ಮೂವತ್ತು ಪ್ರಖ್ಯಾತ ವಿಜ್ಞಾನಿಗಳು

Author : ವಿ.ಗಣೇಶ್‌

Pages 144

₹ 170.00




Year of Publication: 2023
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

‘ಮೂವತ್ತು ಪ್ರಖ್ಯಾತ ವಿಜ್ಞಾನಿಗಳು’ ವಿ. ಗಣೇಶ್‌ ಅವರ ರಚನೆಯ ವೈಜ್ಞಾನಿಕ ಲೇಖನಗಳ ಸಂಗ್ರಹವಾಗಿದೆ. ಇದೊಂದು ಅಪೂರ್ವ ಕೃತಿ, ವಿದ್ಯಾರ್ಥಿಗಳಿಗಂತು ಪ್ರೇರಣಾದಾಯಕ ಮಾರ್ಗದರ್ಶಿ. ಅತ್ಯಂತ ಸರಳ ಶೈಲಿಯಲ್ಲಿ ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಕೃತಿ ಹಲವು ಪ್ರಖ್ಯಾತ ವಿಜ್ಞಾನಿಗಳ ಬಗ್ಗೆ ತಲಸ್ಪರ್ಶಿಯಾದ ಉಪಯುಕ್ತ ಮಾಹಿತಿಗಳನ್ನು ಒದಗಿಸುವುದಲ್ಲದೆ, ಆ ವಿಜ್ಞಾನಿಗಳು ಸಂಶೋಧಿಸಿದ ವಸ್ತು ವಿಚಾರಗಳ ಬಗ್ಗೆ ಸೂಕ್ತ ವಿವರಣೆಯನ್ನು ನೀಡುತ್ತದೆ. ವಿದ್ಯಾರ್ಥಿಗಳಿಗಂತು ಇದೊಂದು ಆಕರ ಗ್ರಂಥವಾಗಿದ್ದು, ವಿಜ್ಞಾನ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಉತ್ತಮ ಪ್ರೇರಣೆಯನ್ನು ನೀಡುತ್ತದೆ. ಸಾಮಾಜಿಕವಾಗಿ ಇಡೀ ಮಾನವ ಕೋಟಿಯ ಸಮಸ್ಯೆಗಳನ್ನು ನಿವಾರಿಸಿ ಎಲ್ಲರ ಏಳಿಗೆಗಾಗಿ ಶ್ರಮಿಸಿದ ವಿಜ್ಞಾನಿಗಳ ಬಗ್ಗೆ ನಮ್ಮ ದೃಷ್ಟಿಯನ್ನು ಸೆಳೆಯುತ್ತದೆ. ಮಾನವನ ವಿಕಾಸದ ಹಾದಿಯು ಹರಿದ ಸರಿತೆಯಂತೆ ಸದಾ ಚಲನಶೀಲವಾಗಿದ್ದು ಅನಾದಿಕಾಲದಿಂದ ಇಂದಿನ ನವನಾಗರಿಕ ಸಮಾಜದ ಪರಿಪೂರ್ಣ ಸ್ಥಿತಿಗೆ ಮನುಜ ತಲುಪಿರುವನು. ನಾವಿಂದು ಪಡೆದಿರುವ, ಪಡೆಯುತ್ತಿರುವ ಎಲ್ಲ ಬಗೆಯ ಸೌಲಭ್ಯಗಳಿಗೆ ಕಾರಣಕರ್ತರಾದವರು ವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳು, ಕಾಲದಿಂದ ಕಾಲಕ್ಕೆ ಜಗತ್ತಿನಾದ್ಯಂತ ವಿಜ್ಞಾನಿಗಳು ಅವಿರತವಾಗಿ ಶ್ರಮಿಸಿ, ಸಂಯಮ ಹಾಗೂ ತಾಳ್ಮೆಯಿಂದ ಸಂಶೋಧನೆಗಳನ್ನು ನಡೆಸಿರುತ್ತಾರೆ. ಅವರೆಲ್ಲರ ಅಮೂಲ್ಯ ಪರಿಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. - ವಂದಗದ್ದೆ ಚಂದ್ರಮೌಳಿ

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books