ಬಯಲ ಕಣಗಿಲೆ (ಪಕಳೆ ಮಾತು, ಚದುರ ಅಕ್ಕರ)

Author : ಕೇಶವ ಮಳಗಿ

Pages 232

₹ 250.00




Year of Publication: 2024
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

ಬಯಲ ಕಣಗಿಲೆ (ಪಕಳೆ ಮಾತು, ಚದುರ ಅಕ್ಕರ) ಕೇಶವ ಮಳಗಿ ಅವರ ಕೃತಿ. ಈ ಬಗ್ಗೆ ಬರೆಯುತ್ತಾ 'ಬಯಲುಸೀಮೆಯ ಉದ್ದಗಲಕ್ಕೂ ಯಾವುದೇ ಆರೈಕೆ, ಉಸ್ತುವಾರಿ, ವಿಶೇಷ ಕಾಳಜಿಗಳಿಲ್ಲದೆ ಬೆಳೆದು, ಕಂಗೊಳಿಸಬಲ್ಲ ಕೆಲವೇ ಹಸಿರುಜೀವಿಗಳಲ್ಲಿ ಕಣಗಿಲೆ ಗಿಡ ಕೂಡ ಒಂದು. ಜಾಲಿ, ಬೇವು, ಅತ್ತಿ ಮತ್ತು ನೇರಳೆ ಹೆಸರಿಸಬಹುದಾದ ಇತರೆ ಮರಗಳು. ಕಣ್ಣಿಗೆ  ಯಕಃಶ್ಚಿತ್ ಗಿಡಗಳಂತೆ ಕಂಡರೂ ಕಣಗಿಲೆ ಮತ್ತು ಜಾಲಿ ಬಹುಪಯೋಗಿ, ರುಜಿನವನ್ನು ಕರಗಿಸುವ ಸಂಜೀವನಿ.

ನೋಡಲು ಅನಾಕರ್ಷಕವಾಗಿ ಕಾಣುವ ಕಣಗಿಲೆಯ ಎಲೆ, ಮೊಗ್ಗು, ಹಲವು, ಬೇರುಕಾಂಡಗಳೆಲ್ಲವನೂ ಉಪಶಮನಕೆ ಬಳಸುವರು. ಆದರೆ, ಶ್ರೇಷ್ಠತೆಯ ವ್ಯಸನದಲ್ಲಿರುವ ರೋಗಿಗೆ ಸಮಾಜಕ್ಕೆ ತನ್ನ ಕಾಯಿಲೆ ಗುಣಪಡಿಸುವ ಔಷಧಗಳ ಕುರಿತು ಅಸಡ್ಡೆ, ಅವಜ್ಞೆಯಿರುತ್ತದೆ. ಇಲ್ಲಿನ ಪಂಡಿತರು ತಮ್ಮ ಮನೆಯಂಗಳದಲಿ ಕೃತಕ ಬೀಜ, ಗೊಬ್ಬರ, ರಾಸಾಯನಿಕ ಹಾಕಿ ತಾವು ಬೆಳೆಸಿದ ಹಿತ್ತಲಿನ ಮದ್ದೇ ಸಕಲಶ್ರೇಷ್ಠ ಎಂದು ಭ್ರಮಿಸಿರುತ್ತಾರೆ. ಮತ್ತು ಆರೈಕೆಯ ಭ್ರಮೆಯಲ್ಲಿ ಗ್ರಸ್ತ ವೈದ್ಯರುಗಳಾಗಿರುತ್ತಾರೆ.

ಬುದ್ಧಿ ತಿಳಿಯುವ ಮೊದಲೇ ಜಾಲಿ ಮತ್ತು ಕಣಗಿಲೆಗಳನ್ನು ಕಣ್ತುಂಬಿಕೊಂಡು ಬೆಳೆದ ನನಗೆ ಕಠಿಣ ಋತುಮಾನವನು ಮೀರಿ ಉಳಿಯಬೇಕೆಂಬುದನ್ನು ಇವು ಕಲಿಸಿದವು. ಕಿತ್ತೆಸೆದು ಸುಂದರ ಹಲತೋಟ ನಿರ್ಮಿಸುತ್ತೇವೆಂಬ ಹುಸಿ ಭರವಸೆಯಿಂದ ಎಲ್ಲವನ್ನೂ ಧ್ವಂಸ ಮಾಡುವ ಶುಚಿ ಪರಿಸರದ ನರಡಿಂಭಕರ ಉಪಟಳಗಳ ನಡುವೆಯೇ ಹೇಗೆ ನೆಲದಾಳದಲ್ಲಿ ಬೇರಿಳಿಸಿ ಬದುಕಬೇಕು ಎಂಬುದನು ಹೇಳಿಕೊಟ್ಟವು. ನೀವು ನಿಕೃಷ್ಟವೆಂದು ಕಂಡರೂ ನಿಮಗೆ ಹಲವನ್ನೇ ನೀಡುವೆ ಎಂಬ ಉದಾರತೆಯನ್ನು ಹೇಗೆ ತೋರಬೇಕೆಂದು ತಿಳಿಸಿದವು. ಎಂದಿದ್ದಾರೆ ಲೇಖಕ ಕೇಶವ ಮಳಗಿ. 

ಹೀಗೆ ಉಳಿದು, ಈ ಕೆಲವು ವರ್ಷಗಳಿಂದ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವಾಗ ಮಾಡಿಕೊಂಡ ಸಣ್ಣಪುಟ್ಟ ಟಿಪ್ಪಣಿ, ಲೇಖನ, ಬರಹಗಳು ಇಲ್ಲಿವೆ. ಈ ಬರಹಗಳ ಉದ್ದಗಲ ಆಳ ಎಷ್ಟೇ ಇರಲಿ ಉದ್ದೇಶ ಮಾತ್ರ ಬದುಕಿಗೆ `ಒಳ ಕಸುವ’ನ್ನು ನೀಡುವ ಅಂಶ ಯಾವುದು? ಎಂದು ಅರಿಯುವುದಾಗಿದೆ. ಆ ನಿಟ್ಟಿನಲ್ಲಿಯೆ, ನಾನು ಓದಿದ, ಚಿಂತಿಸಿದ ವಿಷಯಗಳು ಅಕ್ಕರಗಳಲ್ಲಿ ಒಡಮೂಡಿವೆ.

ಅಂದಹಾಗೆ, ಕಣಗಿಲೆ ಮಹಾಕಾಲನಿಗೆ ಅತ್ಯಂತ ಪ್ರಿಯವಾದ ಹಲವು. ಘಮಿಸುವ ಕೃತಕ ಬೀಜದ ಹೂವುಗಳಿಗಿಂತ ಸುವಾಸನೆಯಿರದ ಕಣಗಿಲೆಯಿಂದ ಆತನನ್ನು ಅರ್ಚಿಸಿದರೆ ಕಾಲ ಒಲಿದಂತೆಯೇ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books