ಅಸತ್ಯದ ಕೇಡು

Author : ಸುಶಿ ಕಾಡನಕುಪ್ಪೆ

Pages 1

₹ 1.00

Synopsys

ಸುಶೀ ಕಾಡನಕುಪ್ಪೆ ಅವರ ಲೇಖನಗಳ ಸಂಗ್ರಹ. ಈ ಸಂಕಲನದ ಬಗ್ಗೆ ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅವರ ಅಭಿಪ್ರಾಯ ಹೀಗಿದೆ-

ನಮ್ಮ ಕಾಲದಲ್ಲ, ವೈಚಾರಿಕತೆಗೆ ಅಮರಿಕೊಂಡಿರುವ 'ಜಾಣ ಪಕ್ಷಪಾತ'ದಿಂದ, ವಕೀಲರಿಂದ ಈ ಪುಸ್ತಕಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಂದು ಈ ಲೇಖಕಿಯ ನಿಲುವುಗಳಲ್ಲಿ ಅಸ್ಪಷ್ಟತೆಯಾಗಲೀ, 'ಅದೂ ಸರಿ-ಇದೂ ಸರಿ' ಎಂಬ ಅಡ್ಡಗೋಡೆತನವಾಗಲೀ ಇಲ್ಲ. ಹಾಗೆ ನೋಡಿದರೆ, 'ಮಧ್ಯಮಮಾರ್ಗದ ಪರಿಮಿತಿಗಳನ್ನು ದಿಟ್ಟವಾಗಿ ಗುರುತಿಸುವ ಒಂದು ಲೇಖನವೂ ಈ ಸಂಕಲನದಲ್ಲಿದೆ.

ಇವರಿಗೆ ಲೋಕವನ್ನು ಕಾಣುವ, ವಿಮರ್ಶಿಸುವ, ಮರಳಿ ಕಟ್ಟುವ ಹಂಬಲವಿರುವುದಾದರೂ ಅದಕ್ಕೆ ’ಇದೊಂದೇ ದಾರಿ' ಎಂಬ ಹಟಮಾರಿತನವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಸಾರಾಸಗಟಾಗಿ ನಿರಾಕರಿಸಿ, ಹಿಂದೆ ಯಾವಾಗಲೂ ಇದ್ದಿರಬಹುದಾದ 'ಬಂಗಾರದ ದಿನ’ಗಳಲ್ಲಿ ಕಳೆದುಹೋಗುವ ಅರೆಗುರುಡುತನವೂ ಇಲ್ಲಿ ಕಾಣುವುದಿಲ್ಲ. ವೈಜ್ಞಾನಿಕ ಚಿಂತನೆ, ವೈಚಾರಿಕತೆ ಮತ್ತು ಮಾನವತಾವಾದಗಳು ಈ ಬರವಣಿಗೆಯ ಅಡಿಗಲ್ಲುಗಳಂತೆ ಕೆಲಸಮಾಡುತ್ತವೆ. ತನ್ನ ಅಧ್ಯಯನ ಕ್ಷೇತ್ರದಲ್ಲಿ ಪಡೆದಿರುವ ತಿಳಿವಳಿಕೆಯನ್ನು ಹಂಚಿಕೊಳ್ಳುವ ಹಂಬಲವಿರುವ ಹಾಗೆಯೇ ಒಟ್ಟಿನಲ್ಲಿ ಲೋಕವನ್ನು ಕುರಿತು ಸ್ವತಂತ್ರವಾಗಿ ಆಲೋಚಿಸುವ ಹಾಗೂ ದಿಟ್ಟವಾದ ತೀರ್ಮಾನಕ್ಕೆ ಬರುವ ಗುಣವು ಇಲ್ಲಿನ ಅನೇಕ ಲೇಖನಗಳಲ್ಲಿ ಕಂಡುಬರುತ್ತದೆ

About the Author

ಸುಶಿ ಕಾಡನಕುಪ್ಪೆ
(31 August 1980)

ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಸುಶಿ ಕಾಡನಕುಪ್ಪೆ ಅವರು ಜನಿಸಿದ್ದು 31 ಆಗಸ್ಟ್ 1980ರಲ್ಲಿ ತಂದೆ ಶಿವರಾಮು ಕಾಡನಕುಪ್ಪೆ, ತಾಯಿ ಸುವರ್ಣ ಕಾಡನಕುಪ್ಪೆ.  ಡಾ. ಸುಶಿ ಕಾಡನಕುಪ್ಪೆ ಮೂಲತಃ ಮೈಸೂರಿನವರು. ಜೆಎಸ್ ಎಸ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ (2003) ದಂತ ವೈದ್ಯಕೀಯ ಪದವಿ ಹಾಗೂ ಬೆಂಗಳೂರಿನ ದಿ. ಆಕ್ಸ್ ಫರ್ಡ್ ಡೆಂಟಲ್  ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಎಂ.ಡಿ.ಎಸ್ ಪಡೆದರು. ಬೆಂಗಳೂರಿನ ಒಕ್ಕಲಿಗರ ಸಂಘದ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೃತ್ತಿ (2008) ಆರಂಭಿಸಿದರು. ದಂತ ಹಾಗೂ ಬಾಯಿ ರೋಗಗಳಿಗೆ ಸಂಬಂಧಿಸಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ...

READ MORE

Related Books