ಕರಾವಳಿ

Author : ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)

Pages 310

₹ 146.00




Year of Publication: 2012
Published by: ಪ್ರಸಾರಾಂಗ
Address: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

Synopsys

‘ಕರಾವಳಿ’ ಜೀಯು ಭಟ್ ಅವರ ಲೇಖನಗಳ ಸಂಗ್ರಹವಾಗಿದೆ. 'ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ' ಎಂಬ ಧೈಯವನ್ನು ಹೊಂದಿದ್ದು ಆ ನಿಟ್ಟಿನಲ್ಲಿ ಅದು ಇಟ್ಟಿರುವ ದಿಟ್ಟ ಹೆಜ್ಜೆ ಬಹುಮುಖಿಯಾದದ್ದು. ಶಿಕ್ಷಣವಂಚಿತರ ಹಾಗೂ ಹೆಚ್ಚಿನ ಶಿಕ್ಷಣಾಕಾಂಕ್ಷಿಗಳ ವರದಾನವಾಗಿರುವ ಮುಕ್ತ ವಿಶ್ವವಿದ್ಯಾನಿಲಯ ದೂರಶಿಕ್ಷಣದ ಮೂಲಕ ದೊಡ್ಡ ಸಾಧನೆಯನ್ನೇ ಮಾಡುತ್ತ ಬಂದಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆ ಜೊತೆಯಲ್ಲಿಯೇ ಆಧುನಿಕ ಶಿಕ್ಷಣದ ಆವಿಷ್ಕಾರಗಳೊಂದಿಗೆ, ಬದುಕಿನ ಆವಶ್ಯಕತೆಗಳನ್ನರಿತು ಹೊಸ ಶಿಕ್ಷಣಕ್ರಮವನ್ನು ರೂಪಿಸುವ ಕಾರ್ಯತಂತ್ರವನ್ನು ಅಳವಡಿಸುವುದು ಇಂದು ಅಗತ್ಯವಾಗಿದೆ. ಆ ಒಂದು ನಿಟ್ಟಿನಲ್ಲಿ ಶಿಕ್ಷಣ ಇಂದು ತನ್ನನ್ನು ತಾನು ಬಹುಮುಖಿಯಾಗಿ ತೆರೆದುಕೊಳ್ಳಬೇಕಾಗಿದೆ. ವಸ್ತುನಿಷ್ಠತೆ ಮತ್ತು ವೈಚಾರಿಕತೆ ಈ ಎರಡನ್ನು ಒಳಗೊಂಡ ಪಠ್ಯಕ್ರಮ ಇಂದು ಅನಿವಾರ್ಯ. ಮಾನವಿಕ ವಿಷಯಗಳಷ್ಟೇ ವಿಜ್ಞಾನ ವಿಷಯಗಳತ್ತಲೂ ನಾವು ಗಮನ ಹರಿಸಬೇಕಾಗಿದೆ. ದೂರಶಿಕ್ಷಣದ ಮೂಲಕ ವಿಜ್ಞಾನ ವಿಷಯವನ್ನು ಬೋಧಿಸುವ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ. ಏಕೆಂದರೆ ಅದೆಷ್ಟೋ ವಿಜ್ಞಾನಾಸಕ್ತರು ಇದರಿಂದ ವಂಚಿತರಾಗಿದ್ದು ಮುಕ್ತ ವಿಶ್ವವಿದ್ಯಾನಿಲಯ ಅಂತಹವರ ಆಸೆಯನ್ನು ಪೂರೈಸುವತ್ತ ಗಮನ ಹರಿಸುವ ಅಗತ್ಯವಿದೆ. ಬದಲಾಗುತ್ತಿರುವ ಜಗತ್ತಿನ ಜಾಡಿನಲ್ಲಿ ಶಿಕ್ಷಣಕ್ರಮವನ್ನು ರೂಪಿಸುವ ತಂತ್ರಗಾರಿಕೆ ಅನಿವಾರ್ಯ.

About the Author

ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)
(03 May 1948)

ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...

READ MORE

Related Books