ಅಸಮಾನತೆಯ ಉದಾರೀಕರಣ

Author : ಅಮ್ಮಸಂದ್ರ ಸುರೇಶ್

Pages 180

₹ 180.00




Year of Publication: 2022
Published by: ವಂಶಿ ಪ್ರಕಾಶನ ಮೈಸೂರು
Address: ವಂಶಿ ಪ್ರಕಾಶನ, ನೆಲಮಂಗಲ, ಬೆಂಗಳೂರು 562123
Phone: 9916595916

Synopsys

'ಅಸಮಾನತೆಯ ಉದಾರೀಕರಣ' ಅಮ್ಮಸಂದ್ರ ಸುರೇಶ್ ಅವರ ಕೃತಿ. ಜಾಗತೀಕರಣ ಮತ್ತು ಖಾಸಗೀಕರಣದ ಸಂದರ್ಭದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಮಸ್ಯೆಗೆ ಒಂದು ಬಲವಾದ ಮತ್ತು ವಿಶಿಷ್ಟವಾದ ಧ್ವನಿ ಇಂದು ಅವಶ್ಯಕವಾಗಿ ಬೇಕಾಗಿದೆ. ಒಳಗೊಳ್ಳುವಿಕೆ ಬೆಳವಣಿಗೆ ಎನ್ನುವುದು ಒಂದು ಬಿಸಿಲು ಕುದುರೆಯಾಗಿ ಪರಿವರ್ತನೆ ಆಗಿದೆಯೇ ಎನ್ನುವ ಅನುಮಾನ ಈಗ ದಟ್ಟವಾಗಿ ಕಾಡುತ್ತಿದೆ. ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ಮೇಲಿನ ಅಂಶಗಳು ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಈ ಪುಸ್ತಕದ ಲೇಖನಗಳು ಹೇಳುತ್ತವೆ.

ಕಳೆದ 75ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನಿಸಿದರೆ ನಾವೆಲ್ಲ ಇನ್ನೂ ಬಹಳಷ್ಟು ದೂರ ದೂರ ಸಾಗಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಉದಾರೀಕರಣ ಎನ್ನುವುದು ಜಾಗತೀಕರಣದ ಒಂದು ಬಹುಮುಖ್ಯ ಅಂಗ. ಉದಾರೀಕರಣವನ್ನು ಅಸಮಾನತೆಗೆ ಜೋಡಿಸುವ ಪ್ರಯತ್ನ ವಿಶ್ವದೆಲ್ಲೆಡೆ ಬಹಳ ವರ್ಷಗಳಿಂದ ನಡೆಯುತ್ತಿದ್ದರೂ ಸಹ ಇಲ್ಲಿಂದ ಪ್ರತಿಕ್ರಿಯೆ ಬರುತ್ತಿರುವುದು ಸಮಾಜವಿಜ್ಞಾನಿಗಳಲ್ಲಿ ಗೊಂದಲವನ್ನು ಹೆಚ್ಚು ಮಾಡಿದೆ. ಉದಾರೀಕರಣ ಕುರಿತಾಗಿ ಇದುವರೆಗೆ ನಡೆದಿರುವ ನೂರಾರು ಸಂಶೋಧನೆಗಳ ಪ್ರಕಾರ ಹೇಳುವುದಾದರೆ ದರ್ಶನ ಪ್ರಕ್ರಿಯೆಯು ಕೋಟ್ಯಂತರ ಮಂದಿಯನ್ನು ಬಡತನದ ರೇಖೆಯಿಂದ ಸ್ವಲ್ಪ ಮೇಲೆ ಬಂದಿರುವ ಮತ್ತು ಆರ್ಥಿಕ ಸಂವರ್ಧನೆ, ನಿರ್ಧಾರ ಕೈಗೊಳ್ಳುವಿಕೆ, ಜಾತಿ ತಾರತಮ್ಯ, ಸಂಪತ್ತಿನ ಅಸಮಾನ ಹಂಚಿಕೆ ಒಳಗೊಂಡ ಬೆಳವಣಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡುತ್ತಾ ಅಸಮಾನತೆಯ ಅಂತರವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೂ ಉದಾರಿಕರಣ ಅಸಮಾನತೆಯ ಅಂತರವನ್ನು ಸಂಪೂರ್ಣ ನಿವಾರಿಸುವುದರಲ್ಲಿ ಸೋತಿದೆ ಎನ್ನುವುದು ಸಹ ಅಷ್ಟೇ ಸತ್ಯ. ಅದೇ ರೀತಿ ಬಹುತ್ವ ಭಾರತವೂ ಸೇರಿದಂತೆ ಅಸಮಾನತೆ ಪರಿಕಲ್ಪನೆ ದೇಶದಿಂದ ದೇಶಕ್ಕೆ ಬದಲಾಗುತ್ತಿರುವ ಈ ಸಮಯದಲ್ಲಿ ನಮಗೆ ಸ್ಥಳೀಯ ಮಟ್ಟದ ತಳಸ್ಪರ್ಶಿಯ ದತ್ತಾಂಶಗಳ ಅವಶ್ಯಕತೆಯಿದೆ.

ಈ ಸಂದರ್ಭದಲ್ಲಿ ಲೇಖಕ, ಅಂಕಣಕಾರ ಮತ್ತು ಮಾಧ್ಯಮ ವಿಶ್ಲೇಷಕ ಡಾ. ಅಮ್ಮಸಂದ್ರ ಸುರೇಶ್ ಅವರ “ಅಸಮಾನತೆಯ ಉದಾರಿಕರಣ” ಕೃತಿಯು ಅಸಮಾನತೆಯನ್ನು ನಿರ್ದಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೇಗೆ ಅರ್ಥೈಸಿಕೊಳ್ಳಬೇಕು ಮತ್ತು ಅದರ ವಿವಿಧ ಆಯಾಮಗಳನ್ನು ಹೇಗೆ ವಿಸ್ತರಿಸಬೇಕು, ವಿಶ್ಲೇಷಿಸಬೇಕು ಎನ್ನುವುದನ್ನು ವಿವರವಾಗಿ ನಮಗೆ ತಿಳಿಸುತ್ತದೆ. ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಅಂಕಣಗಳ ರೂಪದಲ್ಲಿ ಬಂದ ಲೇಖನಗಳನ್ನು ಸೇರಿಸಿ ಲೇಖಕರು ಈ ಕೃತಿಯನ್ನು ತಂದಿದ್ದು ಉದಾರೀಕರಣದ ಬೆಳ್ಳಿಹಬ್ಬದ ನಂತರದ ಸಂಕ್ರಮಣದ ಈ ಕಾಲಘಟ್ಟದಲ್ಲಿ ಉದಾರೀಕರಣ ಮತ್ತು ಅಸಮಾನತೆ ಇನ್ನು ಸಹ ಹೇಗೆ ಕಂಡೂ ಕಾಣದೆ ಮುಂದುವರೆಯುತ್ತಿದೆ ಎಂಬುದನ್ನು ಲೇಖಕರು ತಮ್ಮದೇ ಆದ ರೀತಿಯಲ್ಲಿ ಸರಳವಾಗಿ ಹೇಳುತ್ತಾ ಹೋಗಿದ್ದಾರೆ. ಉದಾರಿಕರಣ ಮತ್ತು ಬಡತನ ನಿವಾರಣೆ ವಿಚಾರದಲ್ಲಿ ಇಲ್ಲಿನ ಲೇಖನಗಳು ಒಂದು ಪರಾಮರ್ಶನ ಗ್ರಂಥವಾಗುವುದರಲ್ಲಿ ಯಶಸ್ಸು ಕಂಡಿದೆ. ಜೊತೆಗೆ ಸಾಗಬೇಕಾದ ದಾರಿ ಯಾವ ರೀತಿಯಲ್ಲಿ ಇರಬೇಕು ಎನ್ನುದನ್ನು ಸಹ ನಮಗೆ ಈ ಕೃತಿ ಹೇಳುತ್ತದೆ.

About the Author

ಅಮ್ಮಸಂದ್ರ ಸುರೇಶ್

ಅಮ್ಮಸಂದ್ರ ಸುರೇಶ್  ಅವರು ಮೂಲತಃ  ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ  ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ  ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು   ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...

READ MORE

Related Books