ಚಿಂತಾಮಣಿ (ಲೇಖನಗಳ ಸಂಕಲನ)

Author : ಸವಿತಾ ಸಿರಗೋಜಿ

Pages 120

₹ 150.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಡಾ.ಸವಿತಾ ಸಿರಗೋಜಿ ಅವರ ಕೃತಿ- ‘ಚಿಂತಾಮಣಿ’. ಇಲ್ಲಿ 30 ಚಿಂತನೆಗಳಿವೆ. ಗುರು, ಧರ್ಮ, ಭಕ್ತಿ, ಪ್ರಾರ್ಥನೆ, ಓದುಬರಹ, ಚಿಂತನ, ವಿವೇಕ, ಶಕ್ತಿ, ಬೆಳಕು,ಯಶಸ್ಸು, ದಾನ, ಯೋಗ, ಪ ಭಾವ ಸಂಪನ್ನತೆ, ಒಕ್ಕಲುತನ,ಕುಟುಂಬ, ಕರುಳು ಬಂಧುಗಳು, ಅನಂತಕೋಟಿ ಬ್ರಹ್ಮಾಂಡದಲ್ಲಿರುವ ವಿಷಯಾನುಕ್ರಿಯೆಯಲ್ಲಿ ತುಂಬಿಕೊಂಡ ಒಡನಾಟಗಳ ಫಲಶ್ರುತಿ ನಿತ್ಯಾನಂದ ಪ್ರಾಪ್ತಿ. ಅದೇ ನಮ್ಮ ಬದುಕು ನೀಡುವ ಸ್ವಾನಂದ ಇವೆಲ್ಲವುಗಳ ನಾಡಿಮಿಡಿತಗಳನ್ನು ಚಿಂತನೆಗಳು ಈ ಕೃತಿಯಲ್ಲಿವೆ. ಸಂಘರ್ಷಕ್ಕಿಡಾದ ಮನಸ್ಸಿನ ಆಯಾಸ, ಉಲ್ಲಾಸ,ನೀರವತೆ, ಅಲ್ಲೋಲ ಕಲ್ಲೋಲತೆ,ಸಿಟ್ಟು-ಸೆಡವು, ಪ್ರೀತಿ ಕಕ್ಕುಲಾತಿ,ಉಮೇದಿ,ಇಂತಹ ಅನೇಕ ತಾಕಲಾಟಗಳು ಮoಥನ ಗೊಂಡು ಇಲ್ಲಿರುವ ವೈವಿಧ್ಯಪೂರ್ಣ ಉಪಶೀರ್ಷಿಕೆಗಳ ಮೂಲಕ ಸಾಧಿಸುವ ಪ್ರಯತ್ನವನ್ನು ಈ ಕೃತಿ ಸಾಧಿಸಿದೆ. 

About the Author

ಸವಿತಾ ಸಿರಗೋಜಿ
(05 September 1968)

ಸವಿತಾ ಸಿರಗೋಜಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸುರಪುರದವರು. ತಂದೆ- ವೀರಣ್ಣ, ತಾಯಿ- ಮಾಣಿಕ್ಯಬಾಯಿ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಶೃಂಗಾರ ಶಾಯಿರಿಗಳು (ಕವನ ಸಂಕಲನ), ಮಹಾವೀರ(ಜೀವನ ಚರಿತ್ರೆ), ಎಂ.ಪಿ.ಜಾಲಿ (ವ್ಯಕ್ತಿ ಚಿತ್ರಣ), ಕುಂಭಕರ್ಣನ ಒಕ್ಕಲು(ಲಲಿತ ಪ್ರಬಂಧ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books