ಯಾದವೀ ಕಲಹಗಳ ಕುದಿಯುವ ಹಂಡೆ

Author : ಪ್ರೇಮಶೇಖರ

₹ 200.00




Published by: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
Address: #725, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560 010
Phone: 9945939436

Synopsys

ಲೇಖಕ ಪ್ರೇಮಶೇಖರ ಅವರ ಲೇಖನಗಳ ಕೃತಿ ʻಯಾದವೀ ಕಲಹಗಳ ಕುದಿಯುವ ಹಂಡೆʼ. ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತಾದ ಲೇಖನಗಳು ಇಲ್ಲಿವೆ. ಯಹೂದಿಯರ ಹಾಗೂ ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್‌ನ "ಓಲ್ಡ್ ಟೆಸಮೆಂಟ್ (ಹಳೇ ಒಡಂಬಡಿಕೆ)ಯ ಕೆಲವು ಅಧ್ಯಾಯಗಳಲ್ಲಿ ಇಸ್ರಾಯ್ಯೇಲರು ಪಾಪ ಮಾಡಿದ, ಅದಕ್ಕಾಗಿ ಯಹೋವ ದೇವರು ಶಾಪ ನೀಡಿದ ವಿವರಗಳಿವೆ. ಇಂದಿನ ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯರು ಮೂಲತಃ ದೇವರಿಂದ ಹೀಗೆ ಶಾಪಕ್ಕೊಳಗಾದ ಇಸ್ರಾಯೇಲರೇ. ಆ ನೆಲದಲ್ಲಿನ ನಿಲ್ಲದ ಅಶಾಂತಿಗೆ, ರಕ್ತಪಾತಕ್ಕೆ; ಆ ಜನರ ನಿರಂತರ ನೋವಿಗೆ ಮೂಲ ಇದಿರಬಹುದೇ... ಹೀಗೆ ಪ್ರಪಂಚದಲ್ಲಿ ಭುಗಿಲೆದ್ದ ಸಮಸ್ಯೆಗಳು, ಬೆಳವಣಿಗೆಗಳ ಕುರಿತು ಈ ಪುಸ್ತಕದಲ್ಲಿ ಚರ್ಚಿಸಲಾಗುತ್ತದೆ.

About the Author

ಪ್ರೇಮಶೇಖರ
(22 June 1960)

ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...

READ MORE

Related Books