ನಕ್ಷೆಗೆ ಎಟುಕದ ಕಡಲು

Author : ಕುಸುಮಾಕರ ದೇವರಗಣ್ಣೂರ (ವಸಂತ ಅನಂತ ದಿವಾಣಜಿ)

Pages 315

₹ 315.00




Year of Publication: 2022
Published by: ಸಾಹಿತ್ಯ ಭಂಡಾರ
Address: ಬಳೇಪೇಟೆ, ಬೆಂಗಳೂರು-53

Synopsys

ಲೇಖಕ ಕುಸುಮಾಕರ ದೇವರಗಣ್ಣೂರ ಅವರ ಕೃತಿ ‘ನಕ್ಷೆಗೆ ಎಟುಕದ ಕಡಲು’. ಈ ಕೃತಿಯು ಜೀವನ, ಸಮಾಜ ಹಾಗೂ ಕಲೆಗೆ ಸಂಬಂಧಿಸಿದ ಲೇಖನಗಳ ಸಂಗ್ರಹವಾಗಿದೆ.

ಕೃತಿಯ ಪ್ರಸ್ತಾವಿಕ ನುಡಿಗಳಲ್ಲಿ ಎಚ್.ಎಸ್. ರಾಘವೇಂಧ್ರರಾವ್ ಬರೆಇರುವಂತೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಸಂತ ದಿವಾಣಜಿ ಅವರ ಬರವಣಿಗೆಯು ನೆಲದ ಮರೆಯ ನಿಧಾನದ ಹಾಗೆ, ಈ ಮಾತುಗಾರನ ಹಲವು ವಿಚಾರಗಳು ಕನ್ನಡ ಸಾಹಿತ್ಯದ ಕೆಲವು ಮೂಲ ಪ್ರಮೇಯಗಳನ್ನೇ ಪ್ರಶ್ನಿಸುತ್ತವೆ ಮತ್ತು ಗಂಭೀರವಾದ ಪರಿಗಣನೆಗೆ ಹೊಸ ಸಂಗತಿಗಳನ್ನು ಮಂಡಿಸುತ್ತವೆ. ದಿವಾಣಜಿ ಅವರದು ಮಕರಂದ ಮಾರ್ಗ, ಜೇನು ಹುಳುಗಳು ಹಲವು ಹೂಗಳ ರಸವನ್ನು ಮಧುವಾಗಿ ಮಾರ್ಪಡಿಸಿದ ಬಳಿಕ ಆ ಹೂಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಂಡು ಮಧುವಾಗಿ ಬಿಟ್ಟಿರುತ್ತದೆ. ಒಂದು ಹನಿ ಜೇನಿನಲ್ಲಿ ಎಷ್ಟು ಹೂಗಳ ಮಕರಂದ ಇರುವುದೆಂದು ಯಾರು ಬಲ್ಲರು! ಇದು ದಿವಾಣಜಿಯವರ ಜೀವನದರ್ಶನವನ್ನೇ ಹಿಡಿದಿಡುತ್ತದೆ. ಆ ಪದದ ನಿಜವಾದ ಅರ್ಥದಲ್ಲಿ ಅನಿಕೇತನ ಪ್ರಜ್ಞೆಯನ್ನು ಬೆಳೆಸಿಕೊಂಡವರು. ಅವರ ಪ್ರಕಾರ ಸಾಹಿತ್ಯಕ್ಕೆ ದೇಶ, ಕಾಲ, ಸಂದರ್ಭ, ಭಾಷೆಗಳ ಬಂಧನ ಮತ್ತು ಮಿತಿಗಳು ಇಲ್ಲ, ಇರಬಾರದು. ಸಾಹಿತ್ಯದ ಸಂವಹನಕ್ಕೆ ಸಂಸ್ಕೃತಿ ನಿರ್ದಿಷ್ಟವಾದ ಲಕ್ಷಣಗಳು ಅಡ್ಡಿಯಾಗುತ್ತವೆಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.ಇಲ್ಲಿಯ ಬರಹಗಳನ್ನು ನಿಧಾನವಾಗಿ ನಿಂತು ನಿಂತು ಓದುವದರಿಂದ ನಮಗೆ ಬಹಳ ಪ್ರಯೋಜನ ಇದೆ. ಇವು ಒಳ್ಳೆಯ ಮನುಷ್ಯ, ಬಹುಶ್ರುತನಾದ ಮನುಷ್ಯ ಮತ್ತು ಜೀವನವನ್ನು ಪ್ರೀತಿಯಿಂದ ಗ್ರಹಿಸಿದ ಮೇಧಾವಿಯೊಬ್ಬರು ಒಂದುಗೂಡಿ ಬರೆದ ಬರೆಹಗಳು ಎಂಬುದಾಗಿ ಬರೆದಿದ್ದಾರೆ.

About the Author

ಕುಸುಮಾಕರ ದೇವರಗಣ್ಣೂರ (ವಸಂತ ಅನಂತ ದಿವಾಣಜಿ)
(15 February 1930 - 17 April 2012)

ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ...

READ MORE

Related Books