ಹಸಿರೊಡಲ ದನಿ

Author : ಕ್ಷೀರಸಾಗರ

Pages 140

₹ 140.00




Year of Publication: 2018
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಎಮ್ಮಿಗನೂರು, ಜಿಲ್ಲೆ ಬಳ್ಳಾರಿ-583113
Phone: 8660098545

Synopsys

‘ಹಸಿರೊಡಲ ದನಿ’ ಕೃತಿಯು ಕ್ಷೀರಸಾಗರ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮನು. ಕೆ ಅವರು, ‘ಹಸಿರೊಡಲ ದನಿ ಪುಸ್ತಕದ ದನಿಯು ಬಹುಕಾಲದಿಂದ ಹಸಿದ ಓದುಗರಿಗೆ ಸಿಗದಿ‌ದ್ದ ಮೃಷ್ಟಾನವನ್ನು ಉಣಬಡಿಸಿದೆ. ಕಾಡಿನಿಂದ ಹೊರಹಾಕಲ್ಪಟ್ಟ ಬುಡಕಟ್ಟು ಜನರ ಕಠೋರವಾದ ನಿತ್ಯದ ಅನುಭವಗಳಿಂದ ಹಿಡಿದು ಹುಡುಗಾಟಿಕೆಯ ನೆರೆಹೊರೆಯ ಚಿನ್ನರ ಅಂಡಲೆಯುವ ದಿನಚರಿಗಳಲ್ಲಿ ಪರಿಸರ ಕೌತುಕಗಳನ್ನು ಗುರುತಿಸಿ ಅಧ್ಯಯನದ ಸರಕಾಗಿಸಿ ಕೊಳ್ಳುವ ಸೂಕ್ಷ್ಮಮತಿಯಾದ ಕ್ಷೀರಸಾಗರ ಅವರು, ಇದನ್ನು ಕನ್ನಡ ಸಾಹಿತ್ಯಕ್ಕೆ ಸಮರ್ಪಿಸಿದ್ದಾರೆ. ಕಾರ್ಯನಿಮಿತ್ತ ಕಾಡೊಳಗಿನ ಗಿರಿಜನ ಹಾಡಿಗಳಲ್ಲಿ ಅಡ್ಡಾಡ ಬೇಕಿದ್ದ ಅವರ ವೃತ್ತಿಜೀವನದ ಸಂದರ್ಭದಲ್ಲಿ ಬಹಳ ಸಮಯವನ್ನು ಪರಿಸರ ವೀಕ್ಷೆಣೆಗಾಗಿ ವಿನಿಯೋಗಿಸಿದ್ದಾರೆ. ಇವರ ಈ ಸೂಕ್ಷ್ಮ ಜೀವನಶೈಲಿಯು ಸಹಸ್ರಾರು ಹವ್ಯಾಸಿ ಪರಿಸರ ಆಸಕ್ತರಿಗೆ ಮಾರ್ಗಸೂಚಿ ಎನಿಸಿದೆ. ಮೂರು ದಶಕಗಳ ಪರಿಸರದ ಅನುಭವಗಳು ಯುವಪೀಳಿಗೆಯನ್ನು ಪರಿಸರದೊಡನೆ ಯಶಸ್ವಿಯಾಗಿ ಬೆಸೆದಿವೆ. ಪ್ರಕೃತಿ ವಿಜ್ಞಾನ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾಗಿರುವ ಈ ಕೃತಿ ಕುತೂಹಲಕರವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಕ್ಷೀರಸಾಗರ

ಕ್ಷೀರಸಾಗರ ಅವರು ಸಾವಯವ ಕೃಷಿಕರಾಗಿದ್ದಾರೆ. ಎಂ.ಎ ತತ್ವಶಾಸ್ತ್ರವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸೀಯಡ್ಸ್ ಬೆಂಗಳೂರು ಪೀಪಲ್ ಟ್ರೀ ಹಾಗೂ ಹೆಗ್ಗಡದೇವನಕೋಟೆಯ ಫೆಡಿನಾ ವಿಕಾಸ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಅಡಿಯಲ್ಲಿ ಮೈಸೂರು ಜಿಲ್ಲೆಯ ಸಾಕ್ಷರವಾಹಿನಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಜಿಲ್ಲೆಯ ಲಕ್ಷಾಂತರ ಜನರನ್ನು ಸಾಕ್ಷರರನ್ನಾಗಿ ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.   ಕೃತಿಗಳು:   ಜೇನು ಆಕಾಶದ ಅರಮನೆಯೋ(ಕಾದಂಬರಿ), ದಿಕ್ಕು ತಪ್ಪಿದ  ಕರ್ನಾಟಕ ಭೂ ಸುಧಾರಣೆ((ಸಂಶೋಧನೆ), ಕಾಡಿನ ಮಕ್ಕಳ ಒಡನಾಟದಲ್ಲಿ(ಅನುಭವ ಕಥನ), ಕಾಡಿನ ನಾಡಿ ಮಿಡಿದವರು(ಲೇಖನ ಸಂಗ್ರಹ),  ...

READ MORE

Related Books