ಜನವಾಣಿ

Author : ಕೃಷ್ಣಮೂರ್ತಿ ಹೆಬ್ಬಾರ

Pages 180

₹ 200.00




Year of Publication: 2022
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

'ಜನ ಬದುಕಲೆಂದೇ ಕಾವ್ಯ ಬರೆವೆ' ನೆಂದ ರಾಘವಾಂಕನಂತೆ. ಜೀಯು ಅವರ ಅಕ್ಷರ ವ್ಯವಸಾಯವೂ ಸಹ ಅಕ್ಷರಶ: 'ಜನವಾಣಿಯೇ. ಸರಳ,ಸ್ಪಷ್ಟ, ನೇರ, ನಿರಾಡಂಬರ.. ವರ್ತಮಾನದ ವಸ್ತುಸ್ಥಿತಿಯನ್ನು ಸಮಾಜಮುಖಿ ಚಿಂತನೆಯಾಗಿಸುತ್ತಲೇ ತನ್ನ ಪ್ರಸಾದಗುಣದಿಂದ ಸಮುದಾಯದ ಪ್ರಜ್ಞೆಯನ್ನು ವಿಸ್ತರಿಸುವಂಥದ್ದು; ಸ್ಥಳೀಯವಾದುದನ್ನೂ ತನ್ನ ಬಹುಜ್ಞತೆಯ ಗುಣದಿಂದ ವಿಶ್ವಾತ್ಮಕವಾಗಿಸುವಂಥದ್ದು. ಓದಿನ, ಅನುಭವದ, ಅರಿವಿನ ಹರಹನ್ನು ಬಯಲಲ್ಲಿ ಬೇರೂರಿದ ಮರದಂತೆ ಕಾಂಡ- ಚಿಗುರಿಗೆ ಊರ್ಧ್ವಮುಖಿಯಾಗಿ ಉಣಿಸುವಂಥದ್ದು.. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕಾ ಬರವಣಿಗೆಯ ಪ್ರಧಾನಗುಣವಾದ ಪ್ರೀತಿಯಿಂದ ಪೊರೆಯುವಂಥದ್ದು ಎನ್ನುತ್ತಾರೆ ನಾಗರಾಜ ಹೆಗಡೆ, ಅಪಗಾಲ.

About the Author

ಕೃಷ್ಣಮೂರ್ತಿ ಹೆಬ್ಬಾರ
(02 September 1963)

ಕೃಷ್ಣಮೂರ್ತಿ ಹೆಬ್ಬಾರ ಅವರು ಮೂಲತಃ ಹೊನ್ನಾವರ ಸಮೀಪದ ಕರ್ಕಿಯವರು. ಕಾನೂನು ಶಾಸ್ತ್ರ ಮತ್ತು ಇಂಗ್ಲೀಷ್‌ ಸಾಹಿತ್ಯದಲ್ಲಿ ಎಂ.ಎ ಪದವಿಪಡೆದಿದ್ದಾರೆ. 23 ವರ್ಷಗಳಿಂದ 'ನಾಗರಿಕ' ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ, ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದಾರೆ. ಹಾಗೂ ಕೃಷಿ, ಸಂಘಟನೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಕ್ರೀಯಾಶೀಲರು. ಕೃತಿಗಳು: 'ಕೃಷ್ಣನ ಕೈಫಿಯತ್ತು', 'ಅವರ ಬದುಕು ನಮಗೆ ಬೆಳಕು', 'ನೆರೆಹಾವಳಿ', 'ಹನಿಹರೆಯ' ಪ್ರಶಸ್ತಿ: ಕೆ. ಶ್ಯಾಮರಾವ್‌ ಪ್ರಶಸ್ತಿ, ಜಿ. ಆರ್. ಪಾಂಡೇಶ್ವರ ಸ್ಮಾರಕ ಪ್ರಶಸ್ತಿ ...

READ MORE

Related Books