ಧೃತಿಗೆಡದ ಹೆಜ್ಜೆಗಳು

Author : ಶೋಭಾ ರಾವ್

Pages 170

₹ 150.00




Year of Publication: 2022
Published by: ಧೃತಿ ಮಹಿಳಾ ಮಾರುಕಟ್ಟೆ
Address: ನಂ. 890, 10ಎ ಕ್ರಾಸ್, ಅರ್.ಬಿ.ಐ ಬಡಾವಣೆ, ಜೆಪಿ ನಗರ, 7 ನೇ ಹಂತ ಬಿಗ್ ಬಝಾರ್ ಹತ್ತಿರ, ಸಂಗೀತಾ ಮೊಬೈಲ್ ರಸ್ತೆ, ಬೆಂಗಳೂರು- 560078

Synopsys

ಲೇಖಕಿ ಶೋಭಾ ರಾವ್‌ ಅವರ ಕೃತಿ ʻಧೃತಿಗೆಡದ ಹೆಜ್ಜೆಗಳುʼ ಬದುಕೊಂದು ಶುರುವಾಗಿದೆʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಶ್ರೀ ಪಡ್ರೆ ಅವರು, “ಉತ್ತರ ಕನ್ನಡ ಜಿಲ್ಲೆಯ ನನ್ನ ಸಂಪರ್ಕ ದಶಕಗಳದು, ನಿಧಾನಪ್ರಿಯ, ಮುಜುಗರವೇ ಮೈವೆತ್ತ ಚಿಪ್ಪಿನೊಳಗೆ ಅವಿತುಕೊಳ್ಳುವ ಮಂದಿ ಅಲ್ಲಿನವರು. ಅಂಥವರೆಡೆಯ ಗೃಹಿಣಿಯರನ್ನೂ 'ಧತಿ' ಆನ್ಲೈನ್ ಮಾರ್ಕೆಟಿಂಗ್ ಕ್ಷೇತ್ರ ಅರಳಿಸಿದೆ, ಕೈಹಿಡಿದು, ಹುಮ್ಮಸಿನ ಆಮ್ಲಜನಕ ತುಂಬಿ, ಉಪವೃತ್ತಿಯ ಏಣಿಯನ್ನೇರಿಸಿದೆ. “ಎರಡು ವರ್ಷದ ಹಿಂದೆ ಏನೂ ಗೊತ್ತಿಲ್ಲದ ಮಹಾನ್ ಕನಸೂ ಇಲ್ಲದ ನಾನು ಉದ್ಯಮಿಯಾಗಿ ಬೆಳೆಯುತ್ತಿರುವ ಪರಿ ಅಚ್ಚರಿದಾಯಕ." ಶಿರಸಿಯ ವಸುಂಧರಾ ಹೆಗಡೆಯವರ ಈ ಮಾತು ಅವರದು ಮಾತ್ರವಲ್ಲ, ಅವರಂಥ ಎಲ್ಲರದೂ. ಕೊರೋನಾ ಸಂಕಟದ ಮೂಸೆಯ ಕೂಸಿದು. ಬದುಕಿನ ಕೈಮರ, ಕಂಗಳಿಗೆ ಕಾಣಿಸದ ನವಮಾಧ್ಯಮ ಮಾರುಕಟ್ಟೆ ವೇದಿಕೆ. ಈಗ ಅದರ ಸಾಧನೆ ಎಲ್ಲರಿಗೂ ಕಾಣಿಸುವಂಥದ್ದು. ಈ ವಿಶಾಲ ಹೃದಯಿಗಳ ಸಂಪರ್ಕವಾಗದಿದ್ದರೆ, ಇಂಥ ಫಲಾನುಭವಿಗಳೆಲ್ಲಾ ಕತ್ತಲಲ್ಲೇ ಇರುತ್ತಿದ್ದರು. ಶ್ರೀದೇವಿ ಅವರ ಕತೆ ಓದಿ, ಒತ್ತು ಶ್ಯಾವಿಗೆಯಿಂದ ಹುಣಿಸೆ ಹಣ್ಣಿಗೆ ಅಲ್ಲಿಂದ ಶ್ರೀನಿವಾಸಪುರ ಮಾವಿನತ್ತ. ವೈಶಾಲಿ ಸಿಲ್ಕ್ ನೂಲಿನ ಆಭರಣ ಮಾರತೊಡಗಿದವರು ಅಮ್ಮ ಧರಿಸಿದ ಇಳಕಲ್ ಸೀರೆಯತ್ತ ತಲೆ ಓಡಿಸಿ, ಅದರ ಮಾರುಕಟ್ಟೆಯಲ್ಲಿ ಗೆದ್ದ ಕತೆ ಓದಿ, ಇವರೆಲ್ಲಾ ಗುಂಪಿನಲ್ಲಿ ಗುರುತಿಸಲಾಗದ ಹೆಣ್ಮಕ್ಕಳು, ಎರಡೇ ವರ್ಷದಲ್ಲಿ ಎಂಥಾ ಸಾಧನೆಯ ಮುಗುಳ್ಳಗೆ! ಕುಟುಂಬದ ಆದಾಯಕ್ಕೆ ಹೆಮ್ಮೆಯಿಂದ ತಮ್ಮದನ್ನೂ ಸೇರಿಸುತ್ತಾ ಪ್ರತ್ಯೇಕ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ಧೃತಿ ತಂಡ. ಅದು ಈ ಮಹಿಳೆಯರಿಗೇ ಅರಿತಿರದ, ಅವರ ಸುಪ್ತ ಮಾರ್ಕೆಟಿಂಗ್ ಸಾಮರ್ಥ್ಯವನ್ನು ಉದ್ದೀಪನಗೊಳಿಸಿದೆ” ಎಂದು ಹೇಳಿದ್ದಾರೆ.

About the Author

ಶೋಭಾ ರಾವ್

ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಚಿಕ್ಕಂದಿನಿಂದ ಓದುವ, ಬರೆಯುವ ಹವ್ಯಾಸ. ಕನ್ನಡದ ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಅಂಕಣಗಳ ಮೂಲಕ ಶುರುವಾದ ಪಯಣ ಕಾದಂಬರಿಯವರೆಗೆ ಬಂದು ನಿಂತಿದೆ. ಈವರೆಗೆ ಎರಡು ಚಾರಿತ್ರಿಕ ಕಾದಂಬರಿ ಹಾಗೂ ಎರಡು ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಕೃತಿಗಳು: ಮಹಾ ಮಾರಣಹೋಮ!, ಧೃತಿಗೆಡದ ಹೆಜ್ಜೆಗಳು, ಕ್ಷತ್ರಿಯ ಕುಲಾವತಂಸ, ಹನಿ ಕಡಿಯದ ಮಳೆ. ...

READ MORE

Related Books