ಜನ ಮನದ ಓದು

Author : ಟಿ.ಗೋವಿಂದರಾಜು

Pages 136

₹ 135.00




Year of Publication: 2022
Published by: ಕಾವ್ಯ ಕಲಾ ಶಾಲೆ

Synopsys

‘ಜನ ಮನದ ಓದು’ ಕೃತಿಯು ಟಿ. ಗೋವಿಂದರಾಜು ಅವರ ಲೇಖನ ಸಂಕಲನವಾಗಿದೆ. ಇಲ್ಲಿನ ಬಹುತೇಕ ಬರಹಗಳು ಬೆಳಗ್ಗಿನ ವಾಕಿಂಗಿನ ಸಂದರ್ಭದಲ್ಲಿ; ಬಸ್ ಪ್ರಯಾಣದ ಸಂದರ್ಭದಲ್ಲಿ ಜನರೊಂದಿಗೆ ಇರುವಾಗ ಆದ ಅನುಭವಗಳ, ಕೇಳಿದ ಮಾತುಗಳ ನೇರಾನೇರ ನಿರೂಪಣೆಗಳು. ಜನರ ಮನೋಭಾವವನ್ನು ಅರಿತು ಅವುಗಳನ್ನು ಮೌಲ್ಯಮಾಪನ ಮಾಡುತ್ತ ತನ್ನದೇ ದೃಷ್ಟಿಕೋನಗಳನ್ನು ಮಂಡಿಸುವ ಕೆಲಸವನ್ನೂ ಇಲ್ಲಿ ಕೆಲವೆಡೆ ಮಾಡಲಾಗಿದೆ. ಇನ್ನು ಇಲ್ಲಿನ ಮೊದಲ ಕೆಲವು ಅಧ್ಯಾಯಗಳವರೆಗೆ ವಿವಿಧ ಬಗೆಯ ಜನಮನದ ನೆನಪುಗಳ ನಿರೂಪಣೆಗಳು ಹರಡಿಕೊಂಡಿವೆ. ಇಲ್ಲೆಲ್ಲ ಜನಪದ ಆಸಕ್ತಿ , ಕಂಡದ್ದರ ನಿರೂಪಣೆ, ಸ್ವಾನುಭವದ ಮಂಡನೆಗಳು ಇವೆ. ಗಾಂಧೀ ಕನಸಿನ ಕೂಸು, ಅಣ್ಣಾವ್ರು ಅಂದ್ರೆ ಅಣ್ಣಾವ್ರು, ಒಂದು ಲಕ್ಷದ ಮೇಲೈದೂ.. ಪಡ್ಚಾ!, ಲಕ್ಷದ ಮೇಲೊಂದೊಂದು?, ವಾಕಿಂಗ್ ಅನುಭವ ಮಂಟಪ ಮತ್ತು ಶೂನ್ಯ ಸಂಪಾದನೆಗಳು, ನಂಬಿಕೆ ಕಳೆದುಕೊಂಡ ಆಣೆ ಪ್ರಮಾಣಗಳು, ಚುನಾವಣಾ ನೀತಿ ಫಜೀತಿ, ಚುನಾವಣಾ ಪೀಕಲಾಟ, ಅಧಿಕಾರದ ಮನವೋ, ಹೊಣೆಗಾರಿಕೆ ಗುಣವೋ?, ಜನಪ್ರತಿನಿಧಿಗಳ ಮೌಲ್ಯಮಾಪನ, ನಮ್ಮ ಜನ-ತಮ್ಮ ತನ, ವಾಟ್ಸಪ್ ವೀರರು, Funಡಿತರ ಪರಸಂಗಗಳು, ಪರಿಷೆಯಲ್ಲಿ ಫಟಿಂಗರು, ಭೂಮಿ ಬಿಸಿಯಾಗುತ್ತಿದೆ, ವಕೀಲನ ವಿವಾಹ, ಅದುಮಿದ್ದು ಮೊಲ, ಎದ್ದಿದ್ದು ಹುಲಿ!, ಬ್ಯಾಕ್ ಸಪೋರ್ಟು ಹೀಗೆ ಹಲವಾರು ವಿಚಾರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Related Books