ಮಾನವ ಸಂಪನ್ಮೂಲ ಸಂವರ್ಧನೆ

Author : ಎಚ್.ಎಂ. ಮರುಳಸಿದ್ದಯ್ಯ



Published by: ನಿರುತ ಪಬ್ಲಿಕೇಶನ್ಸ್‌
Address: ಮಲ್ಲಾತಹಳ್ಳಿ, ಬೆಂಗಳೂರು- 560001
Phone: 9980066890

Synopsys

ಲೇಖಕ ಎಚ್.ಎಂ. ಮರುಳಸಿದ್ಧಯ್ಯ ಅವರ ಕೃತಿ ʻಮಾನವ ಸಂಪನ್ಮೂಲ ಸಂವರ್ಧನೆʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ “ತೀವ್ರಗತಿಯಲ್ಲಿ ಬದಲಾಗುತ್ತಲಿರುವ ಈ ಕಾಲದಲ್ಲಿ ಮಾನವ ಸಮಾಜದಲ್ಲಿ ಮನುಷ್ಯನನ್ನು ಯಂತ್ರವು ಅಡಿಯಾಳನ್ನಾಗಿಸುತ್ತಲಿದೆ. ಮಾನವ್ಯದ ಮೌಲ್ಯಗಳನ್ನು ವಣಿಜ ಮೌಲ್ಯಗಳು ಮಸುಕುಗೊಳಿಸುತ್ತಲಿವೆ. ಇಂಥ ಸಂದರ್ಭದಲ್ಲಿ ಮಾನವನನ್ನೇ ಕೇಂದ್ರವಾಗಿರಿಸಿಕೊಂಡು, ಅವನ ಒಳಗಿರುವ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಕ್ರಮಗಳನ್ನು ಎಲ್ಲ ಕಡೆಯೂ ಕೈಗೊಳ್ಳಬೇಕಾಗಿದೆ. ಈ ಅವಸರವನ್ನರಿತೇ ನನ್ನೀ ಪುಸ್ತಕದ ಮರುಮುದ್ರಣವು ಹೊರಬರುತ್ತಲಿದೆ. ಹಳ್ಳಿಗಳಲ್ಲಿ, ಕಾರ್ಖಾನೆಗಳಲ್ಲಿ, ಕೊಳೆಗೇರಿಗಳಲ್ಲಿ ಮನುಷ್ಯನನ್ನೇ ಕೇಂದ್ರಸ್ಥಾನದಲ್ಲಿರಿಸಿಕೊಂಡು ಕಾರ್ಯನಿರತರಾಗಿರುವವರಿಗೆ ಇದು ನೆರವಾಗುತ್ತದೆ” ಎಂದು ಹೇಳಿದ್ದಾರೆ.

About the Author

ಎಚ್.ಎಂ. ಮರುಳಸಿದ್ದಯ್ಯ
(29 July 1931)

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಪ್ರಯೋಗಶೀಲ, ಹಿರಿಯ ಲೇಖಕರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡಿರುವ ಅವರು ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ, ಹಲವು ಕಾರ್ಯ ಯೋಜನೆಗಳ ಮೂಲಕ ಎಚ್. ಎಮ್. ಎಮ್. ಸಮಾಜ ಕಾರ್ಯಕ್ಕೆ ಹೊಸದೊಂದು ಆಯಾಮವನ್ನು ಒದಗಿಸಿದ್ದಾರೆ. ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ ವಿ) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಮ್. ಎ. ಪಡೆದಿರುವದಲ್ಲದೆ ಸಮಾಜಕಾರ್ಯದಲ್ಲಿ ವಾರಣಾಸಿಯ ಮಹಾತ್ಮ ...

READ MORE

Related Books