ಆಧುನಿಕ ಕನ್ನಡ ಸಾಹಿತ್ಯ

Author : ಎಲ್.ಎಸ್. ಶೇಷಗಿರಿರಾವ್

Pages 280

₹ 295.00




Year of Publication: 2022
Published by: ಅಂಕಿತ ಪುಸ್ತಕ
Address: 53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ ಬೆಂಗಳೂರು - 560004
Phone: 08026617100

Synopsys

‘ಆಧುನಿಕ ಕನ್ನಡ ಸಾಹಿತ್ಯ’ ನಡೆದು ಬಂದ ದಾರಿ ಕೃತಿಯು ಎಲ್. ಎಸ್. ಶೇಷಗಿರಿರಾವ್ ಅವರ ಲೇಖನಗಳ ಸಂಕಲನವಾಗಿದೆ. ಕನ್ನಡ ನಾಡಿನ ವಿವಿಧ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಈ ಲೇಖನಗಳು ಪ್ರಕಟವಾಗಿವೆ.  70ರ ದಶಕದಲ್ಲಿ ಎಲ್.ಎಸ್. ಶೆಷಗಿರಿರಾವ್ ಅವರು ಭಾಗವಹಿಸಿದ ವಿಚಾರ ಸಂಕಿರಣಗಳಲ್ಲಿ ನೀಡಿದ ಕೆಲವು ಉಪನ್ಯಾಸಗಳೂ ಇಲ್ಲಿವೆ. 1946ರಷ್ಟು ಹಿಂದೆ `ಕತೆಗಾರ’ ಮಾಸ ಪತ್ರಿಕೆಯ ಒಂದು ವಾರ್ಷಿಕ ಸಂಚಿಕೆಗಾಗಿ ಬರೆದ `ಸಣ್ಣಕತೆಯಲ್ಲಿ ವಾಸ್ತವಿಕತೆ’ ಇಂದಿಗೂ ಪ್ರಸ್ತುತವೆಂದು ಇಲ್ಲಿ ಸೇರಿಸಿದೆ. ಕಾಲದಿಂದ ಕಾಲಕ್ಕೆ ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ಸ್ಥೂಲವಾಗಿ ಗುರುತಿಸುವುದು ಈ ಸಂಗ್ರಹದ ಉದ್ದೇಶವಾಗಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ - ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ - ಬೆಳೆದು ಬಂದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಒಂದು ಉತ್ತಮ ಪ್ರವೇಶವನ್ನು ಇಲ್ಲಿನ ಲೇಖನಗಳು ದೊರಕಿಸುತ್ತವೆ.

ಈ ಕೃತಿಯು 21 ಅಧ್ಯಾಯಗಳನ್ನು ಒಳಗೊಂಡಿದ್ದು, 20 ಮತ್ತು 21ನೆಯ ಶತಮಾನದ ಕನ್ನಡ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು, ಇಪ್ಪತ್ತೈದು ವರ್ಷಗಳ ಕನ್ನಡ ಸಾಹಿತ್ಯ, ಎಂಬತ್ತರ ದಶಕದ ಮಹತ್ವದ ಸಾಹಿತ್ಯ, ವೈವಿಧ್ಯರಹಿತ ಕನ್ನಡ ನವ್ಯ ಕಾವ್ಯ, ಸ್ವಾತಂತ್ಯ್ರ ಪೂರ್ವ ಕನ್ನಡ ಸಾಹಿತ್ಯ ವಿಮರ್ಶೆ, ಸ್ವಾತಂತ್ಯ್ರೋತ್ತರ ಕನ್ನಡ ವಿಮರ್ಶನ ಪ್ರಜ್ಞೆ, ಸಾಹಿತ್ಯ ವಿಮರ್ಶೆ : ನಡೆಯುತ್ತಿರುವ ದಾರಿ, 1990ರ ಕನ್ನಡ ಸಾಹಿತ್ಯ ವಿಮರ್ಶೆ, ಕನ್ನಡ ಕಾದಂಬರಿ ಲೋಕ, ಕನ್ನಡ ಕಾದಂಬರಿಗಳು, 60ರ ದಶಕದ ಕಾದಂಬರಿ ಸಾಹಿತ್ಯ, ನವೋದಯ / ಪ್ರಗತಿಶೀಲ ಕಾದಂಬರಿ, ಕನ್ನಡ ಸಣ್ಣಕತೆಗಳು, ಕನ್ನಡ ಸಣ್ಣಕಥೆಯ ಇತಿಮಿತಿ / ಸಣ್ಣಕತೆಯಲ್ಲಿ ವಾಸ್ತವಿಕತೆ, ಕನ್ನಡ ಸಣ್ಣಕತೆಗಳಲ್ಲಿ ಹಾಸ್ಯ, ಕನ್ನಡ ನಾಟಕ ನಡೆದು ಬಂದ ದಾರಿ, ಕನ್ನಡ ನಾಟಕಗಳ ವಸ್ತು : ಐತಿಹಾಸಿಕ ಮತ್ತು ಪೌರಾಣಿಕ, ಕನ್ನಡ ರಂಗಭೂಮಿಯಲ್ಲಿ ಭಾಷೆ, ಕನ್ನಡ ಲೇಖಕಿಯರ ಕೊಡುಗೆ, 20 ಮತ್ತು 21ನೆಯ ಶತಮಾನದ ಕನ್ನಡ ಸಾಹಿತ್ಯ, ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಬೆರಗುಗೊಳಿಸುವಂತಹ ಸೃಷ್ಟಿ ಶೀರ್ಷಿಕೆಯ ಅಧ್ಯಾಯಗಳು ಒಳಗೊಂಡಿವೆ. 

About the Author

ಎಲ್.ಎಸ್. ಶೇಷಗಿರಿರಾವ್
(16 February 1925 - 20 December 2019)

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...

READ MORE

Related Books