ದೇಶವಿದೇನಹಾ! ಕಾಲವಿದೇನಹಾ!!

Author : ಮಂಜುನಾಥ್ ಲತಾ

Pages 184

₹ 140.00




Year of Publication: 2011
Published by: ಮೌಲ್ಯಾಗ್ರಹ ಪ್ರಕಾಶನ
Address: #400, 23ನೇ ಮೇನ್, ಬಿಟಿಎಮ್ ಲೇಔಟ್ 2ನೇ ಹಂತ, ಬೆಂಗಳೂರು- 560076
Phone: 9686080005

Synopsys

‘ದೇಶವಿದೇನಹಾ! ಕಾಲವಿದೇನಹಾ!!’ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಚರ್ಚೆ ಕೃತಿಯನ್ನು ಲೇಖಕರಾದ ಮಂಜುನಾಥ್ ಲತಾ ಹಾಗೂ ಕೆ.ಎಲ್. ಚಂದ್ರಶೇಖರ್ ಐಜೂರ್ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ, ವಸಂತ ಬನ್ನಾಡಿ, ಶಶಿಧರ್ ಹೆಮ್ಮಾಡಿ, ಕೆ.ಪಿ. ಸುರೇಶ ಅವರ ಬೆನ್ನುಡಿ ಬರಹಗಳಿವೆ. ಕೃತಿಯ ಕುರಿತು ಬರೆಯುತ್ತಾ ‘ಕಲಾತ್ಮಕತೆ ಮತ್ತು ಶ್ರೇಷ್ಠತೆಗಳ ಗುತ್ತಿಗೆ ಪಡೆದ ವಲಯವೇ ಈ ಮಧ್ಯಮಮಾರ್ಗಿ ವಲಯ:ದ್ವಿಪಾತ್ರಾಭಿನಯವನ್ನೂ ಏಕಪಾತ್ರಾಭಿನಯಕ್ಕೆ ತಿರುಗಿಸುವ ಛಾತಿಯುಳ್ಳ ಈ ಸಾಂಸ್ಕೃತಿ ವಲಯವು ಸಾಂಸ್ಕೃತಿಕ ಸುಪ್ರೀಂಕೋರ್ಟ್ ಆಗುವ ಹವಣಿಕೆಯಿಂದ ಕೂಡಿದೆ. ಇದು ಹವಣಿಕೆಯ ಹಂತವನ್ನು ದಾಟಿ ಅಧಿಕಾರದ ಹಂತಕ್ಕೆ ಬರುತ್ತಿರುವುದೇ ಇಂದಿನ ಅಪಾಯ. ಇದು ಕೇವಲ ದೇಶಕಾಲಕ್ಕೆ ಸಂಬಂಧಿಸಿದ್ದಲ್ಲ. ಈ ಮಧ್ಯಮಮಾರ್ಗಿ ಸಾಂಸ್ಕೃತಿಕ ವಲಯವು ಸಾಹಿತ್ಯಾದಿ ಕಲೆಗಳಿಗೆ ಸಾಮಾಜಿಕ ಬದ್ಧತೆ ಇರಬೇಕೆಂಬುದನ್ನು ಒಪ್ಪುವುದಿಲ್ಲ’ ಎನ್ನುತ್ತಾರೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ. ಕೋಮುವಾದದ ವಿರುದ್ಧ ರಾಜಶೇಖರ ಅವರು ಮಾತನಾಡುವಾಗ ಬಜರಂಗಿಗಳ ಬಗ್ಗೆ ಅವರಿಗೆ ಬರುವ ಸಿಟ್ಟಿಗಿಂತಲೂ ಹೆಚ್ಚು ಸಿಟ್ಟು ದೇಶಕಾಲವನ್ನು ಟೀಕಿಸುವವರರ ಮೇಲೆ ಬರುತ್ತಿದೆ ಎಂದು ಅನಿಸುತ್ತಿದೆ ಎನ್ನುತ್ತಾರೆ ಶಶಿಧರ್ ಹೆಮ್ಮಾಡಿ. ಹಾಗೇ ಸಾಹಿತ್ಯವೇ ಒಂದು ಸಂವಾದ, ಅನುಸಂಧಾನ. ಈಗ ನಾವು ಎತ್ತಿರುವ ಸಂವಾದದಲ್ಲೇ ಭಾಗಿಯಾಗಲು ನಿರಾಕರಿಸುವ ಮಂದಿ ಬದುಕಿನ ಜೊತೆ ಅನುಸಂಧಾನ ನಡೆಸುತ್ತಾರೆಂದು ಹೇಗೆ ಭಾವಿಸೋಣ ಎಂದಿದ್ದಾರೆ ಕೆ.ಪಿ. ಸುರೇಶ.

ಈ ಕೃತಿಯಲ್ಲಿ ಮಂಜುನಾಥ ಅದ್ದೆ ಅವರ ‘ಇವರದು ದೇಶ ಕಾಲ ದ್ರೋಹ’, ಮಂಜುನಾಥ್ ಲತಾ ಹಾಗೂ ಕೆ.ಎಲ್. ಚಂದ್ರಶೇಖರ್ ಐಜೂರ್ ಅವರ ‘ದೇಶವಿದೇನಹಾ! ಕಾಲವಿದೇನಹಾ!!’, ರಹಮತ್ ತರೀಕೆರೆ ಅವರ ನಮ್ಮ ಮಾತು ನಮಗೇ ತಿರುಗುಬಾಣವಾಗಬಾರದು, ಕೆ.ಫಣಿರಾಜ್ ಅವರ ವಾಗ್ವಾದ ಭಂಜಕರು, ಜಿ.ರಾಜಶೇಖರ್ ಅವರ ಈ ಅಸಹನೆ ಸಾಹಿತ್ಯ ವಿಮರ್ಶೆಯ ವಿಧಾನವಲ್ಲ, ಮಂಜುನಾಥ್ ಲತಾ ಹಾಗೂ ಚಂದ್ರಶೇಖರ್ ಐಜೂರ್ ಅವರ ‘ಸುಸಂಸ್ಕೃತ ಪ್ರಶ್ನೆಗಳನ್ನಷ್ಟೇ ಕೇಳಿ ಎನ್ನುವುದಾದರೆ’, ವಸಂತ ಬನ್ನಾಡಿ ಅವರ ‘ಯಾವುದು ವಾಗ್ವಾದ? ಯಾವುದು ಭಾವಾವೇಶ?’, ಅರುಣ್ ಜೋಳದಕೂಡ್ಲಿಗಿ ಅವರ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?’, ಕೆ. ಫಣಿರಾಜ್ ಅವರ ‘ಶಾಕ್ ಟ್ರೀಟ್ಮೆಂಟ್ ವಿಮರ್ಶೆ ನನಗೆ ಸಮ್ಮತವಲ್ಲ’, ಜಿ. ರಾಜಶೇಖರ ಅವರ ಸ್ವಪ್ರತಿಷ್ಠೆಯೋ ಕೀಳರಿಮೆಯೋ?, ಜ್ಯೋತಿ ಗುರುಪ್ರಸಾದ್ ಅವರ ದೇಶಕಾಲಕ್ಕೆ ಸ್ಪಂದಿಸದ ದೇಶಕಾಲ, ಕೆ.ಪಿ. ಸುರೇಶ ಅವರ ಕ್ಷುದ್ರ ವಿಚಾರಗಳತ್ತ ಗಮನಹರಿಸೋಣವೇ, ಸುಮಾ ಎಂಬಾರ್ ಅವರ ಚರ್ಚಿಸಬಹುದಾದ ವಿಸ್ತೃತ ವಿಚಾರಗಳು, ವಡ್ಡಗೆರೆ ನಾಗರಾಜಯ್ಯ ಅವರ ಬಹಿಷ್ಕಾರ ಪದ್ಧತಿಯನ್ನು ವಿಸ್ತರಿಸದಿರಿ, ಡಾ.ಬರಗೂರು ರಾಮಚಂದ್ರಪ್ಪ ಅವರ ದೇಶಕಾಲದ ಸಾಂಸ್ಕೃತಿಕ ರಾಜಕೀಯ, ವಸಂತ ಬನ್ನಾಡಿ ಅವರ ಶ್ರೇಷ್ಠತೆಯ ವ್ಯಸನದ ದೇಶಕಾಲವೂ ಕುರುಡು ಹಿಡಿದ ಬಡ್ತಿಗೆಯಂಥ ಸಮರ್ಥನೆಯೂ, ಎಚ್.ಎಸ್. ವೆಂಕಟೇಶಮೂರ್ತಿ ಅವರ ಜಾತಿಯೆಂಬ ಭೂತದ ಹಿಂದೆ. ಡಾ.ಎಚ್.ಎಸ್. ಅನುಪಮಾ ದೇಶಕಾಲ ಒಂದು closed circuit, ಜಿ.ರಾಜಶೇಖರ ಅವರ ದೇಶಕಾಲ ಕುರಿತು ಬನ್ನಾಡಿಯವರ ತೀರ್ಪುಗಳು, ವಸಂತ ಬನ್ನಾಡಿ ದೇಶಕಾಲದ ಬೈಂಡುಗಳ ಒಳಗೆ ಅಡಗಿಕೊಂಡಿರುವ ಭೂತ, ಜಿ.ರಾಜಶೇಖರ ಅವರ ನೆಲಮೂಲದ ಲೇಖಕರು ಯಾರು, ಎಸ್.ಜಿ. ಸಿದ್ಧರಾಮಯ್ಯ ಒಂದು ಪತ್ರ, ಒಂದು ಪದ್ಯ, ಜ್ಯೋತಿ ಗುರುಪ್ರಸಾದ್ ದೇಶಕಾಲದ ಕೊರತೆ, ಕೆ.ಫಣಿರಾಜ್ ಅವರ ಪರ ಪರ ತುರಿಕೆಯ ಸುಖ, ಶಶಿಧರ್ ಹೆಮ್ಮಾಡಿ ಅವರ ಪೋಲಾಂಡ ನಾಯಕ!, ಹಾಗಂದ್ರೆ ಏನ್ಸಾರ್?, ಜಿ. ರಾಜಶೇಖರ ಅವರ ಇದು ವಿಮರ್ಶೆಯ ಭಾಷೆ ಅಲ್ಲ, ಚಂದ್ರಶೇಖರ ತಾಳ್ಯ ವಿಶೇಷ ಸಂಚಿಕೆಯವರಿಗೆ, ವಸಂತ ಬನ್ನಾಡಿ ಅವರ ನೀನಾಸಂ ಎಂಬ ಚಿನ್ನದ ಸರಪಣಿಯ ಅಗೋಚರ ಕಿರು ಕೊಂಡಿ, ಜಿ.ರಾಜಶೇಖರ ಅವರ ನಿರಾಧಾರ ಹೇಳಿಕೆಗಳು, ಹುಸಿ ಆರೋಪಗಳು, ಮಂಜುನಾಥ್ ಲತಾ ಹಾಗೂ ಕೆ.ಎಲ್. ಚಂದ್ರಶೇಖರ್ ಐಜೂರ್ ಚಿಂತೆ ಬಿತ್ತುವುದು ಬೇಡ: ಚಿಂತನೆ ಬೆಳೆಸೋಣ, ಕೆ.ಪಿ. ಸುರೇಶ ಅವರ ದೇಶಕಾಲ: ಅಂತಿಮ ತೀರ್ಪು ಲೇಖನಗಳು ಸಂಕಲನಗೊಂಡಿವೆ.

About the Author

ಮಂಜುನಾಥ್ ಲತಾ
(10 July 1975)

’ಮಂಜುನಾಥ ಲತಾ'  ಎಂದು ಬರೆಯುವ ಮಂಜುನಾಥ್ ಎಸ್ ಅವರು ಪತ್ರಿಕೋದ್ಯಮ, ಅಭಿವೃದ್ದಿಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಅವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. . ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ. ...

READ MORE

Related Books