ಯೋಳ್ತೀನ್ ಕೇಳಿ

Author : ಪಿ. ಕುಸುಮ ಆಯರಹಳ್ಳಿ (ಕುಸುಮಬಾಲೆ)

Pages 184

₹ 165.00




Year of Publication: 2015
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ

Synopsys

‘ಯೋಳ್ತೀನ್ ಕೇಳಿ’ ಲೇಖಕಿ, ಅಂಕಣಕಾರ್ತಿ ಕುಸುಮ ಪಿ (ಕುಸುಮಬಾಲೆ) ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ 2018ನೇ ಸಾಲಿನ ಡಾ. ಹಾಮಾನಾ ಯುವ ಪ್ರಶಸ್ತಿ ಲಭಿಸಿದೆ. ಈ ಕೃತಿಗೆ ಜಿ.ಎನ್. ನಾಗರಾಜ್, ಉದಯ ಮರಕಿಣಿ, ಲಕ್ಷ್ಮೀಕಾಂತ ಇಟ್ನಾಳ, ಬೋಳುವಾರು ಮಹಮ್ಮದ ಕುಂಜ್ಞಿ, ಅಶೋಕ್ ಶೆಟ್ಟರ್, ನಾಗೇಂದ್ರ ಷಾ, ಹಾಗೂ ಡಾ.ಶಿವಾನಂದ ಕುಬುಸದ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಹಳ್ಳಿಗಳ ನಗರಗಳ ಕಷ್ಟ ಕಾರ್ಪಣ್ಯಗಳನ್ನು, ಸುಖ ದುಃಖದ ಕ್ಷಣಗಳನ್ನು ಅಪ್ಯಾಯದ ಭಾವನೆಗಳನ್ನು, ಧನ್ಯತೆಯನ್ನು, ಕೃತಜ್ಞತೆಯನ್ನು ಚಿತ್ರಿಸುವ ಶೈಲಿ ಅನನ್ಯ, ಓದುತ್ತಾ ಹೋದಂತೆ ಆಪ್ತರಾಗಿಬಿಡುತ್ತಾರೆ’ ಡಾ. ಶಿವಾನಂದ ಕುಬುಸದ.

About the Author

ಪಿ. ಕುಸುಮ ಆಯರಹಳ್ಳಿ (ಕುಸುಮಬಾಲೆ)

ಲೇಖಕಿ ಕುಸುಮಬಾಲೆ ಎಂಬ ಹೆಸರಿನಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪಿ. ಕುಸುಮ ಆಯರಹಳ್ಳಿ ಅವರು ನಂಜನಗೂಡಿನವರು. ಚಾಮರಾಜನಗರದ ಅಜ್ಜಿಯ ಮನೆಯಲ್ಲಿ ಬೆಳೆದ ಅವರು, ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ.ಪದವೀಧರರು. ಆಕಾಶವಾಣಿಯಲ್ಲಿ ಉದ್ಯೋಷಕಿಯಾಗಿ, ಅನೇಕ ಧಾರಾವಾಹಿಗಳಿಗೆ ಸಂಭಾಷಣೆಯನ್ನು ಒದಗಿಸಿದ್ದು, ನಾಡಿನ ಅನೇಕ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಣ್ಣಕಥಾ ಕ್ಷೇತ್ರದಲ್ಲೂ ಕೈಯಾಡಿಸಿ, ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನಿಯತವಾಗಿ ಅಂಕಣವನ್ನು ಬರೆಯುತ್ತಾ 'ಕುಸುಮಬಾಲೆ' ಎಂಬ ಕಾವ್ಯನಾಮದಿಂದ ಪ್ರಸಿದ್ದರು. ಜೊತೆಗೆ ಅವರ ಅಂಕಣ ಬರಹಗಳ ಸಂಕಲನ 'ಯೋಳೀನ್‌ಕೇಳಿ' ಪ್ರಕಟವಾಗಿದ್ದು, 2018ನೇ ಸಾಲಿನ 'ಡಾ.ಹಾಮಾನಾ ಯುವ ಪ್ರಶಸ್ತಿ' ದೊರೆತಿದೆ. ಕೃಷಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ.  ...

READ MORE

Related Books