ಅವಲಕ್ಕಿ ಪವಲಕ್ಕಿ

Author : ಅಕ್ಷತಾರಾಜ್ ಪೆರ್ಲ

Pages 129

₹ 180.00




Year of Publication: 2022
Published by: ಸಾಹಿತ್ಯ ಪ್ರಕಾಶನ ಮಂಗಳೂರು
Phone: 9481221239    

Synopsys

ಈ ಸಂಕಲನದಲ್ಲಿ 55 ಲೇಖನಗಳಿವೆ. ಅವುಗಳಲ್ಲಿರುವ ವಿಷಯ ವೈವಿಧ್ಯವು ಗಮನಾರ್ಹವಾಗಿದೆ. ಈ ನೆಲದಲ್ಲಿ ಬದುಕುವ ಮನುಷ್ಯನ ಕಣ್ಣಿಗೆ ಕಾಣುವ, ಮನಸ್ಸಿಗೆ ತಟ್ಟುವ, ಹೃದಯಕ್ಕೆ ಮುಟ್ಟುವಎಲ್ಲಾ ವಿಷಯಗಳೂ ಲೇಖನಗಳಾಗಿ ರೂಪುಗೊಂಡಿವೆ. ಅದು ಅಡುಗೆ ಮನೆಯಿಂದ ತೊಡಗಿ ಅಂತರ್ಜಾಲದ ವರೆಗೂ ವಿಸ್ತರಿಸಿದ ವೈಖರಿಯೇ ಮನ ಸೆಳೆಯುತ್ತದೆ. ಯಾವ ಲೇಖನಗಳೂ ಪ್ರವಚನಕಾರನಂತೆ ಉಪದೇಶ ನೀಡುವುದಿಲ್ಲ. ನಮ್ಮ ನಮ್ಮ ಅಂತರಂಗ ವನ್ನೊಮ್ಮೆ ಇಣುಕಿ ನೋಡುವಂತೆ ಮಾಡುತ್ತದೆ. ಯುವ ಸಮುದಾಯದ ತಲ್ಲಣಗಳಿಗೆ, ಕ್ಷೋಭೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವಿದೆ. ಲೇಖನಗಳ ಆಶಯವು ನಮ್ಮ ಮನಸ್ಸಿನಲ್ಲೊಂದು ಸಣ್ಣ ಭಾವದಲೆಯನ್ನು ಹುಟ್ಟಿಸುತ್ತದೆ. ತುಟಿಯಂಚಿನಲ್ಲಿ ಮುಗುಳ್ನಗುವನ್ನುಂಟು ಮಾಡುತ್ತದೆ. ಸಮಾಜವು ಈಗ ಸಾಗುತ್ತಿರುವ ದಿಕ್ಕು ದೆಸೆ ಆರ್ದ್ರತೆಯನ್ನು ಕಳೆದುಕೊಳ್ಳುತ್ತಿರುವ ಭಾವಲಹರಿ, ಹೊಸ ಕಾಣ್ಕೆಗಾಗಿ ಕಾಯುತ್ತಿರುವ ಹೃದಯಗಳ ತುಡಿತಗಳು ಹಲವಾರು ಲೇಖನಗಳಲ್ಲಿ ಅಭಿವ್ಯಕ್ತಗೊಂಡಿವೆ. ಈ ಲೇಖನಗಳು ಬರಿಯ ಪದಗಳ ಜಾಲಗಳಾಗದೆ ಭಾವನೆಗಳ ಮಧುರಯಾನದಂತೆ ಭಾಸವಾಗುತ್ತದೆ. ಆನಂದವನ್ನು ಕೊಡುವ ಮೂಲಗಳಲ್ಲಿ ಸಾಹಿತ್ಯದ ಪಾತ್ರದೊಡ್ಡದು. ಖ್ಯಾತ ಲೇಖಕ ಜೆ. ಪಿ. ರಾಜರತ್ನಂ ಅವರು “ಸಾಹಿತ್ಯವು ಸಾರ್ಥಕವಾಗಬೇಕಾದರೆ ಸಾಹಿತಿಯ ಹೊಣೆಯಷ್ಟೇ ಓದುಗನ ಹೊಣೆಯೂ ಇದೆ” ಎನ್ನುತ್ತಾರೆ. ಸ್ಪಂದಿಸುವ ಸಹೃದಯವುಳ್ಳ ಓದುಗ ವರ್ಗವು ಹೆಚ್ಚಿದಂತೆಲ್ಲಾ ಲೇಖಕರಿಗೆ ಇನ್ನಷ್ಟು ಬರೆಯುವ ಸ್ಫೂರ್ತಿ ಲಭಿಸುತ್ತದೆ. ಕರಾವಳಿ ಲೇಖಕಿಯರ ಸಂಘವು ವಾಚಕಿಯರನ್ನು ಸೇರಿಸಿಕೊಂಡೇ ಬಂದಿರುವುದು ಅದೇ ಕಾರಣದಿಂದ. ಒಳ್ಳೆಯ ಓದುಗನೇ ನಾಳೆ ಲೇಖಕನಾಗುವ ಸಾಧ್ಯತೆಯಿದೆ ಅಲ್ಲವೇ? ಅಕ್ಷತಾರಾಜ್ ಪೆರ್ಲ ಅವರು ಕರಾವಳಿಯ ಕಾಸರಗೋಡು ಮತ್ತು ಅವಿಭಜಿತ ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳಲ್ಲಿ ಒಂದು ಒಳ್ಳೆಯ ಓದುಗ ವರ್ಗವನ್ನು ಸೃಷ್ಟಿಸಿದ್ದಾರೆ. ಒಳ್ಳೆಯ ಓದುಗರು ಲಭಿಸಿದ್ದರಿಂದ ಇನ್ನಷ್ಟು ಎಚ್ಚರದಿಂದ ಮುಂದಿನ ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾಸರಗೋಡಿನ ಓದುಗರು ಅವರನ್ನು ಪ್ರೀತಿಯಿಂದ ಹರಸಿದ್ದಾರೆ. ಮಂಗಳೂರಿನ ಸಹೃದಯ ಓದುಗರು ಕೂಡಾ ಅವರ ‘ಅವಲಕ್ಕಿ-ಪವಲಕ್ಕಿ’ ಸಂಕಲನವನ್ನು ಇನ್ನೂ ಹೆಚ್ಚಿನ ಪ್ರೀತಿಯಿಂದ ಹರಸಿದ್ದಲ್ಲದೆ ದತ್ತಿನಿಧಿಯ ಬಹುಮಾನವನ್ನು ನೀಡಿ ಕೊಂಡಾಡಿದ್ದಾರೆ. ಪೆರ್ಲದ ಊರು ಅನೇಕ ಖ್ಯಾತ ಸಾಹಿತಿಗಳ ತವರೂರು. ಅಕ್ಷತಾರಾಜ್ ಪೆರ್ಲ ಅವರೂ ಕೂಡಾ ತನ್ನ ಸಾಹಿತ್ಯ ಸಾಧನೆಯ ಪಥದಲ್ಲಿ ಅನೇಕ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ. ‘ಅವಲಕ್ಕಿ-ಪವಲಕ್ಕಿ’ ಸಂಕಲನವು ಸಾಹಿತ್ಯ ಪ್ರೇಮಿಗಳಿಗೆ ಆನಂದವನ್ನು ನೀಡುತ್ತದೆಯೆಂದು ನಾನು ನಂಬಿದ್ದೇನೆ. ಮುಂದಿನ ಅವರ ಸಾಹಿತ್ಯ ಕೃಷಿಯನ್ನು ಕರಾವಳಿಯ ಕನ್ನಡಿಗರು ಬಹಳ ಕಾತರದಿಂದ ಕಾಯುತ್ತಾರೆ. ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರುವಂತಾಗಲಿ. ಕನ್ನಡನಾಡು ಅವರ ಸಾಹಿತ್ಯ ಸಾಧನೆಯನ್ನು ಮೆಚ್ಚಿ ಕೊಂಡಾಡುವಂತಾಗಲಿ ಎಂದು ಬಿ.ಎಂ. ರೋಹಿಣಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅಕ್ಷತಾರಾಜ್ ಪೆರ್ಲ
(17 August 1990)

ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ ...

READ MORE

Related Books