ಕೊಲಂಬಸ್‌ ಹುಟ್ಟಿಸಿದ ಹಾಲಾಹಲ ಮತ್ತು ಇತರ ಲೇಖನಗಳು

Author : ಎನ್.ಪಿ. ಶಂಕರನಾರಾಯಣ ರಾವ್

Pages 144

₹ 70.00




Year of Publication: 2001
Published by: ಅಳಿಲು ಸೇವಾ ಸಂಸ್ಥೆ
Address: ನಂ. 133, ಮೊದಲನೇ ಮಹಡಿ, ಕೆ.ಆರ್. ರಸ್ತೆ, ಓಬಳಪ್ಪ ಗಾರ್ಡನ್, ಬೆಂಗಳೂರು- 560082

Synopsys

‘ಕೊಲಂಬಸ್‌ ಹುಟ್ಟಿಸಿದ ಹಾಲಾಹಲ ಮತ್ತು ಇತರ ಲೇಖನಗಳು’ ಎನ್‌. ಪಿ. ಶಂಕರನಾರಾಯಣ ರಾವ್‌ ಅವರ ಲೇಖನಗಳ ಸಂಗ್ರಹವಾಗಿದೆ. ಚೈತನ್ಯ ಶಕ್ತಿಯಲ್ಲಿ ಅಪಾರ ನಂಬಿಕೆಯಿರಿಸಿದ್ದ ಬುಡಕಟ್ಟು ಮೂಲ ಸಂಸ್ಥ ತಿಯನ್ನು ನಾಶಮಾಡಿ, ಆ ಜನಾಂಗಕ್ಕೆ ಚರಿತ್ರೆಯಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ. ನಾಗರಿಕ ಮಾನವಮೂಲ ನಿವಾಸಿಗಳ ಮೇಲೆ ನಡೆಸಿದ ಹೀನ ಕೃತ್ಯಗಳನ್ನು ಲೇಖನಗಳಾಗಿದೆ.

About the Author

ಎನ್.ಪಿ. ಶಂಕರನಾರಾಯಣ ರಾವ್
(03 August 1928 - 28 November 2006)

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...

READ MORE

Reviews

ಹೊಸತು- ಅಕ್ಟೋಬರ್‌- 2002

ಇತಿಹಾಸ - ಸಂಸ್ಕೃತಿಗಳ ಅಧ್ಯಯನದ ಮಹತ್ವಪೂರ್ಣ ಲೇಖನಗಳು. ಇತಿಹಾಸದ ಅನೇಕ ಸಂದರ್ಭಗಳಲ್ಲಿ ಸಬಲರ ಆಕ್ರಮಣ ಬಲಹೀನರ ಮೇಲೆ ನಡೆದಿದೆ, ಇಂದೂ ನಡೆಯುತ್ತಿದೆ. ಪ್ರಕೃತಿ ಆರಾಧನೆಯಲ್ಲಿ ಪರಮೋನ್ನತ ಮೌಲ್ಯಗಳನ್ನು ಕಂಡು, ಚೈತನ್ಯ ಶಕ್ತಿಯಲ್ಲಿ ಅಪಾರ ನಂಬಿಕೆಯಿರಿಸಿದ್ದ ಬುಡಕಟ್ಟು ಮೂಲ ಸಂಸ್ಕೃತಿಯನ್ನು ನಾಶಮಾಡಿ, ಆ ಜನಾಂಗಕ್ಕೆ ಚರಿತ್ರೆಯಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ. ನಾಗರಿಕ ಮಾನವ ಮೂಲ ನಿವಾಸಿಗಳ ಮೇಲೆ ನಡೆಸಿದ ಹೀನ ಕೃತ್ಯಗಳನ್ನು ಲೇಖನಗಳು ಚಿತ್ರಿಸುತ್ತವೆ.

Related Books