
‘ಬದುಕಿನ ಬೇರು ವಂಶವಾಹಿ’ ಗುಡಿಬಂಡೆ ಪೂರ್ಣಿಮಾ ಅವರ ಲೇಖನಗಳ ಸಂಗ್ರಹವಾಗಿದೆ. 'ಹುಟ್ಟು ಗುಣ ಸುಟ್ಟು ಬಿಟ್ಟರೂ ಹೋಗದು' ಎಂಬ ಗಾದೆಯಲ್ಲಿನ ಒಂದು ಸತ್ಯಾಂಶ ಡಿ.ಎನ್.ಎ.ಯ ಮಹಾನ್ ಗುಣವನ್ನೂ ಜನ ಪದರು ಅದನ್ನು ಎಂದೋ ಗುರುತಿಸಿದ್ದನ್ನೂ ಸಾರಿ ಹೇಳುತ್ತದೆ. ಜೀವಿಗಳ ಗುಣ, ದೋಷ, ಸ್ವಭಾವ, ಲಕ್ಷಣಗಳನ್ನು ನಿರ್ಧರಿಸುವ ಮತ್ತು ವಂಶವಾಹಿಯಾಗಿ ಮುಂದಿನ ಪೀಳಿಗೆಗೆ ರವಾನಿಸುವ ಬಗ್ಗೆ ಈ ಕೃತಿ ತಿಳಿಸುಕೊಡುತ್ತದೆ.

ಎಸ್.ಪಿ.ಪೂರ್ಣಿಮಾ ಅವರು ಗುಡಿಬಂಡೆ ಪೂರ್ಣಿಮಾ ಎಂದೇ ಪ್ರಸಿದ್ಧರಾದ ಕಾದಂಬರಿಗಾರ್ತಿ, ವೈಜ್ಞಾನಿಕ ಬರಹಗಾರ್ತಿ. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 1951 ಏಪ್ರಿಲ್ 17 ರಂದು ಶ್ರವಣಬೆಳಗೊಳದಲ್ಲಿ ಜನಿಸಿದರು. ಸುಬಂಧುಶ್ರೀ, ಮಲ್ಲಿನಾಥ, ಬಂಧಮುಕ್ತ, ಮಾಗಿದ ಫಲ, ಪರಾಗ, ಒಳಗಿನದೇ ಬೇರೆ, ಭ್ರಮೆ, ಸೆಲೆ, ಬೇಟೆ, ಮೇಳ, ಅಲೆಯಾಳ, ಭಾವ ಸಂವಾದ, ತನುವ ತಂಪಿನ ತವಕ, ರತ್ನದೀಪ, ಕಾಮಪ್ರೇಮ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ನನಗನಿಸಿದ್ದು, ಬೇರು, ಕಣ್ಣುರೆಪ್ಪೆ, ನೂರಾರು ಹನಿ ಗವಿತೆಗಳು, ನಲವತ್ತರ ನಂತರ ನಾನು, ಪರಂಪರೆಯೊಡನೆ ಪಿಸುಮಾತು ಕಾವ್ಯ ಸಂಕಲನಗಳನ್ನು ಹೊರತಂದಿದ್ಧಾರೆ. ಎರಡು ನಾಟಕಗಳು ಇವರ ಪ್ರಮುಖ ನಾಟಕ. ಅಂಗಳದಲ್ಲಿ ನಕ್ಷತ್ರ, ಲೇಖಕಿಯ ವೀಡಿಯೊ ಇವರ ...
READ MORE
ಹೊಸತು-2004- ಎಪ್ರಿಲ್
'ಹುಟ್ಟು ಗುಣ ಸುಟ್ಟು ಬಿಟ್ಟರೂ ಹೋಗದು' ಎಂಬ ಗಾದೆಯಲ್ಲಿನ ಒಂದು ಸತ್ಯಾಂಶ ಡಿ.ಎನ್.ಎ.ಯ ಮಹಾನ್ ಗುಣವನ್ನೂ ಜನ ಪದರು ಅದನ್ನು ಎಂದೋ ಗುರುತಿಸಿದ್ದನ್ನೂ ಸಾರಿ ಹೇಳುತ್ತದೆ. ಜೀವಿಗಳ ಗುಣ, ದೋಷ, ಸ್ವಭಾವ, ಲಕ್ಷಣಗಳನ್ನು ನಿರ್ಧರಿಸುವ ಮತ್ತು ವಂಶವಾಹಿಯಾಗಿ ಮುಂದಿನ ಪೀಳಿಗೆಗೆ ರವಾನಿಸುವ ಪ್ರಕೃತಿಯ ಅದ್ಭುತ ವಿನ್ಯಾಸ ಡಿ.ಎನ್.ಎ. ಬಗ್ಗೆ ಲೇಖನಗಳು. ಜೈವಿಕ ತಂತ್ರಜ್ಞಾನದ ಕ್ಲೋನಿಂಗ್ ವ್ಯವಸ್ಥೆಯಲ್ಲೂ ತದ್ರೂಪಿನೊ೦ದಿಗೆ ಗುಣಗಳೂ ಬೆನ್ನಟ್ಟಿ ಬರುವಂಥ ಪ್ರಕೃತಿಯ ಅದಮ್ಯ ವರ್ಣತಂತುಗಳ ಬಗ್ಗೆ ಮಾಹಿತಿಯಿದೆ.
