ತಲಪರಿಗೆ ಜೀವ ಪೊರೆಯುವ ಜಲನಿಧಿ

Author : ಮಲ್ಲಿಕಾರ್ಜುನ ಹೊಸಪಾಳ್ಯ

Pages 130

₹ 100.00




Published by: ಧ್ಯಾನ ಸಂಸ್ಥೆ
Address: ತುಮಕೂರು

Synopsys

‘ತಲಪರಿಗೆ ಜೀವ ಪೊರೆಯುವ ಜಲನಿಧಿ’ ಕೃತಿಯು ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನ ಸಂಕಲನ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಪಾರಂಪರಿಕ ಜಲಮೂಲಗಳನ್ನು ಮರೆಸಿದ ಕೊಳವೆ ಬಾವಿ ಆವಿಷ್ಕಾರವೇ ತಲಪರಿಗೆಗಳನ್ನೂ ಹಿನ್ನೆಲೆಗೆ ಸರಿಸಿತು ಎಂದು ಅಭಿಪ್ರಾಯಪಡುವ ಅವರು, ಅವುಗಳ ಪುನರುಜ್ಜೀವನ ಬಹಳ ಉತ್ತಮ ಆಯ್ಕೆಯಾಗಿದೆ. ವಿಸ್ತಾರ ಕ್ಷೇತ್ರಕಾರ್ಯ ಹಾಗೂ ಕಾರ್ಯಾಗಾರ ಈ ಪುಸ್ತಕದ ಬೆನ್ನಿಗಿರುವುದನ್ನು ಕಾಣಬಹುದು. `ಎಳನೀರಿನ ಕೊಡ ತಲಪರಿಗೆ‘, `ಬಯಲು ಸೀಮೆಯ ಜಲನಿಧಿ‘, `ಜೀವ ವೈವಿಧ್ಯದ ತಾಣ‘, `ತಲಪರಿಗೆ ವ್ಯವಸ್ಥೆಯ ಸಮಸ್ಯೆಗಳು‘, `ಎಂದೂ ಬತ್ತದ ತಲಪರಿಗೆಗಳು‘ ಮುಂತಾದ ಶೀರ್ಷಿಕೆಯಡಿ ನಾನಾ ಲೇಖಕರು ಬರೆದಿರುವ ಲೇಖನಗಳನ್ನು ಈ ಕೃತಿಯು ಸಂಪಾದಿಸಿದೆ. 

 

About the Author

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.  ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...

READ MORE

Related Books