ಬೆಂಗಳೂರು ಕಲರ್ಸ್

Author : ಮೇಘನಾ ಸುಧೀಂದ್ರ

Pages 120

₹ 120.00




Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

ಲೇಖಕಿ ಮೇಘನಾ ಸುಧೀಂದ್ರ ಅವರ ‘ಬೆಂಗಳೂರು ಕಲರ್ಸ್’ಕೃತಿಯು ವರ್ಣರಂಜಿತ ಮಹಾನಗರದ ಕಥನವಾಗಿದೆ. ಕೃತಿಯಲ್ಲಿರುವ ವಿಚಾರಗಳ ಕುರಿತು ಬೆನ್ನುಡಿಯಲ್ಲಿ ವಿವರಣೆ ನೀಡಿರುವ ಲೇಖಕಿ ಮೇಘನಾ, ಬೆಂಗಳೂರು ಅತ್ಯಂತ ಕಲರ್‌ಫುಲ್‌ ಸಿಟಿಯಾಗಿದ್ದು, ಬೆಂಗಳೂರಿಗೆ ಹಳೇ ಸ್ಥಳ ಪುರಾಣ ಇದೆ, ರಾಜರ ವೀರ ಪೌರುಷದ ಕಥೆ ಇದೆ, ಯಾರಿಗೂ ಬೇಡವಾದ ಊರಾದ ಕಥೆ ಇದೆ, ಮತ್ತೆ ಬೆಂಗಳೂರಿಲ್ಲದ ಜಗತ್ತೇ ನಡೆಯೋದಿಲ್ಲ ಎನ್ನುವ ಕಥೆಯೂ ಇದೆ ಎಂದಿದ್ದಾರೆ. ಪ್ರಾಯಶಃ ಒಂದೇ ಕಾಲದಲ್ಲಿ ಪ್ರಾಚೀನವಾಗಿಯೂ ನವೀನವಾಗಿಯೂ ಕಾಣುವ ಊರು ಬೆಂಗಳೂರು, ನನ್ನೂರು ತಿಳಿ ನೀರಿನ ಹಾಗೆ, ನಾವು ಹೇಗಿದ್ದೇವೋ ಹಾಗೆ ಅದು ಮಾರ್ಪಾಡಾಗುತ್ತದೆ. ಏಕ ಕಾಲ ಲವ್‌ ಮತ್ತು ಹೇಟ್ ಮಾಡಬಲ್ಲ ಊರು ಬೆಂಗಳೂರು, ಕೆಲವರಿಗೆ ನನ್ನೂರು ಹುಟ್ಟೂರು, ಕೆಲವರಿಗೆ ಕರ್ಮಭೂಮಿ, ಕೆಲವರಿಗೆ ಶಾಶ್ವತ ವಲಸಿಗರ ಹುಟ್ಟಿದ ಊರು ಕಾಡುವಷ್ಟು ಇನ್ನಾವುದೂ ಮನುಷ್ಯನನ್ನು ಕಾಡೋಲ್ಲ. ತಾನು ಹುಟ್ಟಿದ ಊರನ್ನ ತಾನು ಈ ಭೂಮಿ ಬಿಟ್ಟುಹೋಗುವಾಗಲೂ ನೆನಪಲ್ಲಿ ಇಟ್ಟುಕೊಂಡೇ ಇರುತ್ತಾನೆ. ಆದರೆ ತನ್ನ ಊರಿಗೆ ಯಾಕೆ ಹೀಗೆ ಹೆಸರು ಬಂತು, ಯಾರು ಆಳಿದರು, ಯಾಕಾಗಿ ಹೀಗೆ ಬದಲಾವಣೆ ಆಯಿತು ಎಂಬ ಪ್ರಶ್ನೆಗಳು ಯಾವಾಗಲೂ ಇದ್ದೇ ಇರುತ್ತವೆ ಎನ್ನುತ್ತಾರೆ. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕುಬಿಟ್ಟರೆ ಇದೊಂದು ಪ್ಯಾ೦ಡೋರಾಸ್ ಬಾಕ್ಸ್ ಓಪನ್ ಮಾಡಿದ ಹಾಗೆ, ಮನೆಯ ಹಳೆ ಗುಟ್ಟುಗಳು ಗೊತ್ತಾದಾಗ ಮಕ್ಕಳು ಹೇಗೆ ಹೌಹಾರುತ್ತಾರೋ ಹಾಗೆಯೇ ಬೆಂಗಳೂರಿನ ರಂಗುಬಿರಂಗಿ ಕಥೆಗಳನ್ನು ಕೇಳಿದಾಗ ಊರಿನ ಮಕ್ಕಳು ಶಾಕ್ ಆಗುತ್ತಾರೆ, ಕೆಲವೊಮ್ಮೆ ನಗುತ್ತಾರೆ, ಆಳುತ್ತಾರೆ ಮತ್ತೆ ಬೆಂಗಳೂರಿನ ಆತ್ಮದೊಳಗೆ ಸೇರಿ ಊರಿನ ಹಾಗೆ ಮರುಕ ಪಡುತ್ತಾರೆ. ಬೆಂಗಳೂರು ಅಪ್ಪನ ಹಾಗೆ. ಏನೇ ಮಾಡಿದರೂ, ಏನೇ ಕೊಟ್ಟರೂ, ಎಷ್ಟೇ ಸಹಾಯ ಮಾಡಿದರೂ 'ಅಯ್ಯೋ ಇದೇನ್ ಬಿಡ್ರಿ, ಬೇರೆ ಊರಲ್ಲಿ ಇನ್ನೇನೇನೋ ಇದೆ, ಈ ಊರಲ್ಲಿ ಅದೂ ಇಲ್ಲ'' ಎಂದು ಪಕ್ಕದ ಮನೆಯ ಅಪ್ಪನನ್ನು ಹೊಗಳಿ, ತನ್ನಪ್ಪನನ್ನು ಬೈದ ಹಾಗೆ ಬೆಂಗಳೂರು ನಿಂತಿದೆ. ಗತಕಾಲದ ಚರಿತ್ರೆಯಲ್ಲೇ ಕಾಣೋಪಾಲಿಟನ್ ಕಥೆಗಳನ್ನು ಒಡಲಲ್ಲಿ ಇಟ್ಟುಕೊಂಡ ವರ್ಣರಂಜಿತ ಕಥನವೇ ಬೆಂಗಳೂರು ಕಲರ್ಸ್‌ ಎಂದಿದ್ದಾರೆ.

ಈ ಪುಸ್ತಕದಲ್ಲಿ ಬರುವ ಪಾತ್ರಗಳು ಛಳಕ್ಕನೆ ಬಂದು ತಮ್ಮ ಮಾತನ್ನು ಆಡಿ ಮಿಂಚಿ ಮರೆಯಾಗುತ್ತದೆ. ಬೆಂಗಳೂರಿನ ಅಭಿವೃದ್ದಿ, ಇಲ್ಲಿನ ವರ್ಣರಂಜಿತ ಚರಿತ್ರೆ, ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುವ ಪರಿಸ್ಥಿತಿ, ಹವಾಮಾನ ಹೀಗೆ ಎಲ್ಲದರ ಕುರಿತು ಸರಳ ಭಾಷೆಯಲ್ಲಿ ಕಥನಗಳ ಮೂಲಕ ಈ ಪುಸ್ತಕವನ್ನು ಲೇಖಕಿ ಮೇಘನಾ ಚಿತ್ರಿಸಿದ್ದಾರೆ.ಕೆಲವರಿಗೆ ಇದು ಸೌಲಭ್ಯ ಕೊಡುವ ರೆಸಾರ್ಟ್‌ಗಳಾದರೆ ಇನ್ನು ಕೆಲವರಿಗೆ ಮೇಕ್‌ ಶಿಪ್ಟ್‌ ಜಾಗ ಮತ್ತು ಕೆಲವರಿಗೆ ಆತ್ಮದ ಒಂದು ಭಾಗ ಎಂದು ಸ್ವತಃ ಲೇಖಕಿ ಈ ಕೃತಿಯ ಪರಿಚಯ ಮಾಡುತ್ತಾರೆ. 

About the Author

ಮೇಘನಾ ಸುಧೀಂದ್ರ

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಹೊಸ ಪೀಳಿಗೆಯ ಕಥೆಗಳು ಬರೆಯುವುದು ...

READ MORE

Related Books