ಪರಂಪರೆಯೊಂದಿಗೆ ಪಿಸುಮಾತು

Author : ಬರಗೂರು ರಾಮಚಂದ್ರಪ್ಪ

Pages 140

₹ 70.00




Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

‘ಪರಂಪರೆಯೊಂದಿಗೆ ಪಿಸುಮಾತು’ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಲೇಖನಗಳ ಸಂಕಲನ. ಆಧುನಿಕ ಪೂರ್ವ ಸಾಹಿತ್ಯವನ್ನು ವಿಶ್ಲೇಷಿಸಿರುವ ಲೇಖನಗಳಿವೆ. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಸಂಪೂರ್ಣ ಗುರುತಿಸಿಕೊಂಡು ಬಂದಿರುವ ಬರಗೂರು ರಾಮಚಂದ್ರಪ್ಪನವರ ವಿಶೇಷ ಆಸಕ್ತಿಯೆಂದರೆ ಪರಂಪರೆಯೊಂದಿಗೆ ನಡೆಸುವ ಅನುಸಂಧಾನ, ಜಡ ಸಂಪ್ರದಾಯ ಮತ್ತು ಪರಂಪರೆಗಳು ಪ್ರತ್ಯೇಕ ನೆಲೆಗಳೆಂದು ಭಾವಿಸಿರುವ ಅವರು, ಬಂಡಾಯ ಸಾಹಿತಿ ಮತ್ತು ಸಾಹಿತ್ಯಕ್ಕೆ ಪರಂಪರೆಯ ಪ್ರಜ್ಞೆ ಇರಬೇಕೆಂದು 1980 ರಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಪರಂಪರೆಯೊಂದಿಗೆ ಅನುಸಂಧಾನ ನಡೆಸುವ ಪ್ರಕ್ರಿಯೆಯಿಂದ ಸಮಕಾಲೀನ ಪ್ರಜ್ಞೆ ಪ್ರಬುದ್ಧವಾಗಲು ಸಾಧ್ಯ ಎಂಬ ಅರಿವಿನ ನೆಲೆ ಲೇಖಕರದ್ದು. ಏನಿಲ್ಲದಿದ್ದರೂ ಇಂತಹ ಅನುಸಂಧಾನದಿಂದ, ನಾವೆಲ್ಲಿದ್ದೇವೆ, ನಾವೇನಾಗಬೇಕು, ನಾವೆತ್ತ ಸಾಗಬೇಕು-ಎಂಬ ಹೊಳಹುಗಳು ದಕ್ಕುತ್ತವೆ. ಹಿನ್ನೋಟ ಮತ್ತು ಮುನ್ನೋಟಗಳ ನಡುವೆಯೇ ಬಂಡಾಯ ಪ್ರಜ್ಞೆಗೊಂದು ವಿನ್ಯಾಸ ಲಭ್ಯವಾಗುತ್ತದೆ. ಬಂಡಾಯ ಪ್ರಜ್ಞೆ ಎನ್ನುವುದು ವಿನಾಕಾರಣ ಸೆಟೆದು ನಿಲ್ಲುವ ನಿರಾಕರಣವಲ್ಲ. ಅಂತೆಯೇ ಅಂಧಾನುಕರಣೆಯ ಸ್ವೀಕರಣವೂ ಅಲ್ಲ. ಅದೊಂದು ನಿರಂತರ ಪ್ರಗತಿ ಪ್ರಕ್ರಿಯೆ. ಅಂಥಹ ಅನುಸಂದಾನಗಳ ವಿಶೇಷ ವಿವರಣೆ ಈ ಕೃತಿಯಲ್ಲಿದೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books