ಕುಕ್ಕೆ ಸುಬ್ರಹ್ಮಣ್ಯ

Author : ಲಕ್ಷ್ಮೀ ಮಚ್ಚಿನ

Pages 80

₹ 35.00




Year of Publication: 2013
Published by: ಹೇಮಂತ ಪ್ರಕಾಶನ
Phone: 08023507170

Synopsys

ಲೇಖಕ ಲಕ್ಷ್ಮೀ ಮಚ್ಚಿನ ಅವರ ಕೃತಿ ‘ಕುಕ್ಕೆ ಸುಬ್ರಹ್ಮಣ್ಯ’. ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಇತಿಹಾಸ, ಪ್ರವಾಸೋದ್ಯಮದ ಕುರಿತು ಬೆಳಕು ಚೆಲ್ಲುವ ಪುಸ್ತಕ ಇದಾಗಿದೆ. ಕನ್ನಡ ನಾಡು ಸಾಹಿತ್ಯ, ಸಂಗೀತ, ನಾಟಕ ನೃತ್ಯ, ಜಾನಪದ, ಶಿಲ್ಪ, ಕಾಡು, ಕಡಲು, ಬೆಳದಿಂಗಳಿಂದ ಶ್ರೀಮಂತವಾಗಿದೆ. ಕರ್ನಾಟಕಕ್ಕೊಂದು ಘನಪರಂಪರೆ, ಇತಿಹಾಸ, ಸಂಸ್ಕೃತಿಯಿದೆ. ಇದು ವೀರರ ಭೂಮಿಯಾಗಿದ್ದಂತೆ, ತ್ಯಾಗಜೀವಿಗಳ, ಸಂತ, ಶರಣರ,ದೇವದೇವಾಲಯಗಳ ಪುಣ್ಯಭೂಮಿಯೂ ಆಗಿದೆ. ಈ ನದಿ-ನದಗಳನಾಡಿನಲ್ಲಿ ನಾವು ಹುಟ್ಟಿ ಈ ನೆಲದ ಪವಿತ್ರ ನೀರನ್ನು ಕುಡಿದು, ಹಕ್ಕಿಗಳ ಇಂಚರವನ್ನಾಲಿಸಿ, ಮನಮುದಗೊಳಿಸುವ ಸುಗಂತ ಹವೆಯನೀಂಟಿ ಬದುಕು ಕಟ್ಟಿಕೊಳ್ಳುತ್ತಿರುವ ನಾವು ಈ ಭೂಮಿ ನಮ್ಮದು ಎಂದು ಅಭಿಮಾನದಿಂದ ಹೇಳಿಕೊಳ್ಳುವುದೇ ನಮ್ಮದೊಂದು ಭಾಗ್ಯ. ಈ ನಾಡಿನ ಮುಂದಿನ ಜನಾಂಗ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಂಡು ನಾಡುಕಟ್ಟುವ ಕಾರ್ಯದಲ್ಲಿ ಕ್ರಿಯಾಶೀಲರಾಗಬೇಕೆಂಬುದೇ ಈ ಸಾಹಿತ್ಯಸರಣಿಯ ಮೂಲಗುರಿ. ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರು ನಾಡಿನ ವಿವಿಧ ಮುಖಗಳ ಪರಿಚಯ ಇಲ್ಲಿ ಮಾಡಿಕೊಟ್ಟಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ನೂರಾರು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವ ಕಾರ್ಯದಲ್ಲಿ ಬೆಂಗಳೂರಿನ ಹೇಮಂತ ಸಾಹಿತ್ಯ ತನ್ನನ್ನು ಅರ್ಪಿಸಿಕೊಂಡಿದೆ. ಐವತ್ತು ವರ್ಷ ತುಂಬಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳಿಗೆ ನೂರು ಪುಸ್ತಕ ಕೊಡುವ ಸಂಕಲ್ಪ ಹೊಂದಿದೆ. ಪುಸ್ತಕದ ಪ್ರಧಾನ ಸಂಪಾದಕರು ಶಾ.ಮಂ. ಕೃಷ್ಣರಾಯರು

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books