ಸಂಗಾತಿ

Author : ಮಹೇಶ ನಾವಳ್ಳಿ

Pages 100

₹ 20.00




Year of Publication: 1993
Published by: ಸಿಂಚನ ಪ್ರಕಾಶನ
Address: ಅಂಚೆ: ಅಮ್ಮಿನಭಾವಿ, ತಾ: ಧಾರವಾಡ, ಜಿ: ಧಾರವಾಡ

Synopsys

ಕವಿ ಮಹೇಶ ನಾವಳ್ಳಿ ಅವರ ಮೊದಲ ಕವನ ಸಂಕಲನ-ಸಂಗಾತಿ. ಇಲ್ಲಿಯ ಎಲ್ಲ ನೂರು ಕವಿತೆಗಳಿಗೂ ಒಂದೇ ಶೀರ್ಷಿಕೆ; ಅದು ಸಂಗಾತಿ. ಒಟ್ಟು ಭಾವದ ದೃಷ್ಟಿಯಿಂದ ಬೇರೆ ಬೇರೆ ಹೆಸರಿಡುವುದು ಕೃತಕವಾಗುತ್ತದೆ ಎಂದು ಹೀಗೆ ಮಾಡಿರುವುದಾಗಿ ಕವಿಗಳು ಹೇಳಿದ್ದಾರೆ.

1982-1992 ರವರೆಗಿನ ಕವಿತೆಗಳು ಇಲ್ಲಿ ಸಂಕಲನಗೊಂಡಿವೆ. ಕಾವ್ಯ ಬರೀ ಪದಗಳಲ್ಲ; ಅದು ಮನೋಧರ್ಮ. ಒಳಗಿನ ಒತ್ತಡವೇ ಹಾಗಿತ್ತು. ಅದಕ್ಕೆ ಬರೆದೆ ಎಂದು ಹೇಳುವ ಕವಿ, ಕಾವ್ಯ ಒಂದು ಉತ್ಪಾದನಾ ಶಕ್ತಿ ಇದ್ದಂತೆ. ಮಾನವೀಯ ಸಂಬಂಧಗಳ ತಿಳಿವಳಿಕೆ, ಹೊಣೆಗಾರಿಕೆ, ಬದ್ಧತೆ ಮತ್ತು ಮುಖ್ಯವಾಗಿ ನಿಷ್ಠೆಯ ಅಂಶಗಳು ಅಡಕವಾಗಿರುತ್ತವೆ ಎಂಬುದು ಅವರ ದೃಢ ನಿಲುವು. ಅದನ್ನೇ ಕಾವ್ಯವಾಗಿಸಿದ ಕೃತಿ ಇದು.

 

About the Author

ಮಹೇಶ ನಾವಳ್ಳಿ

ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಮಹೇಶ ನಾವಳ್ಳಿ ಅವರು ಮೂಲತಃ ಕವಿಗಳು. ಸಂಗಾತಿ ಅವರ ಮೊದಲ ಕವನ ಸಂಕಲನ. ನಂತರದ್ದು-ಇತಿಹಾಸ. ಈ ಎರಡೂ ಕವನ ಸಂಕಲನಗಳ ಜೀವಾಳವೇ -ಪ್ರೇಮದ. ಸರಳ ನಿವೇದನೆಯೊಂದಿಗೆ ಪ್ರೇಮ ಉತ್ಕಟ ಭಾವನೆಗಳ ಅಭಿವ್ಯಕ್ತಿ, ವಿರಹದ ತೀವ್ರತೆ, ಆಕಾಶವೇ ಮಿತಿಯಾಗಿಸಿಕೊಂಡ ಆಶಯಗಳು, ಪದಗಳ ಸುಂದರ ಹಂದರವಾಗಿವೆ -ಈ ಕವನ ಸಂಕಲನಗಳು. ...

READ MORE

Related Books