ಬಗೆ ತೆರೆದ ಬಾನು

Author : ಡಿ.ವಿ. ಪ್ರಹ್ಲಾದ್

Pages 96

₹ 60.00




Year of Publication: 1996
Published by: ಸಂಚಯ
Address: 24/ಡಿ, 17ನೇ ಮುಖ್ಯರಸ್ತೆ, ಮುನೇಶ್ವರ ಬ್ಲಾಕ್, ಜಿಇಎಫ್ ಪೋಸ್ಟ್, ಬೆಂಗಳೂರು- 560026

Synopsys

‘ಬಗೆ ತೆರೆದ ಬಾನು’ ಕನ್ನಡದ ಹಿರಿಯ ಮತ್ತು ಜನಪ್ರಿಯ ಸಾಹಿತಿಗಳ ಸಂದರ್ಶನ ಹಾಗೂ ಪ್ರಮುಖ ಬರಹಗಳ ಸಂಕಲನ. ಲೇಖಕ ಡಿ.ವಿ. ಪ್ರಹ್ಲಾದ್ ಅವರು ಸಂಪಾದಿಸಿದ್ದಾರೆ. ಕುವೆಂಪು, ಡಿ.ವಿ.ಜಿ, ಯು.ಆರ್ ಅನಂತ ಮೂರ್ತಿ, ಪಿ. ಲಂಕೇಶ್, ಸಾರಾ ಅಬೂಬಕರ್, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ, ಸೇರಿದಂತೆ ಹಲವು ಹಿರಿಯ ಸಾಹಿತಿಗಳ ಸಂದರ್ಶನ ಹಾಗೂ ಪ್ರಸಿದ್ಧ ಬರಹಗಳು ಸಂಕಲನಗೊಂಡಿವೆ. ಕನ್ನಡ ಸಾಹಿತ್ಯಾಸಕ್ತರಿಗೆ ಸಾಹಿತಿ-ಚಿಂತಕರ ಪ್ರಾಥಮಿಕ ಮಾಹಿತಿ ದೊರಕಿಸುವ ಕೃತಿ. 

About the Author

ಡಿ.ವಿ. ಪ್ರಹ್ಲಾದ್

ಕವಿ ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. 'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ' - ಪ್ರಕಟಿತ ಕವನ ಸಂಕಲನ. 'ಹೊಳೆದದ್ದು ತಾರೆ' - ಆಯ್ದ ಸಂಪಾದಕೀಯ. 'ಅನುದಿನವಿದ್ದು' - ಅಗಲಿದ ಲೇಖಕರ ನೆನಪುಗಳ ಸಂಗ್ರಹ. ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು' ಸಹ ಸಂಪಾದಿತ ಕೃತಿ, 'ಬಗೆ ತೆರೆದ ಬಾನು'- ಸಾಹಿತಿಗಳ ಸಂದರ್ಶನ ಸಂಕಲನ, 'ಮುಕ್ತ ಛಂದ'- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ಧಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ನಿರಂತರ ಮೂರು ದಶಕಗಳಿಂದ ಸಂಪಾದಿಸಿ ಪ್ರಕಟಿಸುತ್ತಿದ್ದರು. ...

READ MORE

Related Books