ಭಾಷಾಂತರ ಜಗತ್ತು

Author : ಪಾರ್ವತಿ ಜಿ. ಐತಾಳ್

Pages 132

₹ 145.00




Year of Publication: 2018
Published by: ಸೃಷ್ಠಿ ಪ್ರಕಾಶನ
Address: ಸೃಷ್ಠಿ ಪ್ರಕಾಶನ, #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9840998632

Synopsys

’ಭಾಷಾಂತರ ಜಗತ್ತು’ -  ಅನುವಾದಗಳ ಕುರಿತಾದ ಲೇಖನಗಳ ಸಂಗ್ರಹ. ಭಾಷಾಂತರ ಜಗತ್ತು ಬಹಳ ವಿಸ್ತಾರವಾಗಿ ಬೆಳೆದಿದೆ. ಜಾಗತೀಕರಣಗೊಂಡ ಜಗತ್ತಿನಲ್ಲಿ ವಿಭಿನ್ನ ಭಾಷೆಗಳನ್ನು ಮಾತನಾಡುವ ಜನರ ಸಂಪರ್ಕವು ಹೆಚ್ಚಾದಂತೆ ಭಾಷಾಂತರದ ಅಗತ್ಯ ಮತ್ತು ಮಹತ್ವಗಳ ಅರಿವು ಎಲ್ಲರಲ್ಲೂ ಆಗಿದ್ದು, ಸಾಹಿತ್ಯಗಳ ನಡುವೆಯೂ ನಡೆಯುತ್ತಿವೆ. ಆದ್ದರಿಂದ ಒಂದಕ್ಕಿಂತ ಹೆಚ್ಚು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿ ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನುವಾದಕರಿಗೆ ಇಂದು ಎಲ್ಲಿಲ್ಲದ ಬೇಡಿಕೆಯಿದೆ.

ಕನ್ನಡ, ಮಲಯಾಳಂ, ಇಂಗ್ಲೀಷ್, ಹಿಂದಿ ಮತ್ತು ತುಳು ಭಾಷೆಗಳಲ್ಲಿ ಹಿಡಿತ ಸಾಧಿಸಿರುವ ಡಾ.ಪಾರ್ವತಿ ಜಿ. ಐತಾಳ್ ಅವರು ಸ್ವತಂತ್ರವಾಗಿ 27 ಕೃತಿಗಳನ್ನು ರಚಿಸಿದ್ದಾರಲ್ಲದೆ, 35ಕ್ಕೂ ಹೆಚ್ಚಿನ ಭಾಷಾಂತರ ಕೃತಿಗಳನ್ನು ಬರೆದು ಉತ್ತಮ ಅನುವಾದಕಿ ಎನ್ನುವ ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನೀಡುವ ಗೌರವ ಪ್ರಶಸ್ತಿ ಪಡೆದಿದ್ದಾರೆ. ಪಾರ್ವತಿ ಜಿ.ಐತಾಳರು ತಮ್ಮ ಭಾಷಾಂತರದ ಅನುಭವಗಳನ್ನು ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳನ್ನು ನೀಡುವ ಮೂಲಕ ಆಸಕ್ತರೊಂದಿಗೆ ಹಂಚಿಕೊಂಡಿದ್ದಾರೆ. ಕಾಲೇಜು ಉಪನ್ಯಾಸಕರಾಗಿ ಏರ್ಪಡಿಸುವ ರಿಫ್ರೆಷರ್ ಕೋರ್ಸುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಷಾಂತರದ ವಿವಿಧ ಆಯಾಮಗಳ ಬಗ್ಗೆ ಚರ್ಚೆಗಳನ್ನು ನಡೆಸಿದ್ದಾರೆ. ಆ ಎಲ್ಲಾ ಪ್ರಬಂಧ, ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಭಾಷಾಂತರದ ಮೂಲಕ ವಿಶ್ವಸಾಹಿತ್ಯದೊಂದಿಗೆ ಸಂಪರ್ಕ ಕಲ್ಪಿಸಿ ವಿಶ್ವಮಾನವರಾಗ ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಯಿದು. 

About the Author

ಪಾರ್ವತಿ ಜಿ. ಐತಾಳ್
(23 July 1957)

ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ  ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...

READ MORE

Related Books