ದಲಿತ ನೋಟ ಸಂಪುಟ-2

Author : ಮೇಟಿ ಮಲ್ಲಿಕಾರ್ಜುನ

Pages 548

₹ 350.00




Year of Publication: 2017
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು-560 002
Phone: 080-22211730

Synopsys

‘ದಲಿತ ನೋಟ’ ಸಂಪುಟ-2, ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಮಾಲಿಕೆಯ ಪ್ರಧಾನ ಸಂಪಾದಕರು ಪ್ರೊ. ಮಾಲತಿ ಪಟ್ಟಣಶೆಟ್ಟಿ, ಯೋಜನಾ ಸಂಪಾದಕರು ಮೇಟಿ ಮಲ್ಲಿಕಾರ್ಜುನ. ಸಂಪುಟ ಸಂಪಾದಕರು- ಡಿ. ಡೊಮಿನಿಕ್, ಬಿ. ಎಲ್. ರಾಜು.

ಏಕಮುಖಿ ಚಲನೆಯಿಂದ ಚರಿತ್ರೆ ಎಂಬುದು ಕೇವಲ ಚಾರಿತ್ರಿಕ ವಿವರಗಳನ್ನು ಮಂಡಿಸುವ ಬಗೆಯಾಗಿದೆ. ಈ ಚಾರಿತ್ರಿಕ ವಿನ್ಯಾಸಗಳನ್ನು ಮರು ವಿನ್ಯಾಸಗೊಳಿಸುವ ಮೂಲಕ ಚರಿತ್ರೆ ಎಂಬುದು ಸಾಂಸ್ಕತಿಕ ಅಸ್ಮಿತೆ, ನೆನಪಿನ ರಾಜಕಾರಣ, ಜಾತಿ ಬಗೆಗಿನ ನಂಬಿಕೆಗಳು, ಲಿಂಗ ರಾಜಕಾರಣದ ವಿನ್ಯಾಸಗಳು, ಸಮೂಹಗಳ ಶ್ರಮ ಸಂಸ್ಕೃತಿಯ ವಿಭಜನೆಯ ನಡುವಣ ಅಸಮಾನತೆಗಳನ್ನು ಗುರುತಿಸುವ ನಿಲುವುಗಳು ಎಂಬಿತ್ಯಾದಿ ಕುರಿತು ಚಿಂತಿಸುವ ಹೊಣೆಗಾರಿಕೆ ಆಗಬೇಕಿದೆ.

ಈಗಾಗಲೇ ಬಂದಿರುವ ಸಂಸ್ಕೃತಿ ಕುರಿತ ಓದುಗಳು ಹಲವು ಮಿತಿಗಳನ್ನು ಹೊಂದಿರುತ್ತವೆ. ಅಂದರೆ ದಲಿತ ಓದು, ಉಪಸಂಸ್ಕೃತಿ, ಪ್ರತಿಸಂಸ್ಕೃತಿ, ಬುಡಕಟ್ಟು ಓದು ಮುಂತಾದವು ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯ ನಿಲುವುಗಳನ್ನು ಪ್ರಕಟಿಸುವಲ್ಲಿ ಏಕಮುಖಿ ನಿಲುವನ್ನು ತಾಳಿರುತ್ತವೆ. ಇದೇನು ಆರೋಪವಲ್ಲ ಬದಲಾಗಿ, ಆಯಾ ಕಾಲದ ಓದಿನ ಮಿತಿಗಳನ್ನು ಗುರುತಿಸಲು ಈ ಮಾತನ್ನು ಹೇಳಲಾಗಿದೆ.

ಬಂಡಾಯ ಹಾಗೂ ಪ್ರತಿರೋಧದ ನೆಲೆಗಳನ್ನು ಗುರುತಿಸುವ ಬಗೆಗಳು ಇನ್ನಷ್ಟು ತೀವ್ರವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಈ ಕರ್ನಾಟಕ ಸಬಾಲ್ಟನ್ ಓದು ಹೇಗೆ ಒತ್ತಾಸೆಯಾಗಬಲ್ಲದು ಎನ್ನುವುದು ಗಮನಾರ್ಹ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books