ರಂಗಭೂಮಿ ಮತ್ತು ಚಲನಚಿತ್ರ

Author : ಕೆ.ವಿ. ಅಕ್ಷರ

Pages 16

₹ 2.00




Year of Publication: 1980
Published by: ಅಕ್ಷರ ಪ್ರಕಾಶನ
Address: ಸಾಗರ -577401

Synopsys

`ರಂಗಭೂಮಿ ಮತ್ತು ಚಲನಚಿತ್ರ’ ಕೃತಿಯು ಪ್ರೊ. ಸತೀಶ್ ಬಹಾದುರ್ ಅವರ ರಂಗಭೂಮಿ ಮತ್ತು ಚಲನಚಿತ್ರ ಕುರಿತ ಲೇಖನಸಂಕಲನವಾಗಿದೆ. ಈ ಕೃತಿಯನ್ನು ಅಕ್ಷರ ಅವರು ಅನುವಾದಮಾಡಿರುತ್ತಾರೆ. ರಂಗಭೂಮಿ ಮತ್ತು ಚಲನಚಿತ್ರ-ಈ ಎರಡು ಮಾಧ್ಯಮಗಳನ್ನು ತಾತ್ವಿಕವಾಗಿ ಹೋಲಿಸುತ್ತ, ಈ ಹಿನ್ನೆಲೆಯಲ್ಲಿ ಚಲನಚಿತ್ರ ಮಾಧ್ಯಮದ ಚೌಕಟ್ಟನ್ನು ಗುರುತಿಸುವುದು ಈ ಲೇಖನದ ಉದ್ದೇಶ. ಚಲನಚಿತ್ರ ಮಾಧ್ಯಮ ಹುಟ್ಟಿ ಇನ್ನೂ ಎಂಭತ್ತು ವರ್ಷಗಳಾಗಿವೆ. 1895 ರಲ್ಲಿ ಮೊದಲ ಚಲನಚಿತ್ರ-ಪ್ರೀಮಿಯೇರ್ ಪ್ರದರ್ಶನ-ತೆರೆಕಂಡಿತು. 1927 ರಲ್ಲಿ ಚಲನಚಿತ್ರಕ್ಕೆ ಶಬ್ದ ಸೇರಿಕೊಂಡಿತು. ಆದರೆ ರಂಗಭೂಮಿಯ ಮಾಧ್ಯಮ ಬಹಳ ಪ್ರಾಚೀನವಾದದ್ದು. ಚಲನಚಿತ್ರ ಹುಟ್ಟುವಾಗಲೇ ರಂಗಭೂಮಿಯಲ್ಲಿ ಎಷ್ಟೋ ಸಿದ್ಧಾಂತಗಳು, ಪಠ್ಯ ಪರಂಪರೆಗಳು ಬಂದುಹೋಗಿದ್ದವು. ಉದಾಹರಣೆಗೆ, ಸಂಸ್ಕೃತಿಯ ಇತಿಹಾಸಚಕ್ರದಲ್ಲಿ ಬೆಳೆದು ಪ್ರೌಢವಾಗಿದ್ದ ಗ್ರೀಕ್, ಎಲಿಜಬೆತನ್ ಮತ್ತು ಸಂಸ್ಕೃತ ರಂಗಭೂಮಿಗಳನ್ನೇ ನೋಡಬಹುದು.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books