಾಲಯ ಹಂಪಿ, ಅಭಿವೃದ್ಧಿ: ವಾಸ್ತವ ಮತ್ತು ವಿಕಲ್ಪ, ಉಡುಪಿ ಜಿಲ್ಲೆ, ಸರ್ವೋದಯ ಮತ್ತು ಅಭಿವೃದ್ದಿ, ಗೆಲುವಿನ ದುಃಖ ಮತ್ತು ಸೋಲಿನ ಸುಃಖ ಇತ್ಯಾದಿ. ...

READ MORE

Related Books