ವ್ಯವಧಾನ: ಒಂದಿಷ್ಟು ಭಾವಬಿಂದುಗಳು

Author : ಎನ್‌. ಶ್ರೀನಿವಾಸ ಉಡುಪ

Pages 288

₹ 225.00




Year of Publication: 2017
Published by: ತಮೂಲ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

‘ವ್ಯವಧಾನ: ಒಂದಿಷ್ಟು ಭಾವಬಿಂದುಗಳು’ ಲೇಖಕ ಎನ್. ಶ್ರೀನಿವಾಸ ಉಡುಪ ಅವರ ಕೃತಿ. ಮನುಷ್ಯ ಸದಾಕಾಲ ತನ್ನೊಳಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುತ್ತಾನೆ. ಅವುಗಳಿಗೆ ಉತ್ತರ ಸಿಕ್ಕಿವೆ ಎನ್ನುವಂತಿಲ್ಲ. ಆದರೆ ಆ ಹುಡುಕಾಟ ಮಾತ್ರ ಅವನು ಬಿಟ್ಟುಕೊಡುವುದಿಲ್ಲ. ಇಂತಹ ಹುಡುಕಾಟ ಮತ್ತು ಬದುಕಿನ ಮೌಲ್ಯಗಳ ಕುರಿತ ಚಿಂತನಶೀಲ ಬರಹಗಳನ್ನು ಈ ಕೃತಿ ಒಳಗೊಂಡಿದ್ದು, ವರ್ತಮಾನದ ಜಗತ್ತಿನಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಸಂಕಟಗಳ ಕುರಿತೂ ಸಹಾನುಭೂತಿಯಿಂದ ಪರಿಶೀಲಿಸಿವೆ ಎನ್ನಿಸುತ್ತದೆ. ಹಿರಿಯ ಲೇಖಕ ಶ್ರೀನಿವಾಸ ಉಡುಪರು ತಮ್ಮ ಕಣ್ಮುಂದೆಯೇ ಸಮಾಜ ಪಡೆದುಕೊಂಡ ಸ್ಥಿತ್ಯಂತರಗಳ ಒಂದು ಚಿತ್ರಮಾಲೆಯನ್ನೇ ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಎನ್‌. ಶ್ರೀನಿವಾಸ ಉಡುಪ

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...

READ MORE

Related Books