ಕೋವಿಡ್ ಕಥೆಗಳು

Author : ಶಿವಾನಂದ ತಗಡೂರು

Pages 120

₹ 175.00




Year of Publication: 2022
Published by: ಬಹುರೂಪಿ
Address: ಎಂಬೆಸಿ ಸೆಂಟರ್, 111,ಮೊದಲನೇ ಮಹಡಿ, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560 001
Phone: 7019182729

Synopsys

ಪತ್ರಕರ್ತ, ಲೇಖಕ ಶಿವಾನಂದ ತಗಡೂರು ಅವರ ಲೇಖನಗಳ ಸಂಕಲನ ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು. ಇದು ಕತೆಯಲ್ಲ, ಕಟು ವಾಸ್ತವ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಮಾಜಿ ಮುಖ್ಯಮಂತ್ರಿಗಳು ಬಿ ಎಸ್ ಯಡಿಯೂರಪ್ಪ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವನ್ನು ಕರೆದುಕೊಂಡು ಆತ್ಮೀಯರೂ, ಹಿರಿಯ ಪತ್ರಕರ್ತರೂ ಆದ ಶಿವಾನಂದ ತಗಡೂರು ಅವರು ನನ್ನ ಬಳಿ ಬಂದಾಗ ಸಮಸ್ಯೆ ಗಂಭೀರವಾದದ್ದೇ ಎಂದು ಅನಿಸಿತು. ಅವರು ಕೋವಿಡ್ ಕರಿ ನೆರಳಿನಿಂದಾಗಿ ಮೃತಪಟ್ಟ ಪತ್ರಕರ್ತರ ಕಥೆಯನ್ನು ಹೇಳುತ್ತಾ ಹೋದಾಗ ವೇದನೆ ಅನಿಸಿತು.ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರ ಜೊತೆ ನಿಲ್ಲುವುದು ನಮ್ಮ ಸರ್ಕಾರದ ಕರ್ತವ್ಯ ಎನಿಸಿ ಅವರ ಎಲ್ಲಾ ಕಷ್ಟ ಸುಖಗಳಿಗೆ ನಾನು ಸ್ಪಂದಿಸಿದ್ದೇನೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರು ಬೆನ್ನುಡಿಯಲ್ಲಿ ಬರೆದಿರುವಂತೆ, ಪತ್ರಕರ್ತರ ಕಷ್ಟಕ್ಕೆ ನಾವು ಯಾವಾಗಲೂ ಸ್ಪಂದಿಸುತ್ತ ಬಂದಿದ್ದೇವೆ. ಅದು ನಮ್ಮ ಸರ್ಕಾರದ ಆದ್ಯತೆಯೂ ಹೌದು. ಎಂತಹ ಕಠಿಣ ಸಂದರ್ಭ ಬಂದರೂ ಮುನ್ನುಗ್ಗಬೇಕಾದ ಪತ್ರಕರ್ತರಿಗೆ ಆರೋಗ್ಯದ ಸಮಸ್ಯೆ ಉಂಟಾದಾಗ ಅವರ ಜೊತೆ ನಿಲ್ಲುವುದು ಯಾವುದೇ ಸರ್ಕಾರದ ಕರ್ತವ್ಯ. ಮುಂದಿನ ದಿನಗಳಲ್ಲೂ ಅವರಿಗೆ ಬೇಕಾದ ಎಲ್ಲಾ ನೆರವು ನೀಡಲು ಸಿದ್ಧರಾಗಿದ್ದೇವೆ.

About the Author

ಶಿವಾನಂದ ತಗಡೂರು

ಶಿವಾನಂದ ತಗಡೂರು ಅವರು ವಿಜಯವಾಣಿ ದಿನಪತ್ರಿಕೆಯ ವಿಶೇಷ ವರದಿಗಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು. ...

READ MORE

Related Books