ಸಮೀಚೀನ

Author : ಪದ್ಮರಾಜ ದಂಡಾವತಿ

Pages 120

₹ 150.00




Published by: ಸಪ್ನ ಪ್ರಕಾಶನ
Address: # ಧ್ಯಾನ ಎಂಟರ್ ಪ್ರೈಸೆಸ್, ಎ.ಐ. ಕಾಂಪ್ಲೆಕ್ಸ್, ಸಹಸ್ರ ಲಿಂಗೇಶ್ವರ ದೇವಸ್ಥಾನ ಬಳಿ, ಉಪ್ಪಿನಂಗಡಿ-574241
Phone: 7259887117

Synopsys

‘ಸಮೀಚೀನ’ ಕೃತಿಯು ಪದ್ಮರಾಜ ದಂಡಾವತಿ ಅವರ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬರವಣಿಗೆ ಎನ್ನುವುದು ಒಂದು ನಿರಂತರ ಪಕ್ರಿಯೆ. ಇದು ಇನ್ನೊಂದು ರೀತಿಯಲ್ಲಿ ಪ್ರತಿಕ್ರಿಯೆಯೂ ಹೌದು. ಒಬ್ಬ ಲೇಖಕ ತನ್ನ ಸುತ್ತಮುತ್ತಲಿನ ವಿದ್ಯಮಾನಗಳಿಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಇರುತ್ತಾನೆ. ಅದಕ್ಕೆ ಅವಕಾಶಗಳು ಅನೇಕ ರೀತಿಯಲ್ಲಿ ಒದಗಿ ಬರುತ್ತವೆ. ಕೆಲವು ಸಾರಿ ನಾವೇ ಇಂಥ ಲೇಖನಗಳನ್ನು ಬರೆಯಬೇಕಾಗಿ ಬರುತ್ತದೆ. ಇನ್ನು ಕೆಲವು ಸಾರಿ ಇಂಥ ಲೇಖನಗಳನ್ನು ಕೇಳಿ ಬರೆಸಲಾಗುತ್ತದೆ.

ಈ ಸಂಕಲನದಲ್ಲಿ ಅಂಥ ಎರಡೂ ರೀತಿಯ ಲೇಖನಗಳು ಸಂಗ್ರಹೀತವಾಗಿವೆ. ಕಳೆದ ಮೂರು, ನಾಲ್ಕು ವರ್ಷಗಳಲ್ಲಿ ಬರೆದ ಹಲವು ಲೇಖನಗಳ ಪೈಕಿ ಆಯ್ದ ಇಪ್ಪತ್ತು ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿರುವೆ. ಈ ಕೃತಿಗೆ 'ಸಮೀಚೀನ' ಎಂದು ಹೆಸರು ಕೊಟ್ಟಿದ್ದೇನೆ. 'ಸಮೀಚೀನ ಎಂದರೆ ನ್ಯಾಯಯುತ, ಯುಕ್ತ, ಸುಸಂಗತ, ಸಮಂಜಸ, ಸ್ಥಿರ, ಯೋಗ್ಯ ಎಂಬೆಲ್ಲ ಅರ್ಥಗಳು ಇವೆ. ಈ ಎಲ್ಲ ಗುಣಗಳನ್ನು ನನ್ನ ಲೇಖನಗಳಲ್ಲಿ ಕಾಪಾಡಿಕೊಂಡು ಬರಲು ಸತತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದು ಇಲ್ಲಿ ನಮ್ರವಾಗಿ ನಿವೇದಿಸಿಕೊಳ್ಳಲು ಬಯಸುವೆ ಎನ್ನುತ್ತಾರೆ ಲೇಖಕ.

About the Author

ಪದ್ಮರಾಜ ದಂಡಾವತಿ
(30 August 1955)

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.  ಕೃತಿಗಳು:  ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...

READ MORE

Related Books