ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2

Author : ಎನ್.ಎಸ್‌. ಶ್ರೀನಿವಾಸಮೂರ್ತಿ

₹ 159.00




Year of Publication: 2022
Published by: ಸಹನಾ ಪಬ್ಲಿಕೇಶನ್
Address: ನಂ. 1641, 2ನೇಕ್ರಾಸ್, 1ನೇ ಮೈನ್, 5ನೇ ಹಂತ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿನಗರ, ಬೆಂಗಳೂರು - 98
Phone: 9066618708, 9206644551

Synopsys

ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2 ಕೃತಿಯು ಶ್ರೀನಿವಾಸಮೂರ್ತಿ ಎನ್.ಎಸ್ ಅವರ ಕನಾಟಕದ ಆಯ್ದ 50 ಸ್ಥಳಗಳಲ್ಲಿನ ಸುಂದರ ಅಪರಿಚಿತ ದೇವಾಲಯಗಳ ಪರಿಚಯ ಹಾಗೂ ಮಾರ್ಗಸೂಚಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಳೆದ ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇವರು ಈ ನಿಮಿತ್ತ ರಾಜ್ಯದ ಸುಮಾರು 1800 ಕ್ಕೂ ಅಧಿಕ ಪುರಾತನ ದೇವಾಲಯಗಳ ಭೇಟಿ ನೀಡಿದ್ದು ಇದನ್ನ ಕೇವಲ ಸಂಶೋಧನೆಗೆ ಸೀಮಿತಗೊಳಿಸಿದೇ ಜನಸಾಮಾನ್ಯರಿಗೆ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿರುವ ಇವರು ವಿವಿಧ ಬಳಗದ ಮೂಲಕ ಇತಿಹಾಸದ ಹೊಸ ಹೊರಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟನಲ್ಲಿ ಸುಮಾರು 500 ಕ್ಕೂ ಅಧಿಕ ಲೇಖನಗಳನ್ನು ಅಜ್ಞಾತ ದೇವಾಲಯಗಳ ಬಗ್ಗೆ ಬರೆದಿದ್ದು ನಾಡಿನ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದಲ್ಲದೇ ವಿವಿಧ ಮಾಧ್ಯಮದ ಮೂಲಕ ದೇವಾಲಯಗಳನ್ನು ಪರಿಚಯವನ್ನು ತಲುಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಂತಹ ದೇವಾಲಯಗಳ ಅಂಕಣಗಳಲ್ಲಿ ಆಯ್ದ ಅಪರೂಪದ 50 ಸ್ಥಳಗಳನ್ನ ದೇವಾಲಯಗಳ ಪರಿಚಯ ಈ ಪುಸ್ತಕದಲ್ಲಿದೆ. ಇದರ ಜೊತೆಯಲ್ಲಿ ಬೇಟಿ ನೀಡಿದ ದೇವಾಲಯಗಳ ಛಾಯಚಿತ್ರಗಳನ್ನು ತೆಗೆಯುವ ಹವ್ಯಾಸ ಹೊಂದಿದ್ದು ಸುಮಾರು 20,000 ಕ್ಕೂ ಅಧಿಕ ಛಾಯಾಚಿತ್ರಗಳು ಸಂಗ್ರಹ ಮಾಡಿದ್ದು ಆಸಕ್ತರ ಅಧ್ಯಯನಕ್ಕೆ ಹಾಗು ಪರಿಚಯಕ್ಕೆ ಅನುವು ಮಾಡಿ ಕೊಟ್ಟಿದ್ದಾರ ಎಂದು ವಿಶ್ಲೇಷಿತವಾಗಿದೆ.

About the Author

ಎನ್.ಎಸ್‌. ಶ್ರೀನಿವಾಸಮೂರ್ತಿ

ಲೇಖಕ ಎನ್.ಎಸ್‌. ಶ್ರೀನಿವಾಸಮೂರ್ತಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವಿದ್ಯಾಭ್ಯಾಸವನ್ನು ಪಡೆದಿರುವ ಅವರು ನಾಲ್ಕು ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಳೆದ 24 ವರ್ಷಗಳಿಂದ ಕರ್ನಾಟಕ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-1, ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2 ...

READ MORE

Related Books