ಕುಣಿದು ಕಾಡುವ ಗಾಳಿ

Author : ಆನಂದ ಋಗ್ವೇದಿ

Pages 164

₹ 150.00




Year of Publication: 2020
Published by: ರೂಪ ಪ್ರಕಾಶನ
Address: ನಂ. 2406, 2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ. ಕೆ.ಆರ್. ಮೊಹಲ್ಲಾ, ಮೈಸೂರು- 570004
Phone: 9342274331

Synopsys

‘ಕುಣಿದು ಕಾಡುವ ಗಾಳಿ’ ಲೇಖಕ ಡಾ. ಆನಂದ್ ಋಗ್ವೇದಿ ಅವರ ಸಾಂಸ್ಕೃತಿಕ ಓದಿನ ಟಿಪ್ಪಣಿಗಳು. ಇಲ್ಲಿ ಕುಣಿದು ಕಾಡುವ ಗಾಳಿ, ಗುಡುಗು ಮಿಂಚಿನ ಮೇಳ, ಕತ್ತಲೆಂಬುದು ಕತ್ತಲಲ್ಲ ಅದು, ಸೂರ್ಯನೆಂಬ ಹಣತೆ ಕೆಳಗಿನ ನೆರಳು, ದುರಿತ ಕಾಲದೊಂದಿಗೆ ಅನುಸಂಧಾನಗೊಳ್ಳುವ ಕಾವ್ಯ, ಮನುಜ ಮನಸ್ಸೆಂಬ ಮಲೆನಾಡಿನ ಮನನೀಯ ಕತೆ ವ್ಯಥೆಗಳ ಹುಲಿಕಡ್ಜಿಗಳ ಗೂಡು, ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ಚಿಕಿತ್ಸಕ ನೋಟ ಮತ್ತು ಚಿಕಿತ್ಸೆ, ಸುಧಾ ಆಡುಕಳ ಅವರ ಬಕುಲದ ಬಾಗಿಲಿನಿಂದ, ಸಮಕಾಲೀನ ಕನ್ನಡ ಕಾವ್ಯದಲ್ಲಿ ಭಾವ ಆರ್ದ್ರತೆ ಮತ್ತು ಅಂತಃಕರಣದ ಜಿನುಗನ್ನು ಪರಿಗ್ರಹಿಸುವ ಪರಿ, ಬದುಕಿನ ಸುಕ್ಕಿನಲ್ಲಿ ಸಿಕ್ಕವರ ಸಂಕಷ್ಟ ಕಥನ, ಕಾಡ ಬೆಳದಿಂಗಳಿಗೇ ದನಿಯಾದ ಮೌನದಂಚಿನ ಮಾತುಗಳು, ಅವಳೆಂದರೆ: ಉಮ್ಮಖಗೊಳ್ಳದ ಧಗೆ ಬೆಂಕಿ, ಕಂಗೆಡಿಸುವ ತಂಪು, ಬಾಲ್ಯದ ನೆನಕೆ ಬದುಕು ಭಾವದ ಹವಣಿಕೆಯೇ ಹಸನುಗೊಳಿಸಿದ ಲಾಲಿತ್ಯ, ಸಂಸ್ಕೃತಿ ಮರೆಯಬಾರದ ಆದರೂ ಮರೆತುಬಿಟ್ಟ ಮಾನಿನಿಯರ ಮರುಕಥನ, ಅಕ್ಕ ಹಾಗೂ ರಾಧೆಯರೆಂಬ ಅವಗುಂಠನ ಮತ್ತು ಹೆಣ್ತನದ ನಿರ್ವಚನ, ಮನುಷ್ಯ ಮಂಡಲದ ಮಧ್ಯದೊಳಗೆ ನಿಂತು ಕಳವಳಿಸಿದ ಅಪ್ಪಟ ಮಾನವೀಯ ಸಂವೇದನೆಯ ಕತೆಗಳು, ಮೀನು ಪೇಟೆಯ ತಿರುವಿನಲ್ಲಿ ಭತ್ತ ಬೆಳೆಯುವುದೆಂದರೆ, ಟೆಕ್ಸಾಸಿನ ಚಂದಿರ ಕನ್ನಡದವನಾದ ಬಗೆ, ನೆಲದ ಅಪ್ಸರೆಯರ ನಲಿವು ಮತ್ತು ನರಳಿಕೆ, ಮನುಷ್ಯತ್ವದ ಪರಿ ಮತ್ತು ಸಾಮಾಜಿಕ ಧಾವಂತಗಳ ಕಥನ, ಕಾವ್ಯಮೀಮಾಂಸೆಯ ರಸಾಭಿಜ್ಞ ನಾಟಕ ರಸ ಗಂಗಾಧರ, ಕತೆಗಾರ ಚನ್ನಪ್ಪ ಅಂಗಡಿಯವರ ಕತೆಗಳಲ್ಲಿ ಸಾಮಾಜಿಕ ಧನ ಮತ್ತು ಋಣ ವ್ಯಾಖ್ಯಾನ, ಹೆಣ್ತನವೆಂಬೀ ಬೆಡಗು: ನಂದಿನಿ ವಿಶ್ವನಾಥ ಹೆದ್ದುರ್ಗರವರ ಕವಿತೆಗಳ ಒಳಸೆಲೆ, ವಿಜಯಕಾಂತ ಪಾಟೀಲರ ಇತ್ಯಾತ್ಮಕ ಕವಿತಿಗಳು: ಸಲಸಲದ ಪಾಡು, ಸಮಾಜಿಕ ವಿರೋಧಾಭಾಸದಲ್ಲಿ ಬಸವಳಿಯುತ್ತಿರುವ ಹೆಣ್ಣ ಕಾಣಿಸುವ ಕವಿತೆಗಳು ಸೇರಿದಂತೆ 47 ಲೇಖನಗಳಿವೆ.

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Related Books