ಹಂಗರಹಳ್ಳಿಯ ಬರ್ಬರ ಸಂಕೋಲೆಗಳು

Author : ಸುದೇಶ ದೊಡ್ಡಪಾಳ್ಯ

Pages 192

₹ 200.00




Year of Publication: 2023
Published by: ವಿಸ್ಮಯ ಬುಕ್‌ ಹೌಸ್‌

Synopsys

ಹಂಗರಹಳ್ಳಿಯ ಬರ್ಬರ ಸಂಕೋಲೆಗಳು ಸುದೇಶ ದೊಡ್ಡಪಾಳ್ಯ ಅವರ ಕೃತಿಯಾಗಿದೆ. ಈ ಅಂಕಣ ಬರಹಗಳಲ್ಲಿ ಗಮನ ಸೆಳೆಯುವ ಬಹಳಷ್ಟು ಕಥನಗಳಿವೆ. ಹಾಗೆ ನೋಡಿದರೆ, ಇವು ಬಿಡಿ ಬಿಡಿ ಕತೆಗಳೇ ಆಗಿವೆ. ಈ ಪ್ರಾಂತ್ಯದ ಗೋಳುಗಳನ್ನು ಮಾತ್ರ ಹೇಳಿಲ್ಲ. ಹಳ್ಳಿಗರ ಕ್ರೀಡಾಶಕ್ತಿಯನ್ನು ನಿರೂಪಿಸಲಾಗಿದೆ. ನಾಗರಪಂಚಮಿಯ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಡೆಯುವ ಪಂದ್ಯಗಳು, ಅವುಗಳಲ್ಲಿ ತೋರಿಸುವ ಸಾಹಸ ಮೈ ನವಿರೇಳಿಸುತ್ತವೆ. ಈ ಪಂದ್ಯಗಳಲ್ಲಿ ಗೆಲ್ಲುವ ಯುವಕರ ಚೈತನ್ಯ ಅಸಾಧಾರಣ. ಸುದೇಶ ದೊಡ್ಡಪಾಳ್ಯ ಈ ಕೃತಿಯ ತುಂಬ ಈ ಪ್ರಾಂತ್ಯದ ಬದುಕಿನ ಕಥನಗಳನ್ನೇ ಚಿತ್ರಿಸಿದ್ದಾರೆ. ಇವು ಏಕಕಾಲಕ್ಕೆ ಈ ಪ್ರಾಂತ್ಯದ ಹಿಂದುಳಿಯುವಿಕೆಯನ್ನು ತೋರಿಸುತ್ತಿವೆ. ಪ್ರತಿ ಬರಹದ ಕೊನೆಯಲ್ಲಿ ಕೃತಿಗಾರರು ಚಿಕ್ಕ ಷರಾ ಬರೆಯುತ್ತಾರೆ. ಅವುಗಳಲ್ಲಿ ದರ್ಶನ ಮಿಂಚುತ್ತದೆ. ಅಭಿವೃದ್ಧಿಗೆ ಮನಸ್ಸು ಸಿದ್ಧಗೊಳ್ಳುವಂತೆ ಈ ಕೃತಿ ಕೈದಿವಿಗೆಯಾಗಿದೆ. ಪತ್ರಕರ್ತರಾಗಿ ಸುದೇಶ ದೊಡ್ಡಪಾಳ್ಯ ಈ ಪ್ರಾಂತ್ಯಕ್ಕೆ ಬಂದು ಊರೂರು ಅಲೆದು ಹಿಂದುಳುವಿಕೆಯನ್ನು ಕತೆಗಳ ಮೂಲಕ ನಿರೂಪಿಸಿದ್ದಾರೆ. ಅವರ ಈ ಬಗೆಯ ಕಾಯಕ ಮಾಸದಂತೆ ಜೀವಂತವಾಗಿರಲೆಂದು ಆಶಿಸುವೆ. ಎನ್ನುತ್ತಾರೆ ಅಮರೇಶ ನುಗಡೋಣಿ.

About the Author

ಸುದೇಶ ದೊಡ್ಡಪಾಳ್ಯ

ಸುದೇಶ ದೊಡ್ಡಪಾಳ್ಯ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡಪಾಳ್ಯ ಗ್ರಾಮದವರು. ಇವರದು ಕೃಷಿಕ ಕುಟುಂಬ. ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯಲ್ಲಿ  ತೊಡಗಿಸಿಕೊಂಡಿದ್ದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಮೈಸೂರಿನಿಂದ ಪ್ರಕಟವಾಗುವ ‘ಆಂದೋಲನ’ ದಿನಪತ್ರಿಕೆಯಲ್ಲಿ 18 ತಿಂಗಳು ಉಪ ಸಂಪಾದಕ/ವರದಿಗಾರನಾಗಿ ಕೆಲಸ. ಬಳಿಕ ಪ್ರಜಾವಾಣಿ ಸೇರ್ಪಡೆ. ಬೆಂಗಳೂರು ಕಚೇರಿಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಿನಿಮಾ ಆಸಕ್ತಿಯ ಕ್ಷೇತ್ರವಾಗಿದ್ದು, ಸಿನಿಮಾ ಪುರವಣಿಗೆ ಲೇಖನಗಳನ್ನು ಬರೆದಿದ್ದಾರೆ. ವಿಜಯಪುರ ಜಿಲ್ಲಾ ವರದಿಗಾರ, ಮೈಸೂರಿನಲ್ಲಿ ಹಿರಿಯ ವರದಿಗಾರ, ಕಲಬುರಗಿ ಬ್ಯೂರೊ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಕಲಬುರಗಿಯಲ್ಲಿದ್ದಾಗ ...

READ MORE

Related Books