ಮಸೀದಿ ಮೇಲಿನ ಮೈಕ್

Author : ಶರಣಪ್ಪ ಕೂಡ್ಲಪ್ಪ ಹೂಲಗೇರಿ

Pages 132

₹ 150.00




Year of Publication: 2022
Published by: ಕಸ್ತೂರಿ ಪ್ರಕಾಶನ
Address: ಐಬಿ ಹಿಂದುಗಡೆ, ಮುಕ್ಕನ್ನಾವರ್ ಪ್ಲಾಟ್, ಹುನಗುಂದ್ 587118, ಬಾಗಲಕೋಟೆ ಜಿಲ್ಲೆ

Synopsys

ಲೇಖಕ ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರ ಲೇಖನ ಸಂಕಲನ ಮಸೀದಿ ಮೇಲಿನ ಮೈಕ್ . ಡಿ.ಎಸ್. ಪಾಟೀಲ ಅವರು ಈ ಕೃತಿಗೆ ಬೆನ್ನುಡಿಯ ಮಾತಗಳನ್ನು ಬರೆದಿದ್ದು, ಅಧ್ಯಾಪಕರಾದವರಿಗೆ ಓದು, ಬರಹ ನಿತ್ಯದ ಧ್ಯಾನಗಳಿದ್ದಂತೆ. ಒಂದು ಬರ್ಥಕೈಗೊಳ್ಳುವುದು ಕೇವಲ ಪಠ್ಯದಲ್ಲಿನ ವಿಷಯದಿಂದಲ್ಲ, ಆದರೊಟ್ಟಿಗೆ ವಿದ್ಯಾರ್ಥಿಗಳ ಮನಮುಟ್ಟುವಂತೆ ಪಾಠ ಮಾಡಲು ವಿವಿಧ ಮಾರ್ಗಗಳನ್ನು ಅನುಸರಿಸಬೇಕು. ಈ ಹಾದಿಯಲ್ಲಿ ಸಾಹಿತ್ಯದ ಸ್ಪರ್ಷ ಮತ್ತು ಪಾಠದ ಮಾರ್ಗವೂ ಒಂದಾಗಬಹುದು. ಈ ದೆಸೆಯಲ್ಲಿ ಶರಣಪ್ಪ ಅವರ =ಚಿಗೆ ಇದೆ ಎಂಬುದು ಅಭಿಮಾನದ ಸಂಗತಿ, ಈಗಾಗಲೇ ಮೂರು ಕೃತಿಗಳನ್ನು ಕನ್ನಡದಲ್ಲಿ ತಂದಿರುವ ಇವರು ಸಾಕಷ್ಟು ವೈಚಾರಿಕ ಪ್ರಜೆಯುಳ್ಳವರು. ಅದನ್ನು ಬರೆಹದಲ್ಲಿ ತೊಡಗಿಸಿಕೊಂಡದ್ದು ಇನ್ನೂ ಸೂಕ್ತ ಸಮಾಜ ಒಳಿತಿನ ಇವರ ತುಡಿತ, ಸಹಾಯಗುಣ ಮತ್ತು ಸಂಘಟನಾ ಚತುರತೆ ಇವರಲ್ಲಿ ಮೈಗೂಡಿವೆ. ಬರೆಹ ಲೋಕದಲ್ಲಿ ಹೊಸ ವಿಚಾರಗಳಿಂದ ಕೃತಿಗಳು ಪ್ರಕಟವಾಗಿ ಹೆಸರು ಮಾಡಲಿ ಎಂಬುದಾಗಿ ಹೇಳಿದ್ದಾರೆ.

ಸಂಗಮೇಶ ಎಂ. ಗೌಡಪ್ಪನವರ ಅವರು ಬೆನ್ನುಡಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ಸೃಜನಾತ್ಮಕ ಕ್ಷೇತ್ರಕ್ಕೆ ವಾಲಿಕೊಂಡ ಶರಣಪ್ಪ ನಮ್ಮ ನಡುವಿನ ಪ್ರತಿಭಾವಂತ ಉಪನ್ಯಾಸಕರು, ತೀರ ಸಂಕಷ್ಟಗಳಿಂದ ತನ್ನ ಬದುಕು ಕಟ್ಟಿಕೊಂಡು ಸಧ್ಯ ನೆಮ್ಮದಿಯ ವಾಳು ಸಾಗಿಸುತ್ತಿದ್ದಾರೆ. ಧಾರವಾಡದ 1990 ರ ಆ ದಿನಗಳಲ್ಲಿಯೇ ವೈಚಾರಿಕ, ಕ್ರಾಂತಿಕಾರಕ ವಿಚಾರಧಾರೆಗಳಿಗೆ ಮೈಕೊಟ್ಟವರು. ಕಲಿವಿನ ನಂತರ ಅಧ್ಯಾಪನ ಕ್ಷೇತ್ರದಲ್ಲಿ ತಮ್ಮ ಆ ಎಲ್ಲ ಅನುಭವವನ್ನು ಹಿಗ್ಗಿಸಿಕೊಂಡು ಬರಹ ಲೋಕದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅಹಿತಗಳನ್ನು ಯಾವತ್ತೂ ಸಹಿಸದ ಇವರು ಅದರ ಪ್ರತಿಭಟನೆಗೆ ಸಾಹಿತ್ಯದ ಹಾದಿಯನ್ನು ಹಿಡಿದು ಕೃತಿಯ ಆಶಯಗಲಲ್ಲಿ ಅವುಗಳನ್ನು ತಂದು ಸಮಾಜದ ಒಳಿತಿಗೆ ಸ್ಪಂದಿಸುವ ಗುಣ ಮೆಚ್ಚುವಂತಹದ್ದು, ಈ ಕೃತಿಯ ಒಳಹೂರಣವೂ ಅದೇ ಆಗಿದೆ. ಅವರಿಗೆ ಒಳಿತಾಗಲಿ ಎಂಬುದಾಗಿ ಹಾರೈಸಿದ್ದಾರೆ.

About the Author

ಶರಣಪ್ಪ ಕೂಡ್ಲಪ್ಪ ಹೂಲಗೇರಿ
(01 September 1967)

ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರು 01-09-1967ರಂದು ಜನಿಸಿದರು. ಎಂ.ಎ.ಎಂ.ಇಡಿ ವಿದ್ಯಾರ್ಹತೆಯನ್ನು ಹೊಂದಿದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕನಾಗಿ ಬಡ್ತಿ ಹೊಂದಿದರು. ಸದ್ಯ ಹುನಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಮಾಡರ್ನ್ ಮಾನವರು (2016), ಹೊರೂನಾ ಕಾಲ (2021), ನೆನಪಂಬ ಹಾಯಿದೋಣಿ (2022) ಕವನ ಸಂಕಲನಗಳು, ಧ್ರುವತಾರೆ (2017) ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಪಾದಿತ ಏಳು ನಾಟಕಗಳು ಸಂಕಲನದಲ್ಲಿ ಪ್ರಕಟವಾಗಿದೆ. ...

READ MORE

Related Books