ಅರಿವಿನ ಹರಿವು

Author : ಅನೀಶ್ ಬಿ. ಕೊಪ್ಪ

Pages 68

₹ 60.00
Year of Publication: 2020
Published by: ಶ್ರೀ ಬ್ರಾಹ್ಮೀ ಪ್ರಕಾಶನ
Address: # ಅಗ್ರಹಾರ, ಕಮಲಶಿಲೆ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ - 576 229                  
Phone: 948053141

Synopsys

ಕವಿ  ಅನೀಶ್ ಬಿ.,ಕೊಪ್ಪ ಅವರ ಕಥ ಸಂಕಲನ-ಅರಿವಿನ ಹರಿವು. ಒಟ್ಟು 25 ಕಥೆಗಳನ್ನು ಒಳಗೊಂಡಿದೆ. ಸಾಹಿತಿ ನಾ. ಡಿಸೋಜ ಅವರು ಕೃತಿಗೆ ಬೆನ್ನುಡಿ ಬರೆದು ‘ಸಣ್ಣ ಕಥೆಗಳು ಸದಾ ನಮ್ಮನ್ನು ಒಂದಲ್ಲಾ ಒಂದು ರೀತಿಯಲ್ಲಿ ಕಾಡುವಂತಹದ್ದು.ಆದರೆ ಸಣ್ಣ ಕಥೆ ಎಂದರೇನು ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕುತೂಹಲಕರವಾದ ಒಂದು ಅಂತ್ಯವನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಒಂದು ವಸ್ತುವೇ ? ಬದುಕಿನ ಒಂದು ಸಮಸ್ಯೆಗೆ ನೀಡಬಹುದಾದ ಒಂದು ಪರಿಹಾರವೇ ? ನಮ್ಮ ಅನುಭವವನ್ನು ವಿಸ್ತರಿಸುವ ಅಪರೂಪದ ಘಟನೆಯೇ ? ಇಲ್ಲವೇ ನಮ್ಮನ್ನು ಕಾಡಿ ನಮ್ಮ ಮುಂದೆ ನಿಲ್ಲುವ ಒಂದು ಸಮಸ್ಯೆಯೇ ? ಯಾವುದು ಅದು ಸಣ್ಣ ಕಥೆ ? ಈ ಕಥೆಗಳಲ್ಲಿ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಗಳಿವೆ. ‘ಅರಿವಿನ ಹರಿವು’ ಪುಸ್ತಕದ ಮೊದಲ ಕಥೆ ‘ಮಾಯಾ ಮಳೆ’ಯನ್ನೇ ನೋಡಿ.ಒಂದು ದಿನ ಮಕ್ಕಳು ಕಣ್ಣಾಮುಚ್ಚಾಲೆ ಆಟ ವಾಡುತ್ತಿರುವಾಗ ಮಳೆ ಬರುತ್ತದೆ. ಮಕ್ಕಳಾದ ರಾಮು, ರಾಣಿ, ಶಿವು, ಮೇರಿ ಮತ್ತು ರಹೀಮ್ ಈ ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ.ಮಕ್ಕಳು ತಮ್ಮ ಪುಟ್ಟ ಪುಟ್ಟ ಕೈಗಳ ಬೊಗಸೆಯಲ್ಲಿ ಮಳೆಯ ನೀರನ್ನು ಹಿಡಿಯುತ್ತಾರೆ.ತದನಂತರ ಅವರು ತಮ್ಮ ತಮ್ಮ ಕೈಗಳ ಬೊಗಸೆಗಳನ್ನು ನೋಡಿದಾಗ ಅರ್ರೆ ! ಒಬ್ಬರ ಕೈಯಲ್ಲಿ ದ್ರಾಕ್ಷಿ, ಮತ್ತೊಬ್ಬರ ಕೈಯಲ್ಲಿ ಪೇರಳೆ,ಇನ್ನೊಬ್ಬರ ಬಳಿ ದಾಳಿಂಬೆ,ಸೇಬು, ಅಂಜೂರ, ‘ಇದು ನನಗೆ ಇಷ್ಟ... ಇದು ನನಗೆ ಇಷ್ಟ’ ಎಂದು ಅವರು ಹಣ್ಣುಗಳನ್ನು ಬದಲಾಯಿಸಿಕೊಳ್ಳುವಾಗ ಒಂದು ಹಣ್ಣು ಕೆಳಗೆ ಬೀಳುತ್ತದೆ.'ಢಬ್' ಎಂದು ಸದ್ದಾದಾಗ ಶಿವು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ.ಆಗ ಶಿವುವಿನ ತಾಯಿ,‘....ನಿನ್ನ ಕನಸಿನ ಸಂಭ್ರಮದಂತೆ ನಿನ್ನ ಬದುಕು ಕೂಡ ಸಂಭ್ರಮದಿಂದ ಕೂಡಿರಲಿ’ ಎಂದು ಹಾರೈಸುತ್ತಾಳೆ.ಈ ಕಥೆ ಇಲ್ಲಿಗೆ ಕೊನೆಗೊಳ್ಳುತ್ತದೆ.ಆದರೆ ಕಥೆ ಹೇಳುವುದಷ್ಟನ್ನೇ ಅಲ್ಲದೇ,ಅಲ್ಲಿ ಮತ್ತೂ ಏನೋ ಅಡಗಿದೆ.ಇದನ್ನು ಅರಿತರೆ ಕಥೆ ಅರ್ಥವಾಗುತ್ತದೆ' ಎಂದು ಕಥೆಗಳ ಸ್ವರೂಪವನ್ನು ಪ್ರಶಂಸಿಸಿದ್ದಾರೆ. 

 

About the Author

ಅನೀಶ್ ಬಿ. ಕೊಪ್ಪ
(22 December 2005)

ಅನೀಶ್ ಬಿ. ಕೊಪ್ಪ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಹುಟ್ಟಿದ್ದು 2005 ಡಿಸೆಂಬರ್‌ 22 ರಂದು ಕೊಪ್ಪದಲ್ಲಿ. ಶಿವಮೊಗ್ಗದ ಸೃಜನ ಟ್ರಸ್ಟ್ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ಸ್ವರಚಿತ ಕವನಕ್ಕೆ  ಪ್ರಥಮ ಸ್ಥಾನ ಪಡೆದಿದ್ದಾರೆ. ಹೂರಣ-ಎಂಬುದು ಅವರ ಮೊದಲ ಕವನ ಸಂಕಲನ.  2018 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಪ್ರತಿಭೆ ಪುರಸ್ಕಾರ, 2018ರಲ್ಲಿ ವಿಜಯ ...

READ MORE

Related Books