ಕಾಶ್ಮೀರ್ ಡೈರಿ

Author : ಉಮೇಶ್ ಎಸ್.

₹ 250.00




Year of Publication: 2022
Published by: ಧಾತ್ರಿ ಪ್ರಕಾಶನ
Address: ನಂ.240, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕೃಷ್ಣಮೂರ್ತಿ ಬಡಾವಣೆ, ನ್ಯೂ ಕಾಂತರಾಜೀ ಅರಸು ರಸ್ತೆ, ಮೈಸೂರು- 570009
Phone: 9900580394

Synopsys

ಉಮೇಶ್ ಎಸ್ ಅವರ ಕಾಶ್ಮೀರದ ಬಗೆಗೆ ಬರೆದಿರುವ ಕೃತಿ ಕಾಶ್ಮೀರ್ ಡೈರಿ. ಕೃತಿಯ ಬೆನ್ನುಡಿಯಲ್ಲಿ ಲೇಖಕರೇ ಹೇಳಿರುವಂತೆ, ಕಾಶ್ಮೀರ ಎನ್ನುವುದು ಕೇವಲ ಒಂದು ಹಿಮ ಕಣಿವೆಯಲ್ಲ, ದೇವದಾರು ವೃಕ್ಷಗಳ ನಾಡಲ್ಲ, ಕೇವಲ ಉಗ್ರಗಾಮಿಗಳ ತವರೂರಲ್ಲ, ಕೇವಲ ಒಂದು ಖಂಡವಾಗಿ ಉಳಿದಿಲ್ಲ, ಅತ್ಯಂತ ಪ್ರಾಚೀನ ಇತಿಹಾಸ ಅಷ್ಟೇ ಹಳವಂಡ ಅನುಭವಿಸಿದ ಸೀಮಾಂತ ರಾಜ್ಯ. ಉಳಿದ ರಾಜ್ಯಗಳ ಇತಿಹಾಸವನ್ನು ಕುಂಚದಲ್ಲಿ ಅದ್ದಿ ಬರೆದರೆ, ಕಾಶ್ಮೀರ ತನ್ನ ಇತಿಹಾಸ ಬರೆಯಲು ರಕ್ತವನ್ನು ಕೇಳುತ್ತದೆ. ಅದು ಭೂಸ್ವರ್ಗದ ಅತಿದೊಡ್ಡ ದುರಂತ. ಈ ನೆಲದ ಈ ಕ್ಷಣದ ದುರಂತವೇನೆಂದರೆ ಇಲ್ಲಿ ರಕ್ಷಕರನ್ನು ಭಕ್ಷಕರ ಹಾಗೆ ನೋಡಲಾಗುತ್ತದೆ. ಜನಸಾಮಾನ್ಯರು ಎನಿಸಿಕೊಂಡವರು ಮರೆಯಲ್ಲಿ ನಿಂತು ಉಗ್ರ ನರ್ತನ ಮಾಡುತ್ತಿದ್ದಾರೆ. ಇದು ಎಂದೂ ಮುಗಿಯದ ಯುದ್ಧವಾ? ಉತ್ತರ ಹುಡುಕಬೇಕಿದೆ. ಆದರೆ ಇತಿಹಾಸವನ್ನು ತೆರೆದಿಡಬಹುದು. ಕಾಶ್ಮೀರ ನಮಗೆ ಹೇಳುವುದು ಇಷ್ಟೇ. ನಾನೊಂದು ಆಸ್ಮಿತೆ. ಕಾಶ್ಮೀರ ಎನ್ನುವುದು ಒಂದು ಮನಸ್ಥಿತಿ ಎಂಬುದಾಗಿ ಹೇಳಿದ್ದಾರೆ.

About the Author

ಉಮೇಶ್ ಎಸ್.

ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...

READ MORE

Related Books