ಟಿಪ್ಪು ನಿಜಸ್ವರೂಪ

Author : ಪ್ರಧಾನ್ ಗುರುದತ್ತ

Pages 167

₹ 90.00




Year of Publication: 2022
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: # 8, 8/1, ಸತ್ಯಪ್ರಮೋದತೀರ್ಥ ಕಟ್ಟಡ, 3ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018
Phone: 08029741676

Synopsys

‘ಟಿಪ್ಪು ನಿಜಸ್ವರೂಪ’ ಕೃತಿಯು ಪ್ರಧಾನ್ ಗುರುದತ್ತ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಟಿಪ್ಪುಚರಿತ್ರೆಯು ಪ್ರಚಲಿತ ಇತಿಹಾಸಕಥನಕ್ಕೂ ಖಚಿತ ಸಾಕ್ಷ್ಯಗಳಿಂದ ಹೊಮ್ಮುವ ಚಿತ್ರಕ್ಕೂ ನಡುವೆ ಇರುವ ವಿಚಾರಗಳನ್ನು ತೋರಿಸುತ್ತದೆ. ಹಾಗೂ ಹಲವೊಮ್ಮೆ ಎಷ್ಟು ಅಗಾಧ ಅಂತರ ಇರುತ್ತದೆ ಎಂಬುದಕ್ಕೆ ನಿಚ್ಚಳ ನಿದರ್ಶನ ಈ ಕೃತಿಯಾಗಿದೆ. ಟಿಪ್ಪುಮೊಟ್ಟಮೊದಲ ಸ್ವಾತಂತ್ರ ಯೋಧ, ಮಹಾನ್ ರಾಷ್ಟ್ರೀಯವಾದಿ ಎನ್ನುವ ವಿಚಾರ ಚಿತ್ರಣಕ್ಕೆ ಆಧಾರಭೂತವಾದ ಇತಿಹಾಸದ ಸಮರ್ಥನೆ ದೊರೆಯದು. ಭಾರತದ ಮೇಲೆ ಆಕ್ರಮಣ ನಡೆಸಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸುವಂತೆ ಆಫಘನಿಸ್ತಾನ, ಪರ್ಷಿಯ, ತುರ್ಕಿ, ಅರೇಬಿಯದ ಪ್ರಭುಗಳಿಗೆ ಮೇಲಿಂದ ಮೇಲೆ ಪತ್ರಗಳನ್ನು ಬರೆಯುತ್ತಿದ್ದ ಟಿಪ್ಪುವನ್ನು ರಾಷ್ಟ್ರೀಯವಾದಿ ಎಂದು ಕೀರ್ತಿಸುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಟಿಪ್ಪುವಿನ ಮತಾಂಧತೆ ಜನಜನಿತವಾಗಿದ್ದು, ದೇವಾಲಯ ವಿಧ್ವಂಸ, ಬಲಾತ್ಕಾರದ ಮತಾಂತರದಲ್ಲಿ ಕ್ರೌರ್ಯದ ಹೊಸ ದಾಖಲೆಗಳನ್ನು ನಿರ್ಮಿಸಿದವ ಎಂದಿದ್ದಾರೆ. ಮೈಸೂರು ಸಂಸ್ಥಾನದ ಮೇಲಣ ಅಧಿಕಾರವನ್ನು ನ್ಯಾಯಬಾಹಿರವಾಗಿ ಟಿಪ್ಪುಸ್ವಾಯತ್ತ ಮಾಡಿಕೊಂಡದ್ದಷ್ಟೆ ಅಲ್ಲದೇ, ತೀವ್ರ ಜನವಿರೋಧಿ ಎಂಬ ಕೀರ್ತಿ ಪಡೆದುಕೊಂಡಿದ್ದ. ಭಾರತದ ಅನ್ಯ ಭಾಗಗಳ ಮುಸ್ಲಿಂ ನವಾಬರಿಂದಲೂ ತಾತ್ಸಾರಕ್ಕೆ ತುತ್ತಾಗಿದ್ದ ಟಿಪ್ಪು ಬಿಟ್ಟುಹೋದ ನೆನಪು ಜನ-ಕಂಟಕನೆಂಬುದು ಮಾತ್ರ ಎಂದು ಇಲ್ಲಿ ವಿಶ್ಲೇಷಿಸಿದ್ದಾರೆ. ವಿಪುಲ ದಾಖಲೆ-ಉಲ್ಲೇಖಗಳೊಡನೆ ಟಿಪ್ಪುಕುರಿತಂತಹ ವಾಸ್ತವತೆಯನ್ನು ದಾಖಲೆಗಳ ಆಧಾರದಲ್ಲಿ ಈ ಗ್ರಂಥದಲ್ಲಿ ಲೇಖಕರು ವಿವರಿಸಿದ್ದಾರೆ.

About the Author

ಪ್ರಧಾನ್ ಗುರುದತ್ತ
(30 May 1938)

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...

READ MORE

Related Books