ಯಾರಲ್ಲಿ ಹೇಗೆ ಮಾತಾಡುವುದು

Author : ಶಿವಾನಂದ ಬೇಕಲ್

Pages 336

₹ 499.00




Year of Publication: 2023
Published by: ಮಂಜುಳ್‌ ಪಬ್ಲಿಷಿಂಗ್‌ ಹೌಸ್‌

Synopsys

‘ಯಾರಲ್ಲಿ ಹೇಗೆ ಮಾತಾಡುವುದು’ ಶಿವಾನಂದ ಬೇಕಲ್‌ ಅವರ ಯಶಸ್ಸಿನ ತಂತ್ರಗಳ ಕುರಿತಾದ 92 ಸರಳ ಸೂತ್ರಗಳನ್ನೊಳಗೊಂಡ ಕೃತಿಯಾಗಿದೆ. ಯಾವತ್ತೂ ಮಾತುಗಳಿಗಾಗಿ ಮತ್ತೊಮ್ಮೆ ಪರದಾಡದಿರಿ! ಬದುಕಿನಲ್ಲಿ ಯಶಸ್ಸನ್ನು ಹೊಂದಿ ಎಲ್ಲವನ್ನೂ ಪಡೆದಿರುವಂತೆ ತೋರುವ ಮಂದಿಯನ್ನು ನೀವು ಪ್ರಶಂಸಾ ದೃಷ್ಟಿಯಿಂದ ನೋಡಿದ ಸಂದರ್ಭಗಳು ಇದ್ದಿರಬಹುದಲ್ಲವೇ? ಪಾರ್ಟಿಗಳಲ್ಲಿ ಮತ್ತು ಔದ್ಯಮಿಕ ಮೀಟಿಂಗ್‌ಗಳಲ್ಲಿ ಅವರು ಬಹಳ ಭರವಸೆಯಿಂದ ಮಾತಾಡುತ್ತಾರೆ. ಅತ್ಯಂತ ಉನ್ನತ ಹುದ್ದೆ, ಸಂತುಷ್ಟ ಸಂಗಾತಿ ಮತ್ತು ಆತ್ಮೀಯ ಸ್ನೇಹಿತರನ್ನು ಅವರು ಹೊಂದಿರುತ್ತಾರೆ. ಅವರೇನು ನಿಮಗಿಂತ ಅಷ್ಟೇನೂ ವಿಶೇಷ ಪರಿಣತಿಯನ್ನು ಹೊಂದಿದವರಲ್ಲ ಅಥವಾ ನಿಮಗಿಂತ ಹೆಚ್ಚು ಆಕರ್ಷಕ ವ್ಯಕ್ತಿತ್ವವುಳ್ಳ ಅಸಾಮಿಗಳೂ ಅಲ್ಲ. ಅಂದಾಗ ಅವರ ರಹಸ್ಯವೇನು? ಸರಳವಾಗಿ ಹೇಳುವುದಿದ್ದರೆ ಇತರರೊಂದಿಗೆ ಅವರು ನಡೆಸುವ ಸಂಹವನ ಹೆಚ್ಚು ಕೌಶಲ್ಯಪೂರ್ಣವಾಗಿರುತ್ತದೆ. ಅಷ್ಟೆ. ಸಂಬಂಧಗಳ ವಿಷಯದಲ್ಲಿ ಬೆಸ್ಟ್ ಸೆಲ್ಲಿಂಗ್ ಲೇಖಕಿಯೂ, ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಾಗಿ ಹೆಸರಾಂತರಾಗಿರುವ ಲೀಲ್ ಲೋಂಡ್‌ಸ್ ರ ಯಾರಲ್ಲಿ ಹೇಗೆ ಮಾತಾಡುವುದು ಎಂಬ ಈ ಪುಸ್ತಕ ಯಶಸ್ವೀ ಸಂವಹನ ಸಂಪರ್ಕಗಳ ರಹಸ್ಯವನ್ನೂ ಮನೋ-ವಿಜ್ಞಾನದ ಅಂಶಗಳನ್ನೂ ತಿಳಿಸಿಹೇಳುತ್ತದೆ.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books