ನನ್ನ ಪರಿಸರ ಪಯಣ

Author : ಹನಿಯ ರವಿ

Pages 140

₹ 110.00




Year of Publication: 2015
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ಪರಿಸರದ ಬಗ್ಗೆ ಆಲೋಚಿಸುವುದಾದರೆ ಮನುಷ್ಯ ಪರಿಸರದ ಕೂಸು. ಒಂದು ಕಾಲದಲ್ಲಿ ಮನುಷ್ಯನನ್ನು ಪರಿಸರದಿಂದ ದೂರ ಮಾಡಲಿಕ್ಕೆ ಶಕ್ಯವಿಲ್ಲ ಎನ್ನುವ ಹಾಗೆ ಆತನ ಬದುಕು ಪರಿಸರದ ಜೊತೆ ಬೆರೆತಿತ್ತು. ಈ ಮಾತಿಗೆ ಒಂದು ನಿದರ್ಶನವೆಂಬಂತೆ ಲೇಖಕರಾದ ಹನಿಯ ರವಿ ಈ ಕೃತಿಯಲ್ಲಿ ವಿವರಿಸಿದ್ದಾರೆ. 25 ವರ್ಷಗಳ ಹಿಂದಿನ ಒಂದು ಚಿತ್ರಣವನ್ನು ರವಿ ಈ ಕೃತಿಯಲ್ಲಿ ನೀಡಿರುವುದನ್ನು ಗಮನಿಸಿದಾಗ ಏನೆಲ್ಲಾ ಕಳೆದುಕೊಂಡಿದ್ದೇವಲ್ಲಾ ಎನ್ನುವುದನ್ನು ನೆನಪಿಗೆ ತರುತ್ತದೆ. 

ಮುಂಜಾನೆಯ ಹಕ್ಕಿಯ ಇಂಚರ, ನಂತರ ನಾವು ನಿಸರ್ಗದ ಜೊತೆ ಮಾಡಿಕೊಳ್ಳುವ ಸಂಧಾನ, ಹಲ್ಲುಜ್ಜುವ ಕ್ರಿಯೆ, ದೇವರಿಗಾಗಿ ಹೂವುಗಳನ್ನು ಕೊಯ್ದು ತರುವ ಸಂಭ್ರಮ, ಹಬ್ಬ ಹರಿದಿನಗಳ ವಿವರ, ಆಗ ಮತ್ತೆ ಕಾಡಿಗೆ ದಾಳಿ, ಊಟ ಉಪಚಾರಗಳಿಗೆ ನಾವು ಬಳಸುತ್ತಿದ್ದ ಹಸಿರು ತರಕಾರಿ, ಅವುಗಳ ಔಷಧೀಯ ಗುಣ, ರೋಗ ಬಂದರೆ ನೆರವಾಗುತ್ತಿದ್ದ ಗಿಡಗಳು ಹೀಗೆ ಅನೇಕ ಬರಹಗಳತ್ತ ಲೇಖಕ ರವಿ ಕೆಲ ಕುತೂಹಲಕರವಾದ ವಿವರಣೆ ನೀಡುತ್ತಾರೆ.

ಮನೆಯಲ್ಲಿ ಮಗು ಹುಟ್ಟಿದಾಗ ಹೊಕ್ಕುಳಬಳ್ಳಿಯನ್ನು ಹಿತ್ತಲಲ್ಲಿ ನೆಟ್ಟು, ಆ ಜಾಗದಲ್ಲಿ ಒಂದು ಗಿಡ ನೆಡುತ್ತಿದ್ದರಂತೆ. ಇದು ಒಂದು ಸಾಮಾನ್ಯ ಗಿಡವಲ್ಲ. ಮಗು ಯಾವ ನಕ್ಷತ್ರದಲ್ಲಿ ಹುಟ್ಟಿದೆಯೋ ಆ ನಕ್ಷತ್ರಕ್ಕೆ ಸಂಬಂಧಪಟ್ಟ ಒಂದು ಗಿಡವನ್ನು ಅಲ್ಲಿ ನೆಡುತ್ತಿದ್ದರು. ಗಿಡಮರಗಳನ್ನು ರಕ್ಷಿಸಿಕೊಂಡುಬರುವ ಒಂದು ಪದ್ಧತಿ ಅದೆಷ್ಟು ಅರ್ಥಪೂರ್ಣವಾಗಿತ್ತು ಎಂಬುದರ ಹಿನ್ನೆಲೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ.  ’ನನ್ನ ಪರಿಸರ ಪಯಣ” ಎಂಬ ಪ್ರಬಂಧವನ್ನು ವೈಯಕ್ತಿಕ ನೆಲೆಯಲ್ಲಿ ಆರಂಭಿಸುವ ಲೇಖಕರು  ನಂತರ ಪರಿಸರಕ್ಕಾಗಿ ನಡೆಸಿದ ಹೋರಾಟಗಳ ಬಗ್ಗೆ ಬರೆಯುತ್ತಾರೆ. ಸಮೃದ್ಧವಾದ ಕಾನನ ಕಾಣೆಯಾಗಿ ಅದನ್ನು ಉಳಿಸಲು ಹೋರಾಟ ಮಾಡಬೇಕಾಗಿರುವ ಅಗತ್ಯವನ್ನು ವಿವರಿಸುತ್ತಾರೆ. 

Related Books