ನುಡಿಗನ್ನಡಿ

Author : ಜಯಪ್ರಕಾಶ್ ನಾಗತಿಹಳ್ಳಿ

Pages 142

₹ 200.00




Year of Publication: 2020
Published by: ನಾಗಮ್ಮ ಫೌಂಡೇಷನ್
Address: ನಂ. 462, 1ನೇ 'ಸಿ' ಮುಖ್ಯರಸ್ತೆ, 4ನೇ ಹಂತ, ಜೆ.ಪಿ ಬೆಂಗಳೂರು -560 078
Phone: 9886081188

Synopsys

ಲೇಖಕ ಜಯಪ್ರಕಾಶ ನಾಗತಿಹಳ್ಳಿ ಅವರ ಲೇಖನಗಳ ಸಂಗ್ರಹ ಕೃತಿ-ನುಡಿಗನ್ನಡ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯೇ ಇದೆ. ಇಂತಹ ಮಾತು ವ್ಯಾವಹಾರಿಕವಲ್ಲದೆ ಸಂವಹನ ಮಾಧ್ಯಮವಾಗಿ ಭಾಷಣಕಾರನ ರೂಪದಲ್ಲಿ ಭಾಷಣವಾಗಿ ರೂಪುಗೊಂಡಾಗ ಅನೇಕ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೈದೀವಿಗೆಯಾಗುವಂತಹ ಕೃತಿ ‘ನುಡಿಗನ್ನಡಿ’ ಆಗಿದ್ದು, ಹತ್ತು ಮುದ್ರಣಗಳನ್ನು ಕಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರು ‘ಪುಟ್ಟ ಪುಟ್ಟ ವಾಕ್ಯಗಳಲ್ಲಿ, ಸ್ಟುಟವಾದ ಶೀರ್ಷಿಕೆಗಳಲ್ಲಿ, ದಿಟವಾದ ಘಟನೆಗಳಲ್ಲಿ ಮಾತಿನ ತರಬೇತಿಯ ವಿಧಿ ವಿಧಾನವನ್ನು ತಿಳಿಸುತ್ತಾ, ತಿಳಿವಳಿಕೆ ನೀಡುವಲ್ಲಿ ಇಲ್ಲಿಯ ಕೃತಿ ಸಂಘ-ಸಂಸ್ಥೆಗಳಿಗೆ, ಚರ್ಚಾಪಟುಗಳಿಗೆ, ರಾಜಕೀಯ ಪ್ರವೇಶದವರಿಗೆ ರಾಜಾರೋಷವಾಗಿ ಮಾತಾಡಲು ನಿಲ್ಲುವವರಿಗೆ, ಮಾತಿನ ಮಹತ್ವ ತಿಳಿಯುವವರಿಗೆ ಹಸಿರು ತೋರಣ’ ಎಂದು ಪ್ರಶಂಸಿಸಿದ್ದಾರೆ.

About the Author

ಜಯಪ್ರಕಾಶ್ ನಾಗತಿಹಳ್ಳಿ

ಕನ್ನಡದ ಬಗ್ಗೆ ಅಪಾರ ಪ್ರೀತಿಯುಳ್ಳ ಜಯಪ್ರಕಾಶ್ ನಾಗತಿಹಳ್ಳಿ ಅವರು ಮೂಲತಃ ಸಕ್ಕರೆ ನಾಡಿನ ಮಂಡ್ಯದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ತಾಂತ್ರಿಕ ಶಿಕ್ಷಣ ಮಂಡಳಿಯ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರು ದೂರದರ್ಶನದ ಮಾರ್ಗವಾಚಕರಾಗಿ, ಚಂದನ ವಾಹಿನಿಯ ಸಂದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜೇಸೀಸ್‌ನ ಅಧ್ಯಕ್ಷರಾಗಿದ್ದ ಇವರು, ಭಾರತೀಯ ಜೇಸೀಸ್‌ನ ವಲಯ-14ರ ಸಂಯೋಜನಾಧಿಕಾರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಬಗೆಗೆ ಕನ್ನಡದಲ್ಲಿ ಪ್ರಪ್ರಥಮವಾಗಿ ‘ನಡೆ-ನುಡಿ' ವ್ಯಕ್ತಿತ್ವ ವಿಕಸನದ ಅಲೆಗಳು ಎಂಬ ಧ್ವನಿಸುರುಳಿಯನ್ನು ಹೊರತರುವುದು ಇವರ ಹೆಗ್ಗಳಿಕೆ. ಆನಂತರ ...

READ MORE

Related Books