ವಲಸೆ ಪ್ರಜ್ಞೆ ಮತ್ತು ಇತರೆ ಲೇಖನಗಳು

Author : ಬಸಯ್ಯ ಸ್ವಾಮಿ ಕಮಲದಿನ್ನಿ

Pages 138

₹ 140.00




Year of Publication: 2022
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯಬೀದಿ, ಸರಸ್ವತಿ ಗೋದಾಮು ಹತ್ತಿರ, ಕಲಬುರಗಿ- 585101

Synopsys

‘ವಲಸೆ ಪ್ರಜ್ಞೆ ಮತ್ತು ಇತರೆ ಲೇಖನಗಳು’ ಡಾ. ಬಸಯ್ಯ ಸ್ವಾಮಿ ಅವರ ವಿಮರ್ಶೆ ಮತ್ತು ಸಂಶೋಧನಾ ಲೇಖನಗಳ ಸಂಕಲನ. ಈ ಕೃತಿಗೆ ಡಾ. ಶ್ರೀಶೈಲ ನಾಗರಾಳ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಡಾ. ಬಸಯ್ಯ ಸ್ವಾಮಿ ಅವರು ತಮ್ಮ ವಿಶಿಷ್ಟ ಬಗೆಯ ಚಿಂತನೆ ಮತ್ತು ಬರವಣಿಗೆಯ ಮೂಲಕ ಅನೇಕರ ಗಮನ ಸೆಳೆಯುವಂತಹ ಲೇಖಕರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಬರವಣಿಗೆಯ ಶೈಲಿಯಿಂದ ಕುತೂಹಲಗಳನ್ನು ಹುಟ್ಟಿಸುತ್ತಾರೆ. ಅವರ ವಲಸೆ ಪ್ರಜ್ಞೆ ಮತ್ತು ಇತರೆ ಲೇಖನಗಳ ಶೀರ್ಷಿಕೆಯಲ್ಲಿನ ಲೇಖನಗಳನ್ನು ಸಂಪೂರ್ಣವಾಗಿ ಓದಿದಾಗ ನನಗನ್ನಿಸಿದ್ದು ಇದು. ಇಲ್ಲಿನ ಕೆಲವು ಲೇಖನಗಳನ್ನು ಬಸಯ್ಯಸ್ವಾಮಿಯವರು ಅನ್ಯಜ್ಞಾನ ಶಿಸ್ತಿಗೆ ಒಳಪಡಿಸಿ ನೋಡುವ ರೀತಿ ತುಂಬಾ ವಿಶಿಷ್ಟವಾಗಿದೆ.

ಕನ್ನಡ ಸಾಹಿತ್ಯವನ್ನು ಹೀಗೆ ಅನ್ಯ ಶಿಸ್ತುಗಳಿಗೆ ಒಳಪಡಿಸಿ ನೋಡುವುದರಿಂದ ಹಲವು ಪ್ರಯೋಜನಗಳಿವೆ. ಅಂತಹ ಒಂದಷ್ಟು ಪ್ರಯೋಜನ ಈ ಕೃತಿ ಒದಗಿಸಿ ಕೊಡಬಲ್ಲದು’ ಎಂದಿದ್ದಾರೆ. ಅಮೃತಮತಿಯ ಪಾತ್ರ: ಒಂದು ಭಿನ್ನ ಓದು. ಸ್ವಪ್ನ ಸಾರಸತ್ವ ಕಾದಂಬರಿಯಲ್ಲಿ ವಲಸೆ ಪ್ರಜ್ಞೆ, ಮಹಿಳಾನೆಲೆಗಳು, ಸಾಂಸ್ಕೃತಿಕ ಅಸ್ಮಿತೆ ಹೀಗೆ ವಿವಿಧ ನೆಲೆಗಳಲ್ಲಿ ಲೇಖಕರು ನೋಡುವ ಮೂಲಕ ತಮ್ಮ ಅರಿವಿನ ಅನೇಕ ಕಿಟಕಿಗಳನ್ನು ತೆರೆಯುತ್ತಾರೆ ಅನಿಸುತ್ತದೆ. ಬಸಯ್ಯಸ್ವಾಮಿಯವರು ತಮ್ಮ ಈ ಪ್ರಯತ್ನದಲ್ಲಿ ತಾವು ತಿಳಿದುಕೊಂಡದ್ದನ್ನು, ತಮ್ಮ ದೃಷ್ಟಿಗೆ ಯೋಗ್ಯವೆನಿಸಿದ್ದನ್ನು ತಮ್ಮದೇ ಆದ ತಿಳುವಳಿಕೆಯ ಮೂಲಕ ಮಂಡಿಸುತ್ತಾರೆ. ಅಧ್ಯಯನದಲ್ಲಿ ಮತ್ತು ಬರವಣಿಗೆಯಲ್ಲಿ ಅವರ ಶ್ರಮ ಎದ್ದು ತೋರುತ್ತದೆ. ಇದನ್ನು ಚೆನ್ನಾಗಿ ದುಡಿಸಿಕೊಂಡಲ್ಲಿ ಬಸಯ್ಯಸ್ವಾಮಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳುತ್ತ ಅಭಿನಂದಿಸುತ್ತೇನೆ ಎಂದಿದ್ದಾರೆ.

About the Author

ಬಸಯ್ಯ ಸ್ವಾಮಿ ಕಮಲದಿನ್ನಿ
(01 June 1989)

ಬಸಯ್ಯಸ್ವಾಮಿ ಕಮಲದಿನ್ನಿ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಮದಿಹಾಳ ಗ್ರಾಮದವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪದವಿ ಪಡೆದಿದ್ದಾರೆ. ಅದೇ ವಿಶ್ವವಿದ್ಯಾಲಯದಲ್ಲೇ ‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಕವಿತೆಗಳು ಕ್ರೈಸ್ಟ್ ಯ್ಯೂನಿವರ್ಸಿಟಿ, ಬೇಂದ್ರೆ ಅಂತರ ಕಾಲೇಜು ಸ್ಪರ್ದೆ ಒಳಗೊಂಡು ವಿವಿಧೆಡೆ ಪ್ರಶಸ್ತಿ ಗೌರವ ಪಡೆದಿವೆ. ಹೊಸತಲೆಮಾರಿನ ಕವಿಯಾಗಿರುವ ಬಸಯ್ಯ ಸ್ವಾಮಿ ಕಮಲದಿನ್ನಿಯವರು ‘ಅವಳೆದೆಯ ಡೈರಿಯೊಳಗೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.    ...

READ MORE

Related Books